ಮುಂಬೈ ವಿರುದ್ಧ ಮುಗ್ಗರಿಸಿದ ಕರ್ನಾಟಕ

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಮುಂಬೈ ವಿರುದ್ಧ 88 ರನ್ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ವಿನಯ್ ಪಡೆ ಸತತ ಎರಡನೇ ಸೋಲುಗಳನ್ನ ಕಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ ಓವರ್ನಲ್ಲಿ 5 ವಿಕೆಟ್ ನಷ್ಟ್ಕಕೆ 362 ರನ್ ಗಳಿಸಿತು.
ಆರಂಭಿಕ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ 148, ಶ್ರೇಯಸ್ ಅಯ್ಯರ್ 110 ರನ್ಗಳ ನೆರವಿನಿಂದ ಬೃಹತ್ ಮೊತ್ತೆ ಪೇರಿಸಲು ನೆರವಾಯಿತು.
ಮತ್ತೊರ್ವ ಆರಂಭಿಕ ಬ್ಯಾಟ್ಸ್ ಮನ್ ಪೃಥ್ವ ಶಾ 60, ಸುರ್ಯ 2, ಶವಂ ದುಬೆ 23 ರನ್ ಗಳಿಸಿದ್ರು.
ಕರ್ನಾಟಕ ಪರ ವಿನಯ್ ಕುಮಾರ್, ಮಿಥುನ್, ಸ್ಟುವರ್ಟ್ ಬಿನ್ನಿ ಮತ್ತು ಗೌತಮ್ ಕೆ. ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನತ್ತಿದ ಕರ್ನಾಟಕ ಉತ್ತಮ ಆರಂಭ ಕೊಡುವಲ್ಲಿ ಎಡವಿತು. ಸಮರ್ಥ್ 20, ಕರುಣ್ ನಾಯರ್ 31, ಶ್ರೇಯಸ್ ಗೋಪಾಲ್ 38, ವಿನಯ್ ಕುಮಾರ್ 36 ರನ್ಗಳಿಸಿದ್ದು ಬಿಟ್ಟರೇ ತಂಡದ ಯಾವ ಬ್ಯಾಟ್ಸ್ ಮನ್ಗಳು 20 ರನ್ಗಳ ಗಡಿ ದಾಟಲಿಲ್ಲ.
ಅಂತಿಮವಾಗಿ ಕರ್ನಾಟಕ ತಂಡ 45 ಓವರ್ಗಳಲ್ಲಿ 274 ರನ್ ಗಳಿಸಿ ಆಲೌಟ್ ಆಯಿತು. ಮುಂಬೈ ಪರ ಶಾಮ್ಸ್ ಮುಲಾನಿ 4 ವಿಕೆಟ್ ಪಡೆದು ಮಿಂಚಿದ್ರು.
- breaking news kannada news kannada news today karnataka news today Karnataka winning team latest karnataka news Maharashtra Manish Pandey topnews tv5 kannada tv5 kannada live tv5 live tv5kannada news Veteran cricketer Vinay Kumar veteran left-arm pacer Sreenath Aravind Vijay Hazare One-Day Tournament Vijay Hazare Trophy 2018 Vijay Hazare Trophy Elite Group A game Vinay Kumar