ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಭರ್ಜರಿ ಪ್ರಚಾರ ಶುರು.!
ಬಿಜೆಪಿ ಈಗಿನಿಂದಲೇ ಲೋಕಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಶುರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಲೋಕಸಭೆ ಚುನಾವಣೆಗೆ ತಯಾರಿ ಭರ್ಜರಿ ಸಿದ್ದತೆ ನಡೆಸಿದ್ದಾರೆ.
ಈ ಹಿನ್ನಲೆಯಲ್ಲಿ ಅಭಿಯಾನಗಳನ್ನು ಅನೇಕ ಕಾರ್ಯಕ್ರಮದ ರೂಪದಲ್ಲಿ ಅನುಷ್ಟಾನಕ್ಕೆ ತರಲು, ರಾಜ್ಯ ಬಿಜೆಪಿ ನಿರ್ಧರಿಸಿದೆ. ಮೋದಿ ಸರ್ಕಾರದ ವೈಫಲ್ಯಗಳ ಮೇಲೆ ಕಾಂಗ್ರೆಸ್ ಮತಯಾಚನೆ ಮಾಡಿದರೆ, ನಮೋ ಸಾಧನೆಗಳೇ ಬಿಜೆಪಿ ಪಾಲಿಗೆ ಮತಬೇಟೆಯ ಸಾಧನಗಳಾಗಿವೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕೇಸರಿ ಪಾಳಯ ನಾನಾ ರೀತಿಯ ಪ್ರಚಾರ ತಂತ್ರಗಳಿಗೆ ಮೊರೆಹೋಗಿದೆ. ಕೆಲ ದಿನಗಳ ಹಿಂದೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಬಿಜೆಪಿ ಸೈನ್ಯಕ್ಕೆ ಗೆಲುವಿನ ರಣತಂತ್ರಗಳನ್ನು ಬೋಧಿಸಿ ಕಳಿಸಿದ್ದಾರೆ.
ತೃತೀಯ ರಂಗದ ಬಲ ಪ್ರದರ್ಶನಕ್ಕೆ ವೇದಿಕೆಯಾದ ಕರ್ನಾಟಕ ಅಮಿತ್ ಶಾ - ಮೋದಿ ಜೋಡಿಯ ಬಿಗ್ ಟಾರ್ಗೆಟ್. ಹೀಗಾಗಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ವಿಶೇಷ ತಯಾರಿ ಆರಂಭ ಆಗಿದೆ. 'ಅಜೇಯ ಭಾರತ ಅಟಲ್ ಬಿಜೆಪಿ' ಘೋಷ ವಾಕ್ಯದೊಂದಿಗೆ ಅಭಿಯಾನ ಆರಂಭಿಸಲು ಬಿಜೆಪಿ ಮುಂದಾಗಿದೆ.
ಇಂದಿನಿಂದಲೇ ಹಲವು ಕಾರ್ಯಕ್ರಮಗಳಿಗೆ ಬಿಜೆಪಿ ಚಾಲನೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿಯವರ ರಚನಾತ್ಮಕ ಸುಧಾರಣೆಗಳು ಹಾಗೂ ಸಾಮಾನ್ಯ ಪ್ರಜೆಗಳ ಮೇಲೆ ಅದರ ಪರಿಣಾಮಗಳು ವಿಷಯದ ಮೇಲೆ ವಿಚಾರ ಸಂಕಿರಣಗಳಿಗೆ ಇಂದಿನಿಂದ ಚಾಲನೆ ಸಿಗಲಿದೆ. ವಿಚಾರ ಸಂಕಿರಣಗಳ ಮೂಲಕ ಮೋದಿಯವರ ಸಾಧನೆಗಳನ್ನು ಪ್ರಚಾರ ಮಾಡಲಾಗುತ್ತದೆ
ಬಿಜೆಪಿ ಪ್ರಚಾರ ನಡೆಸಬೇಕೆಂದಿರುವ ಪ್ರಧಾನಿ ಮೋದಿ ಸರಕಾರದ ಸಾಧನೆಗಳು
- ಮೇಕ್ ಇನ್ ಇಂಡಿಯಾ
- ಸ್ಮಾರ್ಟ್ ಸಿಟಿ
- ಡಿಜಿಟಲ್ ಇಂಡಿಯಾ
- ಆಯುಷ್ಮಾನ ಭಾರತ
- ಸ್ವಚ್ಛ ಭಾರತ
- ನೀತಿ ಆಯೋಗ
- ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ಮಾನ
ಆಯುಷ್ಮಾನ ಭಾರತ, ಸ್ವಚ್ಭ ಭಾರತ, ಫಸಲ್ ಭಿಮಾ, ಮೇಕ್ ಇನ್ ಇಂಡಿಯಾ, ಸೇರಿದಂತೆ ಹಲವು ಜನಪ್ರಿಯ ಯೋಚನೆಗಳು ಬಿಜೆಪಿ ಪ್ರಚಾರಕ್ಕೆ ಫ್ಲಸ್ ಪಾಯಿಂಟ್ಸ್ ಆಗಿವೆ.
ಮೋದಿ ವೈಫಲ್ಯಗಳ ಮೇಲೆಯೇ ಕಾಂಗ್ರೆಸ್ ಮತ ಯಾಚನೆ
- ನೋಟ್ ಅಮಾನ್ಯೀಕರಣ
- ಜಿ.ಎಸ್.ಟಿ
- ಇಂಧನ ಬೆಲೆ ಏರಿಕೆ.
ಇನ್ನು ನೋಟ್ ಅಯಾನ್ಯೀಕರಣ, ಜಿ.ಎಸ್.ಟಿ, ಇಂಧನ ಬೆಲೆ ಏರಿಕೆಯಂತಹ ನಿರ್ಧಾರಗಳೇ ಮೋದಿ ಪಾಲಿನ ಮೈನಸ್ ಪಾಯಿಂಟ್ಸ್. ಮೈನಸ್ ಪಾಯಿಂಟ್ಸ್ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕವೇ ಚುನಾವಣೆ ಎದುರಿಸಲಿದೆ.
ಅಲ್ಲದೆ ಅಟಲ್ ಸ್ಮರಣಾರ್ಥ ಕಾವ್ಯಾಂಜಲಿ, ಕಾರ್ಯಂಜಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಅಟಲ್ ಕವಿತೆಗಳ ಕವಿಗೋಷ್ಠಿಯನ್ನು ಎಲ್ಲಾ ಜಿಲ್ಲಾ, ತಾಲ್ಲೂಕಾ ಕೇಂದ್ರದಲ್ಲಿ ಆಯೋಜಿಸಿ ಉದಯೋನ್ಮುಖ ಕವಿಗಳಿಗೆ ಅವಕಾಶ ಕಲ್ಪಿಸುವ ಹಾಗೂ ಅಟಲ್ ಕವಿತೆಗಳನ್ನು ಆಡಿಯೋ ಮುಖಾಂತರ ಕೇಳಿಸುವ ಕಾವ್ಯಾಂಜಲಿ ಮೊದಲ ಕಾರ್ಯಕ್ರಮ ಎರ್ಪಡಿಸಲಾಗುತ್ತದೆ.
ಅಟಲ್ ಜಿ ಗೆ ಅಂತ್ಯೋದಯದ ಬಗ್ಗೆ ಆಗ್ರಹವಿತ್ತು. ಆ ಹಿನ್ನಲೆಯಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಘೋಷವಾಕ್ಯದಡಿ ಕಾರ್ಯಾಂಜಲಿ ಹೆಸರಿನ ಕಾರ್ಯಕ್ರಮದವನ್ನು ರಾಜ್ಯದ ದಲಿತ ಕಾಲೋನಿ, ಸ್ಲಂ ಹಾಗು ಹಿಂದುಳಿದ ಪ್ರದೇಶಗಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡು ಆಯುಷ್ಮಾನ್ ಭಾರತ್ ವಿಮೆ ಮಾಡಿಸಿ, ಅದರ ಲಾಭ ಹೇಗೆ ಪಡೆಯಬೇಕು ಎಂದು ಅವರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ.
2016 ರಲ್ಲಿ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ಸ್ಮರಣಾರ್ಥ ಸೈನಿಕರ ಸ್ಮರಣೆಗಾಗಿ 'ಶೌರ್ಯ ದಿವಸ್' ಕಾರ್ಯಕ್ರಮ ಸೆ.29 ರಂದು ನಡೆಸಲಿದೆ. ಸೈನಿಕರನ್ನು ಅಭಿನಂದಿಸುವ ಕಾರ್ಯಕ್ರಮ ಇದಾಗಿದೆ. ಇದರ ಜೊತೆಗೆ ಅ.2 ರಿಂದ ಗಾಂಧೀಜಿಯವರ 150 ಜಯಂತಿ ಆರಂಭವಾಗಲಿದೆ.
ಇದನ್ನು ವಿಶೇಷವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ಲೊಕಸಭಾ ಕ್ಷೇತ್ರ,ವಿಧಾನಸಭಾ ವ್ಯಾಪ್ತಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಪ್ರತಿಮೆ ಅಕ್ಟೋಬ್ 31 ರಂದ ಅನಾವರಣಗೊಳ್ಳಲಿದೆ. ಅವರ ಜನ್ಮ ದಿನದಂದು. ಸಾಬರ್ ಮತಿ ನದಿ ತೀರದಲ್ಲಿ ಪ್ರತಿಮೆಯನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಅರ್ಪಣೆ ಮಾಡಲಿದ್ದಾರೆ.
ಅಂದು ಏಕತೆಗಾಗಿ ಓಟ ಕಾರ್ಯಕ್ರಮವನ್ನು ನಮ್ಮ ಯುವ ಮೋರ್ಚಾ ಹಮ್ಮಿಕೊಳ್ಳಲಿದೆ. ಇಂತಹ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ತಂತ್ರಗಾರಿಕೆ ಹೆಣೆದಿದೆ.
ವರದಿ : ಪವನ್ ಕುಮಾರ್, ಪೊಲಿಟಿಕಲ್ ಬ್ಯುರೋ, ಟಿವಿ5
- 2019 loksabha election Bjp Karnataka bjp karnataka loksabha election Bjp Lokasabha Campaign kannada news today Karnataka Bjp karnataka news today latest karnataka news loksabha election topnews tv5 kannada tv5 kannada live tv5 kannada news tv5 live ಕರ್ನಾಟಕ ಬಿಜೆಪಿ ಬಿಜೆಪಿ ಭರ್ಜರಿ ಸಿದ್ದತೆ ಲೋಕಸಭಾ ಚುನಾವಣೆಗ