Top

ಪುಟ್ಟ ಅರಸನಿಗೆ ಮೊದಲ ದಸರೆಯ ಸಂಭ್ರಮ

ಪುಟ್ಟ ಅರಸನಿಗೆ ಮೊದಲ ದಸರೆಯ ಸಂಭ್ರಮ
X

ಮೈಸೂರು: ಗಣೇಶ ಚತುರ್ಥಿ ಮುಗಿದು, ದಸರಾ ಹಬ್ಬಕ್ಕೆ ಎಲ್ಲೆಡೆ ತಯಾರಿ ನಡೆಯುತ್ತಿದೆ. ವಿಶ್ವವಿಖ್ಯಾತ ದಸರಾ ವೈಭವ ನಡೆಯುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಿದ್ಧತೆ ಭರದಿಂದ ಸಾಗಿದೆ.

ಈಗಾಗಲೇ ಅಂಬಾರಿ ಹೋರಲು ಗಜಪಡೆಗೆ ತಾಲೀಮು ನೀಡಲಾಗುತ್ತಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ತಯಾರಿ ಜೋರಾಗಿದೆ. ಇನ್ನು ಯದುವಂಶಕ್ಕೆ ಬಂದಿರುವ ಹೊಸ ಅತಿಥಿಗೆ ಇದು ಮೊದಲನೇ ದಸರೆಯ ಸಂಭ್ರಮ.

ಯದುವಂಶದ ಕುಲತಿಲಕ ಯದುವೀರ್ ಮತ್ತು ತ್ರಿಷಿಕಾ ಪುತ್ರ ಆದ್ಯವೀರ್ ನರಸಿಂಹರಾಜ ಒಡೆಯರ್‌ಗೆ ಇದು ಮೊದಲ ದಸರೆಯಾಗಿದ್ದು, ದಸರಾ ಸಂಪ್ರದಾಯಗಳಲ್ಲಿ ಆದ್ಯವೀರ್ ಭಾಗಿಯಾಗಲಿದ್ದಾರೆ.

ಇನ್ನು ಮಗನ ಜೊತೆ ಮೊದಲ ದಸರಾ ಆಚರಿಸಲು, ಯದುವೀರ್ ದಂಪತಿ, ರಾಜವಂಶಸ್ಥೆ ಪ್ರಮೋದಾದೇವಿ ಕಾತುರರಾಗಿದ್ದಾರೆ.

Next Story

RELATED STORIES