Top

ಏಷ್ಯಾಕಪ್​: ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ

ಏಷ್ಯಾಕಪ್​: ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ
X

ಆಲ್​ರೌಂಡರ್ ರವೀಂದ್ರ ಜಡೇಜಾ ಮಾರಕ ದಾಳಿ ಹಾಗೂ ನಾಯಕ ರೋಹಿತ್ ಶರ್ಮ ಅವರ ಮಿಂಚಿನ ಆಟದಿಂದ ಭಾರತ ತಂಡ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್​-4ನಲ್ಲಿ ಬಾಂಗ್ಲಾ ವಿರುದ್ಧ 7 ವಿಕೆಟ್​ಗಳ ಮಹೋನ್ನತ ಜಯ ದಾಖಲಿಸಿದೆ.

ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 49.1 ಓವರ್ ಗಳಲ್ಲಿ 173 ರನ್​ಗೆ ಆಲೌಟಾಯಿತು. ಸಾಧಾರಣ ಗುರಿ ಬೆಂಬತ್ತಿದ ಭಾರತ ತಂಡ 36.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್​ಗೆ 61 ರನ್ ಪೇರಿಸಿ ಉತ್ತಮ ಅರಂಭ ಒದಗಿಸಿದರು. ಧವನ್ (40) ನಂತರ ಬಂದ ಅಂಬಟಿ ರಾಯುಡು (13) ಹೆಚ್ಚು ಹೊತ್ತು ನಿಲ್ಲಲಿಲ್ಲ. ಧೋನಿ 37 ಎಸೆತಗಳಲ್ಲಿ 3 ಬೌಂಡರಿ ಸೇರಿದ 33 ರನ್ ಬಾರಿಸಿ ಕೊನೆಯಲ್ಲಿ ಔಟಾದರು. ರೋಹಿತ್ ಶರ್ಮ 104 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 83 ರನ್ ಬಾರಿಸಿ ಔಟಾಗದೇ ಉಳಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 65 ರನ ಗೆ 5 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಕೊನೆಯಲ್ಲಿ ಮಹೆದಿ ಹಸನ್ ಮಿರ್ಜ್ (42) ಮತ್ತು ಮುರ್ಶಫೆ ಮೊರ್ತಜಾ (26) ತಂಡವನ್ನು ಕಳಪೆ ಮೊತ್ತದ ಭೀತಿಯಿಂದ ಪಾರು ಮಾಡಿದರು.

ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ತಲಾ 3 ವಿಕೆಟ್ ಗಳಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಬಾಂಗ್ಲಾದೇಶ 49.1 ಓವರ್ 173 (ಮಹೆದಿ 42, ಮೊರ್ತಜಾ 26, ಮೊಹಮದುಲ್ಲಾ 25, ಜಡೆಜಾ 29/4, ಬುಮ್ರಾ 37/3, ಭುವನೇಶ್ವರ 32/3).
  • ಭಾರತ 36.2 ಓವರ್ 3 ವಿಕೆಟ್ 174 (ರೋಹಿತ್ ಅಜೇಯ 83, ಧವನ್ 40, ಧೋನಿ 33, ಮೊರ್ತಜಾ 30/1)
  • ಪಂದ್ಯಶ್ರೇಷ್ಠ: ರವೀಂದ್ರ ಜಡೇಜಾ

Next Story

RELATED STORIES