Top

ಹಾವು ವರ್ಸಸ್ ಬೆಕ್ಕು : ಇಬ್ಬರ ನಡುವಿನ ಫೈಟ್‌ನಲ್ಲಿ ಗೆದ್ದಿದ್ಯಾರು.?

ಹಾವು ವರ್ಸಸ್ ಬೆಕ್ಕು : ಇಬ್ಬರ ನಡುವಿನ ಫೈಟ್‌ನಲ್ಲಿ ಗೆದ್ದಿದ್ಯಾರು.?
X

ಕೊಪ್ಪಳ : ಹಾವು-ಮಂಗೂಸಿ ಈ ಹಿಂದಿನಿಂದಲೂ ಬದ್ದ ವೈರಿಗಳೆಂದು ಬಿಂಬಿಸಲಾಗಿದೆ. ಈ ಕುರಿತು ಅನೇಕ ಕತೆಗಳು ಸಹ ಇದ್ದಾವೆ.

ಆ ಕತೆಗಳನ್ನೆಲ್ಲಾ ಹಾಡಿನ ರೂಪದಲ್ಲಿ ನೀವು ನೋಡಿರುತ್ತೀರಿ. ಕೇಳಿ ಏನು ಅಂತ ತಿಳಿದುಕೊಂಡಿರುತ್ತೀರಿ. ಮಗುವನ್ನು ಕಚ್ಚಲು ಬಂದ ಹಾವನ್ನು ರಕ್ಷಿಸಿದ ಮಂಗೂಸಿಯನ್ನೇ ತಾಯಿ ಕೊಂದ ಬಗ್ಗೆ ಮರುಕ ಪಟ್ಟಿರುತ್ತೀರಿ.

ಆದರೇ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ದುಂಡಗಿ ಗ್ರಾಮದಲ್ಲಿ, ಇದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ.

ದುಂಡಗಿ ಗ್ರಾಮದಲ್ಲಿ ಮನೆಗೆ ನುಗ್ಗಿದ ಹಾವೊಂದನ್ನು ಬೆಕ್ಕು ಹುಡುಕಿ ಕೊಂದು ಹಾಕಿದ ಅಪರೂಪದ ಘಟನೆ ನಡೆದಿದೆ. ಈ ಘಟನೆ ಕಂಡು ಮನೆ ಮಾಲಿಕರು ಸ್ವಲ್ಪ ಕಾಲ ಬೆಚ್ಚಿಬಿದ್ದಿದ್ರು.

https://www.youtube.com/watch?v=FACZV3wjUpk

ಇನ್ನು ಮನೆಮಾಲಿಕರಿಗೆ ಗೊತ್ತಿಲ್ಲದೆ ಹಾವು ಮನೆಗೆ ನುಗ್ಗಿತ್ತು. ಆದ್ರೆ ಇದನ್ನು ಗಮನಿಸಿದ ಬೆಕ್ಕು ಏಕಾಏಕಿ ಮನೆಗೆ ನುಗ್ಗಿ ಹಾವನ್ನು ಮನೆಯಿಂದ ಹೊರಗಡೆ ಎಳೆದು ತಂದು ಕೊಂದು ಹಾಕಿದೆ.

ಸುಮಾರು 15 ನಿಮಿಷಗಳ ಕಾಲ ಬೆಕ್ಕು-ಹಾವಿನ ನಡುವೆ ಕಾದಾಟ ನಡೆದಿದ್ದು, ಕೊನೆಯಲ್ಲಿ ಬೆಕ್ಕು ಹಾವನ್ನು ಕಚ್ಚಿ ಕಚ್ಚಿ ಕೊಂದು ಹಾಕಿದೆ. ಇದ್ರಿಂದ ಮನೆಮಾಲಿಕರು ನಿಟ್ಟುಸಿರು ಬಿಟ್ಟಿದ್ದು, ಶಬ್ಬಾಸ್ ಹೇಳಿದ್ದಾರೆ.

ಈ ಎಲ್ಲಾ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಮನೆಯ ಮಾಲೀಕ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪರಿಣಾಮ, ಬೆಕ್ಕು-ಹಾವಿನ ಕಾದಾಟದ ದೃಶ್ಯಾವಳಿ ವೈರಲ್ ಆಗಿದೆ.

ವರದಿ : ನಾಗರಾಜ್ ವೈ, ಟಿವಿ5 ಕೊಪ್ಪಳ

Next Story

RELATED STORIES