Top

ಬಿಜೆಪಿಗೆ ಬರ್ತೀವಿ ಎನ್ನುವವರನ್ನು ಬೇಡ ಎನ್ನೋಕೆ ಬರೋಲ್ಲ : ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಇಂದು ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ದಂಗೆ ಹೇಳಿಕೆ ವಿಚಾರವನ್ನು ಖಂಡಿಸಿ, ಬಿಜೆಪಿ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಕೆ ಎಸ್‌ ಈಶ್ವರಪ್ಪ, ಮುಖ್ಯಮಂತ್ರಿ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿಲ್ಲ, ಬದಲಾಗಿ ಗುಂಡಾ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.

ಮುಖ್ಯಮಂತ್ರಿಗಳ ನಡೆಯನ್ನು ಗಮನಿಸಿದರೇ, ರಾಜ್ಯ ಗುಂಡಾ ರಾಜ್ಯವಾಗುವತ್ತ ಕಾಲಿಟ್ಟಂತೆ ಸಾಗಿದೆ. ನಿಮ್ಮ ಶಾಸಕರ ರಕ್ಷಣೆ ಮಾಡುವ ಯೋಗ್ಯತೆ ಇಲ್ಲದ ನೀವು, ರಾಜ್ಯದ ಜನರ ರಕ್ಷಣೆ ಮಾಡೋಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಇನ್ನೂ ದಂಗೆ ಹೇಳಿ ಅಂತ ಹೇಳಿದ್ರೆ ಅರ್ಥ ಏನು..? ಗೃಹ ಇಲಾಖೆ ಏನ್ ಮಾಡ್ತಾ ಇದೆ. ಪರಮೇಶ್ವರ್ ರವರು ಏನ್ ಮಾಡ್ತ ಇದಾರೆ ಎಂದು ಖಾರವಾಗೇ ಪ್ರಶ್ನಿಸಿದರು.

ಇದೇ ವೇಳೆ, ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ, ನನ್ನ ಹತ್ತಿರ ಮೂರು ಶಾಸಕರು ಬಂದಿದ್ದಾರೆ. ಮೂರು ಶಾಸಕರು ಬಿಜೆಪಿಗೆ ಸೇರುತ್ತೇವೆ ಎನ್ನುತ್ತಿದ್ದಾರೆ. ಬರ್ತೀವಿ ಎನ್ನುವವರನ್ನು ಬೇಡ ಎನ್ನೋಕೆ ಬರೋದಿಲ್ಲ ಎಂದು ಹೊಸ ಬಾಂಬ್‌ ಸಿಡಿಸಿದರು.

ಮುಖ್ಯಮಂತ್ರಿಗಳ ಹೇಳಿಕಯ ಬಗ್ಗೆ ರಾಜ್ಯಪಾಲರು ಗಮನಹರಿಸಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಕಿಡಿಕಾರಿದ ಈಶ್ವರಪ್ಪ, ಸಿದ್ದರಾಮಯ್ಯ ನಾಟಕದ ಸೂತ್ರಧಾರ. ಕುತಂತ್ರ ರಾಜಕಾರಣ ಮಾಡ್ತಾ ಇದಾರೆ. ಕೆಟ್ಟ ಹೆಸರು ತರುವ ಪ್ರಯತ್ನ ಅವರದ್ದು, ಇಂತಹ ಕೆಟ್ಡ ರಾಜಕಾರಣ ಯಾರೂ ಮಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Next Story

RELATED STORIES