ಬಾಲಿವುಡ್ಗೆ ವಿರಾಟ್ ಕೊಹ್ಲಿ ಎಂಟ್ರಿ..!?

X
TV5 Kannada21 Sep 2018 5:36 AM GMT
ರನ್ ಮಷಿನ್ ವಿರಾಟ್ ಕೊಹ್ಲಿ, ಮೈದಾನ ಬಿಟ್ಟು ಬಾಲಿವುಡ್ ಅಂಗಳಕ್ಕೆ ಇಳಿತಾರಾ..?ಸಿನಿಮಾದಲ್ಲಿ ನಟಿಸೋಕ್ಕೆ ಕೊಹ್ಲಿ ರೆಡಿಯಾಗಿದ್ದಾರಾ..? ಹೀಗೊಂದು ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಕೇಳಿಬರ್ತಿದೆ. ಇದಕ್ಕೆ ಕಾರಣ ವಿರಾಟ್ ಕೋಹ್ಲಿಯ ಪೋಸ್ಟರ್ ಒಂದು ರಿಲೀಸ್ ಆಗಿದೆ.
ವಿರಾಟ್ ಕೊಹ್ಲಿ ತಮ್ಮ ಇನ್ಟಾಗ್ರಾಮ್ನಲ್ಲಿ ಪೋಸ್ಟರ್ ಒಂದನ್ನ ಹಾಕಿದ್ದು, 10 ವರ್ಷಗಳ ನಂತರ ಮತ್ತೆ ಪ್ರವೇಶ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದ ವಿರಾಟ್, ಬಾಲಿವುಡ್ ಮೂವಿಯಲ್ಲಿ ನಟಿಸೋಕ್ಕೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಹುಟ್ಟುಹಾಕಿದ್ದಾರೆ.
Trailer The Movie ಅನ್ನೋ ಫಸ್ಟ್ ಲುಕ್ ಜೊತೆ ಕೊಹ್ಲಿ ಟ್ವೀಟ್ ಮಾಡಿದ್ದು, 10 ವರ್ಷದ ನಂತ್ರ ಮತ್ತೊಂದು ಡೆಬ್ಯೂಟ್ ಅಂತಾ ಹೇಳಿದ್ದಾರೆ. ಇದು ಕಿರುಚಿತ್ರಾನಾ ಇಲ್ಲಾ ಜಾಹೀರಾತಾ ಎಂದು ಕಾದುನೋಡಬೇಕಿದೆ.
Next Story