ಮಾಧ್ಯಮಗಳ ಎದುರೇ ಎನ್ಕೌಂಟರ್: ವೀಡಿಯೋ ವೈರಲ್

X
TV5 Kannada21 Sep 2018 7:46 AM GMT
ಅಲಿಘರ್: ಉತ್ತರಪ್ರದೇಶದ ಅಲಿಘರ್ ಜಿಲ್ಲೆಯಲ್ಲಿ ಮಾಧ್ಯಮದ ಎದುರೇ ಲೈವ್ ಎನಕೌಂಟರ್ ಮಾಡಲಾಗಿದ್ದು, ಇಬ್ಬರು ಕೊಲೆಗಡುಕರಿಗೆ ಗುಂಡಿಕ್ಕಲಾಗಿದೆ.
ಎನ್ಕೌಂಟರ್ ಮಾಡಲು ಮೊದಲೇ ಸಜ್ಜಾಗಿದ್ದ ಪೊಲೀಸರು, ಅದನ್ನು ಚಿತ್ರೀಕರಿಸಲು ಮಾಧ್ಯಮದವರನ್ನು ಆಮಂತ್ರಿಸಿತ್ತು. ಮಾಧ್ಯಮದವರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ, ರಾಷ್ಟ್ರೀಯ ಮಾಧ್ಯಮಗಳು ಸ್ಥಳಕ್ಕೆ ಧಾವಿಸಿದವು.
ಸ್ಥಳದಲ್ಲಿ ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್, ಪೊಲೀಸರು ಇದ್ದು, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ, ತಯಾರಾಗಿದ್ದರು. ಕ್ರಿಮಿನಲ್ಗಳ ಮೇಲೆ ಗುಂಡು ಹಾರಿಸುವ ಮುನ್ನ 34 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಇದಾದ ನಂತರ ಇಬ್ಬರು ಕ್ರಿಮಿನಲ್ಗಳನ್ನ ಮಾಧ್ಯಮದ ಎದುರೇ ಗುಂಡಿಕ್ಕಿದ್ದು, ಕ್ರಿಮಿನಲ್ಗಳು ಇಬ್ಬರು ಸಾಧುಗಳು ಸೇರಿ 6 ಮಂದಿಯನ್ನ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು.
Next Story