Top

ನೀರಿಗಾಗಿ ಹಾಹಾಕಾರ, ಸಮಸ್ಯೆಗೆ ತೋರುವರೇ ಅಧಿಕಾರಿಗಳು ಪರಿಹಾರ.?

ನೀರಿಗಾಗಿ ಹಾಹಾಕಾರ, ಸಮಸ್ಯೆಗೆ ತೋರುವರೇ ಅಧಿಕಾರಿಗಳು ಪರಿಹಾರ.?
X

ಯಾದಗಿರಿ : ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮುಂಗಾರು ಕೈಕೊಟ್ಟ ಕಾರಣ ಜನ ನೀರಿಗಾಗಿ ಪರಿತಪ್ಪಿಸುವ ಸ್ಥಿತಿ ಉಂಟಾಗಿದೆ. ಮುಂಗಾರು ಮುಗಿದು ಹಿಂಗಾರು ಪ್ರಾರಂಭವಾದರೂ ಇಲ್ಲಿವರಗೂ ಮಳೆರಾಯ ಕೃಪೆ ತೋರಿಲ್ಲ. ಮಳೆ ಇಲ್ಲದ ಕಾರಣ ಕುಡಿಯುವ ನೀರಿಗೂ ಪರಿತಪ್ಪಿಸಿ ಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಒಂದು ಬಿಂದಿಗೆ ನೀರಿಗೂ ಕಿಲೋಮೀಟರ್ಗಟ್ಟಲೆ ನಡೆಯಬೇಕಾದ ದುಸ್ಥಿತಿ ಎದುರಾಗಿದೆ.

ಹೌದು ಹೈದ್ರಾಬಾದ್ ಕರ್ನಾಟಕ ಬಿಸಿಲನಾಡು ಗಿರಿಗಳ ಬೀಡು ಅಂತಲೆ ಕರೆಯೋ ಯಾದಗಿರಿ ಜಿಲ್ಲೆಗೆ ಬರ ಬೆಂಬಿಡದೆ ಕಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಮಳೆರಾಯನ ಅವಕೃಪೆಗೆ ತುತ್ತಾದ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇದೀಗ ಹನಿ ನೀರಿಗೂ ಪರಿತಪ್ಪಿಸುವಂತಾಗಿದೆ. ಇನ್ನೂ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಪುಟ್ಟ ಗ್ರಾಮ ಪುಟಪಾಕ.

ಪ್ರಸ್ತುತ ಮಳೆಗಾಲವಿದ್ದರೂ ಈ ಗ್ರಾಮದಲ್ಲಿ ಕುಡಿಯಲು ನೀರಿಲ್ಲ. ಕಳೆದ 15 ದಿನಗಳಿಂದ ನಲ್ಲಿಗಳಲ್ಲಿ ನೀರು ಬಾರದೇ ಜನ ಜಾನುವಾರುಗಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುಟಪಾಕ ಗ್ರಾಮ 9 ಜನ ಸದಸ್ಯ ಬಲ ಹೊಂದಿರುವ ಗ್ರಾಮ‌ ಪಂಚಾಯ್ತಿ ಕೇಂದ್ರವಾದರೂ ಯಾವುದೇ ಸೌಲಭ್ಯಗಳು ಸಾರ್ವಜನಿಕರಿಗೆ ದೊರೆಯುತ್ತಿಲ್ಲ. ಇಗಷ್ಟೇ ಮುಂಗಾರು ಮುಗಿದು ಹಿಂಗಾರು ಪ್ರಾರಂಭವಾಗಿದೆ. ಆದರೂ ಗ್ರಾಮದಲ್ಲಿ ನೀರಿರಿಗಾಗಿ ಪರಿತಪ್ಪಿಸುವಂತಾಗಿದೆ.

ಇನ್ನೂ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ ಒಂದೆಡೆ ರೈತರು ಕಂಗಾಲಾದರೆ, ಇದೀಗ ಗ್ರಾಮದಲ್ಲಿ ಕುಡಿಯುವ ನೀರಿಗೂ ಬರ ಆರಂಭವಾಗಿದೆ. ಕಳೆದ 15 ದಿನಗಳಿಂದ ಗ್ರಾಮದ ನಲ್ಲಿಗಳಲ್ಲಿ ಕುಡಿಯುವ ನೀರು ಬಾರದೇ ಇರುವುದರಿಂದ ಗ್ರಾಮಸ್ತರು 2 ಕಿ.ಮೀ.ದೂರ ಹೋಗಿ ಬಾವಿಗಳಿಂದ ಗ್ರಾಮಸ್ಥರು ನೀರನ್ನು ಹೊತ್ತು ತರುವಂತ ಸ್ಥಿತಿ ಬಂದೊದಗಿದೆ.

ಇನ್ನೂ ಗ್ರಾಮದಲ್ಲಿ ಬೋರವೆಲ್ ನೀರಿನ ಟ್ಯಾಂಕ್ ಇದ್ದರೂ ಪ್ರಯೋಜನೆ ಆಗಿಲ್ಲ. ಕೊಳವೇ ಬಾವಿಯಿಂದ ನೀರಿನ ಟ್ಯಾಂಕ್ ಗೆ ಪೈಪ್ ಲೇನ್ ಇಲ್ಲದೇ ವ್ಯರ್ಥವಾಗಿದೆ. ಹೊಸ ಪೈಪ್ ಲೈನ್ ಅಳವಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಪುಟಪಾಕ ಗ್ರಾಮದಲ್ಲಿ 8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ. ಸರಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಗ್ರಾಮ. ಇದೀಗ ಮಳೆಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿಯ ನಿರ್ಮಾಣವಾಗಿದೆ.

ಒಟ್ಟಿನ್ನಲಿ ಇನ್ನಾದ್ರು ಸಂಭಂದ ಪಟ್ಟ ಅಧಿಕಾರಿಗಳು ಗ್ರಾಮಸ್ಥರಿಗೆ ಪೈಪ್ ಲೈನ್ ಅಳವಡಿಸಿ ನೀರು ಒದಗಿಸುಲು ಮುಂದಾಗತ್ತಾ ಎಂದು ಕಾದು ನೋಡಬೇಕು.

ವರದಿ : ಬಾಳಗೌಡ ಪಾಟೀಲ, ಟಿವಿ5 ಯಾದಗಿರಿ

Next Story

RELATED STORIES