Top

ಐದು ಭಾಷೆಗಳಲ್ಲಿ ಶುರುವಾಗಲಿದೆ ರಾಕಿಂಗ್‌ ಸ್ಟಾರ್‌ ‘ಕೆಜಿಎಫ್‌’ ದರ್ಬಾರ್.!

ಐದು ಭಾಷೆಗಳಲ್ಲಿ ಶುರುವಾಗಲಿದೆ ರಾಕಿಂಗ್‌ ಸ್ಟಾರ್‌ ‘ಕೆಜಿಎಫ್‌’ ದರ್ಬಾರ್.!
X

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದ ಆ ಬ್ರೇಕಿಂಗ್ ನ್ಯೂಸ್​ ಸಿಕ್ಕಿದೆ.. ಕೆಜಿಎಫ್​ ಗ್ಯಾಂಗ್​ಸ್ಟರ್ ರಾಕಿ ಆರ್ಭಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.. ಒನ್​​ಲೈನ್​ ಸ್ಟೋರಿ ಕೇಳಿ ಫ್ಯಾನ್ಸ್​​ ಥ್ರಿಲ್ಲಾಗಿದ್ದು, ಸಿನಿಮಾ ಮೇಲಿನ ಕುತೂಹಲ ಮತ್ತೊಂದು ಹಂತಕ್ಕೆ ತಲುಪಿದೆ.. ರಾಕಿ ಎಂಟ್ರಿಗೆ ಆ ಮುಹೂರ್ತ ಫಿಕ್ಸ್ ಮಾಡಿದ್ಯಾರು..? ಕೆಜಿಎಫ್ ಕಿಲಾಡಿಯ ಖದರ್ ಹೇಗಿರುತ್ತೆ..? ಕೆಜಿಎಫ್ ಸ್ಯಾಂಡಲ್​ವುಡ್​ನ ಗೇಮ್​ ಚೇಂಜರ್ ಆಗುತ್ತಾ..? ಅನ್ನುವ ಬಗ್ಗೆ ಡಿಟೆಲ್ಸ್‌ ಮುಂದೆ ಓದಿ...

ಕೆಜೆಎಫ್‌ ಅಕ್ಟೋಬರ್ 14ಕ್ಕೆ ಟ್ರೈಲರ್.. ನವೆಂಬರ್ 16ಕ್ಕೆ ಸಿನಿಮಾ

ರಿಲೀಸ್​​​ಗೂ ಮೊದ್ಲೇ ಲೀಕ್ ಆಯ್ತು ಕೆಜಿಎಫ್ ಕಥೆ..!

ಯೆಸ್.. ಇದೊಂದು ಅಪ್​ಡೇಟ್​ಗೋಸ್ಕರ ರಾಕಿಂಗ್ ಸ್ಟಾರ್ ಫ್ಯಾನ್ಸ್​​ ಚಾತಕ ಪಕ್ಷಿಗಳಂತೆ ಕಾಯ್ತಿದ್ರು. ಕೆಜಿಎಫ್ ರಾಕಿ ಖದರ್​ ಪರಿಚಯಿಸೋ​​ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೆ..? ಬಾಕ್ಸಾಫೀಸ್​ನಲ್ಲಿ ಕೆಜಿಎಫ್​ ರಾಕಿ ದರ್ಬಾರ್ ಯಾವಾಗ ಶುರುವಾಗುತ್ತೆ..? ಅನ್ನೋ ಮಿಲಿಯನ್​​ ಡಾಲರ್ ಪ್ರಶ್ನೆಗೆ ಸಿಂಗಲ್ ಟ್ವೀಟ್​ನಲ್ಲಿ ಉತ್ತರ ಕೊಟ್ಟಿದೆ ಕೆಜಿಎಫ್​​​ ಟೀಮ್.. ಅಕ್ಟೋಬರ್ 14ಕ್ಕೆ ಆಕ್ಷನ್ ಪ್ಯಾಕ್ಡ್​​​​ ಟ್ರೈಲರ್ ರಿವೀಲ್ ಆಗ್ತಿದ್ದು, ನವೆಂಬರ್ 16ಕ್ಕೆ ಸಾವಿರಾರು ಸ್ಕ್ರೀನ್​ಗಳಲ್ಲಿ ಕೆಜಿಎಫ್ ರಾಕಿ ಆರ್ಭಟ ಶುರುವಾಗಲಿದೆ..

ಕಥೆ ಬಗ್ಗೆ ಕೆಜಿಎಫ್ ಟೀಂ ಇಲ್ಲಿವರೆಗೆ ಯಾವ್ದೆ ಸುಳಿವು ಬಿಟ್ಟುಕೊಟ್ಟಿರಲಿಲ್ಲ.. ಆದ್ರೆ, ಧೂಳು ತುಂಬಿದ ಒಂದೊಂದು ಮೇಕಿಂಗ್ ಸ್ಟಿಲ್ ಒಂದೊಂದು ಕಥೆ ಹೇಳ್ತಿತ್ತು.. ಯಶ್ ಬರ್ತ್​ಡೇಗೆ ಬಂದ ಸಣ್ಣ ಟೀಸರ್​ನಲ್ಲೂ ಕಥೆಯ ವಾಸನೆ ಸಿಕ್ಕಿರಲಿಲ್ಲ..ಕೆಜಿಎಫ್​ ಸಿನಿಮಾ ಕಥೆ ಏನು..? ರಾಕಿಂಗ್ ಸ್ಟಾರ್ ಪಾತ್ರ ಏನು..? ಅನ್ನೋದ್ರ ಬಗ್ಗೆ ಇಲ್ಲಿವರೆಗೂ ತಲೆಗೊಂದು ಮಾತಾಡ್ತಿದ್ರು.. ಕೆಲವರು ಇದು ಕೆಜಿಎಫ್​ ರೌಡಿ ಒಬ್ಬನ ಲೈಫ್​​ ಸ್ಟೋರಿ ಅಂತಿದ್ರು.. ಮತ್ತೆ ಕೆಲವರು ಚಿನ್ನದ ಗಣಿ ಕಾರ್ಮಿಕರ ನಾಯಕನ ಕಥೆ ಅಂತಿದ್ರು..

ಬಂಗಾರದ ಹಿಂದೆ ಬಿದ್ದಿದ್ದಾನಾ ಗ್ಯಾಂಗ್​ಸ್ಟರ್ ರಾಕಿ..?

ಭಯದ ಹುಟ್ಟು ಸಾವಿಗೆ ರಾಕಿಂಗ್ ಸ್ಟಾರ್ ನಾಂದಿ..!

ಫೈನಲಿ ಕೆಜಿಎಫ್​​ ಸ್ಟೋರಿಲೈನ್​ ಏನು ಅನ್ನೋದನ್ನ ಡೈರೆಕ್ಟರ್ ಪ್ರಶಾಂತ್ ನೀಲ್ ರಿವೀಲ್ ಮಾಡಿದ್ದಾರೆ.. ಇದು ಕಾರ್ಮಿಕ ನಾಯಕನ ಕಥೆಯಲ್ಲ.. ಕೆಜಿಎಫ್​ ರೌಡಿ ಕಥೆಯೂ ಅಲ್ಲ.. ಅದಕ್ಕಿಂತ ಮೇಲೆ.. ಯೆಸ್​.. ಕೆಜಿಎಫ್​​ 70ರ ದಶಕದ ರಾಕಿ ಅನ್ನೋ ಗ್ಯಾಂಗ್​ಸ್ಟರ್ ಕಥೆ..

1978ರಲ್ಲಿ ಜಾಗತಿಕವಾಗಿ ಅಮೇರಿಕಾ ಮತ್ತು ಸೋವಿಯತ್ ರಷ್ಯಾ ನಡುವೆ ಕೋಲ್ಡ್​ ವಾರ್ ನಡೀತಿತ್ತು.. ಆ ಯುದ್ಧ ಶುರುವಾಗಿದ್ದೇ ಬಂಗಾರಕ್ಕಾಗಿ.. ಆಗ ಬಂಗಾರದ ಬೆಲೆ ಗಗನಕ್ಕೇರಿತ್ತು.. ಅಂತಹ ಸಂದರ್ಭದಲ್ಲಿ ಕೋಲಾರದಲ್ಲಿ ಕೊಲೆಗಳು, ಕಾದಾಟಗಳು ನಡೆಯಿತು, ಆ ಘಟನೆಯಲ್ಲಿ ಎಲ್ಲರ ಕಣ್ಣಿಗೆ ಕಂಡ ರಾಕಿ ಯಾರು..? ಅನ್ನೋದ್ರ ಹಿನ್ನೆಲೆಯಲ್ಲಿ ಈ ಕಾಲ್ಪನಿಕ ಕಥೆ ಹೆಣೆದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.. ರಾಕಿಂಗ್ ಸ್ಟಾರ್ ಯಶ್​​ ಅಂಡರ್​ವರ್ಲ್ಡ್ ಡಾನ್​ ಅವತಾರದಲ್ಲಿ ದರ್ಬಾರ್ ಮಾಡಲಿದ್ದಾರೆ..

ಚಿನ್ನದ ಗಣಿಯಲ್ಲಿ ‘ರಾಕಿ’ ನೆತ್ತರು ಹರಿಸೋದೇಕೆ..?

ಕೆಜಿಎಫ್ ಗ್ಯಾಂಗ್​ಸ್ಟರ್ ರಾಕಿ ತಾಯಿಗೆ ತಕ್ಕ ಮಗ..!

ಒಬ್ಬನಿಗೆ ಅಮೂಲ್ಯವಾದ ಚಿನ್ನ ಸಿಕ್ರೆ, ಅವನ ದುರಾಸೆಯಿಂದ ಇಡೀ ವ್ಯವಸ್ಥೆಯಲ್ಲೇ ಏನೆಲ್ಲಾ ಅಲ್ಲೋಲ ಕಲ್ಲೋಲ ಆಗತ್ತೆ ಅನ್ನೋದು ಒನ್​ಲೈನ್​ ಸ್ಟೋರಿ.. ಕೆಜಿಎಫ್ ಚಿತ್ರದಲ್ಲಿ ತಾಯಿ ಮಗನ ಬಾಂದವ್ಯದ ಕಥೆ ಕೂಡ ಇದೆ.. ತಾಯಿಯ ಮಾತಿನಂತೆ ರಾಕಿ ಅಂಡರ್​ವರ್ಲ್ಡ್​​ಗೆ ಎಂಟ್ರಿ ಕೊಡ್ತಾನಂತೆ.. ಅದ್ಯಾಕೆ ಅನ್ನೋದೇ ಸಸ್ಪೆನ್ಸ್​.. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್ ಅಂತ ನಿರ್ದೇಶಕರು ಹೇಳ್ತಿದ್ದು, ಟೈಟಲ್​ ನೋಡಿ ಇದನ್ನ ಕೆಜಿಎಫ್​ ಕಥೆ ಅಂದುಕೊಳ್ಳೋದು ತಪ್ಪು ಅಂತಾರೆ..

ಅಂದಾಜು 70 ಕೋಟಿ ಬಡ್ಜೆಟ್​ನಲ್ಲಿ ನಿರ್ಮಾಣವಾಗಿರೋ ಹೈವೋಲ್ಟೇಜ್ ಆಕ್ಷನ್ ಸಿನಿಮಾ ಕೆಜಿಎಫ್​​.. ಹೊಂಬಾಳೆ ಫಿಲ್ಮ್ಸ್​​​ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಈ ಚಿತ್ರವನ್ನ ಕಟ್ಟಿಕೊಡ್ತಿದ್ದಾರೆ.. ಚಿತ್ರದಲ್ಲಿ ಶ್ರೀನಿಧಿ ರಮೇಶ್ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ಧಾರೆ.. ಇನ್ನುಳಿದಂತೆ ಅಚ್ಯುತ್ ಕುಮಾರ್, ನಾಜರ್, ರಮ್ಯಾ ಕೃಷ್ಣ, ಅನಂತ್ ನಾಗ್, ವಶಿಷ್ಠ ಎನ್ ಸಿಂಹರಂತಹ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ..

ಧೂಳೆಬ್ಬಿಸಿವೆ ರಾಕಿ ರೆಟ್ರೋ ಲುಕ್​ ಲೇಟೆಸ್ಟ್ ಸ್ಟಿಲ್ಸ್

ಸೋಷಿಯಲ್ ಮೀಡಿಯಾ ಟ್ರೆಂಡಿಂಗ್​ನಲ್ಲಿ ಕೆಜಿಎಫ್

ಸೆಟ್ಟೇರಿದ ದಿನದಿಂದಲೂ ಕೆಜಿಎಫ್​ ಚಿತ್ರದ ಒಂದೊಂದು ಸ್ಟಿಲ್​​ ಹುಬ್ಬೇರಿಸುವಂತಿವೆ.. ಕೆಜಿಎಫ್​ ಮಣ್ಣಿನ ಧೂಳಿನಲ್ಲಿ ಯಶ್, ರಾಕಿ ಲುಕ್, ಗೆಟಪ್​ ಅಬ್ಬಬ್ಬಾ ಅನ್ನುವಂತಿದೆ.. ಪೋಸ್ಟರ್​​​ ಡಿಸೈನ್​ಗೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.. ರಿಲೀಸ್​ ಡೇಟ್ ಅನೌನ್ಸ್ ಬೆನ್ನಲ್ಲೇ ರಿವೀಲ್ ಆಗಿರೋ ಹೊಸ ಹೊಸ ಸ್ಟಿಲ್ಸ್​​ ವಾಹ್ ಅನ್ನುವಂತಿದೆ.. ಗ್ಯಾಂಗ್​ಸ್ಟರ್ ಅವತಾರದಲ್ಲಿ ಗನ್ ಹಿಡಿದಿರೋ ರಾಕಿ, ಬೈಕ್ ಮೇಲೆ ಏರಿ ಕುಳಿತ ಕೆಜಿಎಫ್ ಕಿಲಾಡಿ, ಡ್ಯಾನ್ಸರ್ ಮಧ್ಯೆ, ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ಡ್ಯಾನ್ಸ್​ ಮೂಡಿನಲ್ಲಿರೋ ಕೆಜಿಎಫ್ ಕಿಂಗ್ ಸ್ಟಿಲ್ಸ್​ ಸಖತ್ ಕಿಕ್ ಕೊಡ್ತಿವೆ.. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಸ್ಟಿಲ್ಸ್ ಟ್ರೆಂಡಿಂಗ್​ನಲ್ಲಿವೆ..

ರಿಲೀಸ್ ಡೇಟ್ ಫಿಕ್ಸ್ ಮಾಡಿದ ದೇವತೆ ಯಾರು..?

ಐದು ಭಾಷೆಗಳಲ್ಲಿ ಶುರುವಾಗಲಿದೆ ರಾಕಿ ದರ್ಬಾರ್

ಕೆಜಿಎಫ್​ ಸಿನಿಮಾ ರಿಲೀಸ್​ಗೆ ನವೆಂಬರ್ 16ರಂದು ಮುಹೂರ್ತ ಫಿಕ್ಸ್ ಮಾಡಿರೋದ್ರ ಹಿಂದೆ ಒಂದು ಕಥೆಯಿದೆ.. ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿರೋ ಶಕ್ತಿ ದೇವತೆ ಅಂದ್ರೆ ಅಪಾರ ನಂಬಿಕೆ.. ಅಲ್ಲಿನ ಜ್ಯೋತಿಷಿ ನವೆಂಬರ್ 16ಕ್ಕೆ ರಿಲೀಸ್​ ಆದ್ರೆ, ಚಿತ್ರಕ್ಕೆ ಸಕ್ಸಸ್ ಗ್ಯಾರೆಂಟಿ ಅಂತ ಹೇಳಿದ್ದಾರಂತೆ.. ಅದೇ ಕಾರಣಕ್ಕೆ ಆ ದಿನವನ್ನ ನಿಗದಿ ಮಾಡಿದೆ ಚಿತ್ರತಂಡ.. ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳಿನಲ್ಲಿ ನಿರ್ಮಾಣವಾಗಿರೋ ಚಿತ್ರ ಹಿಂದಿ, ಮಲಯಾಳಂಗೂ ಡಬ್​ ಆಗಿ ಬಾಕ್ಸಾಫೀಸ್ ಶೇಕ್ ಮಾಡಲಿದೆ..

ನ.16ಕ್ಕೆ ಫಸ್ಟ್ ಚಾಪ್ಟರ್.. 2019ಕ್ಕೆ ಸೆಕೆಂಡ್ ಚಾಪ್ಟರ್

ಕನ್ನಡ ಚಿತ್ರರಂಗದ ದಿಕ್ಕು ಬದಲಿಸಲಿದೆ ಕೆಜಿಎಫ್ ಸಿನಿಮಾ

ಕೆಜಿಎಫ್​ ಚಿತ್ರವನ್ನ ಬಾಹುಬಲಿ ರೀತಿ ಎರಡು ಭಾಗಗಳಾಗಿ ರಿಲೀಸ್ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಾನೇ ಇತ್ತು.. ಅದು ಕನ್ಫರ್ಮ್​ ಆಗಿದೆ.. ನವೆಂಬರ್ 16ಕ್ಕೆ ಕೆಜಿಎಫ್ ಫಸ್ಟ್ ಚಾಪ್ಟರ್ ಅಷ್ಟೆ ರಿಲೀಸ್ ಆಗ್ತಿದ್ದು, ಮುಂದಿನ ವರ್ಷ ಸೆಕೆಂಡ್ ಪಾರ್ಟ್ ತೆರೆಗಪ್ಪಳಿಸಲಿದೆ.. ಹೈಪ್ರೊಡಕ್ಷನ್ ವ್ಯಾಲ್ಯೂಸ್​​ ಜೊತೆಗೆ ನಿರ್ಮಾಣವಾಗಿರೋ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸೋ ಸುಳಿವು ಕೊಟ್ಟಿದೆ.. ರಾಕಿಂಗ್ ಸ್ಟಾರ್ ಯಶ್​ ಎರಡು ವರ್ಷದ ಪರಿಶ್ರಮಕ್ಕೆ ಕೆಜಿಎಫ್ ತಕ್ಕ ಪ್ರತಿಫಲ ತಂದುಕೊಡೋದಂತೂ ಗ್ಯಾರೆಂಟಿ..

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES