Top

ಪ್ರತಿಭಟನೆ ಅರ್ಥದಲ್ಲಿ ದಂಗೆ ಅಂದಿದ್ದು: ಕುಮಾರಸ್ವಾಮಿ ಸ್ಪಷ್ಟನೆ

ಪ್ರತಿಭಟನೆ ಅರ್ಥದಲ್ಲಿ ದಂಗೆ ಅಂದಿದ್ದು: ಕುಮಾರಸ್ವಾಮಿ ಸ್ಪಷ್ಟನೆ
X

ಚಿಕ್ಕಮಗಳೂರು: ನಾನು ಪ್ರತಿಭಟನೆಯ ಅರ್ಥದಲ್ಲಿ ದಂಗೆ ಎಂಬ ಶಬ್ಧ ಬಳಸಿದ್ದೇನೆ ಹೊರತು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ದಂಗೆ ಕುರಿತು ನನ್ನ ವಿರುದ್ಧ ರಾಜ್ಯ ಪಾಲರಿಗೆ ನೀಡಿರುವ ದೂರು ಸಂತೋಷ. ರಾಜ್ಯಪಾಲರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇ‌ನೆ. ನನ್ನ ದಂಗೆ ಹೇಳಿಕೆಯ ಅರ್ಥ ಪ್ರತಿಭಟನೆ ಎಂದು ಅವರಿಗೆ ಸ್ಪಷ್ಟಪಡಿಸುತ್ತೇನೆ ಎಂದರು.

ಯಡಿಯೂರಪ್ಪನವರ ಹಾಗೆ ಬೆಂಕಿ ಹಚ್ಚಿಸುವ ಹೇಳಿಕೆ ನೀಡಿಲ್ಲ. ಅವರು ಬೆಂಕಿ ಹಚ್ಚುವ ಹೇಳಿಕೆ ನೀಡಿದರೆ ಅದು ಪ್ರಜಾಪ್ರಭುತ್ವ. ನಾನು ಹೇಳಿದರೆ ಅದು ಪ್ರಜಾಪ್ರಭುತ್ವ ವಿರೋಧಿ. ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಇದೇ ವೇಳೆ ಹಾಸನದಲ್ಲಿ ಕರೆದಿರುವ ಶಾಸಕಾಂಗ್ ಪಕ್ಷದ ಸಭೆಯಲ್ಲಿ ನಾನು ಭಾಗಿಯಾಗುತ್ತೇನೆ. ಇಂದು ಸಂಜೆ ಹಾಸನದಲ್ಲಿ ವಾಸ್ತವ್ಯ ಹೂಡುತ್ತೇನೆ. ಹಾಸನದಲ್ಲಿ ನಡೆಯುವ ಶಾಸಕಾಂಗ ಸಭೆಗೆ ಯಾವುದೇ ವಿಶೇಷತೆ ಇಲ್ಲ. ಎಲ್ಲಾ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಬಾಂಬೆಗೆ ಹೋಗಿದ್ದಾರೆಂದು ಹೇಳುತ್ತಿದ್ದೀರುವವರು ಕೂಡ ಸಭೆಯಲ್ಲಿ ಭಾಗಿಯಾಗುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

Next Story

RELATED STORIES