Top

ಕನ್ನಡ ಮರೆತ್ರು ಅಂದವ್ರಿಗೆ ರಶ್ಮಿಕಾ ಸ್ವೀಟ್ ಟಾಂಗ್.!

ಕನ್ನಡ ಮರೆತ್ರು ಅಂದವ್ರಿಗೆ ರಶ್ಮಿಕಾ ಸ್ವೀಟ್ ಟಾಂಗ್.!
X

ರಕ್ಷಿತ್ ಶೆಟ್ಟಿ ಬ್ರೇಕಪ್​ನಿಂದ ಡಿಸ್ಟರ್ಬ್​ ಆಗಿರೋ ರಶ್ಮಿಕಾ, ಟಾಲಿವುಡ್ ಅಂಗಳದಲ್ಲಿ ಸದ್ಯ ಹ್ಯಾಟ್ರಿಕ್ ಹಿಟ್ ಹೊಡೆಯೋ ಸೂಚನೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕನ್ನಡದ ಚೆಲುವೆ ಬಗ್ಗೆ ಅಕ್ಕಿನೇನಿ ನಾಗಾರ್ಜುನ್ ಭವಿಷ್ಯ ಕೂಡ ನುಡಿದಿದ್ದಾರೆ. ಇಷ್ಟಕ್ಕೂ ಕಿಂಗ್​ ನಾಗ್ ಹೇಳಿದ್ದಾದ್ರು ಏನು..? ದೀಪಿಕಾ ಮೇಲೆ ಇಲ್ಲದ ಗದಾಪ್ರಹಾರ ರಶ್ಮಿಕಾ ಮೇಲೆ ಯಾಕೆ ಅನ್ನೋದ್ರ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಮುಂದೆ ಓದಿ..

ಗೀತಾ ಗೋವಿಂದಂ ಚಿತ್ರದ ಬಿಗ್ಗೆಸ್ಟ್ ಸಕ್ಸಸ್​ನಿಂದ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ, ಟಾಲಿವುಡ್​ಗೂ ಕ್ರಶ್ ಆಗ್ಬಿಟ್ಟಿದ್ದಾರೆ. ರಶ್ಮಿಕಾ ಬೋಲ್ಡ್ ಆಕ್ಟಿಂಗ್ ಮತ್ತು ಬ್ಯೂಟಿ​ಗೆ ಫಿದಾ ಆಗಿರೋ ಟಾಲಿವುಡ್ ಸಿನಿಪ್ರಿಯರಿಗೆ, ಈಕೆಯ ಸಿನಿಮಾಗಳು ಅಂದ್ರೆ ಎಲ್ಲಿಲ್ಲದ ಕ್ರೇಜ್. ಅಷ್ಟರ ಮಟ್ಟಿಗೆ ಸಿನಿಪ್ರಿಯರ ಹೃದಯ ಕದ್ದುಬಿಟ್ಟಿದ್ದಾರೆ ರಶ್ಮಿಕಾ ಮಂದಣ್ಣ.

ಬಾಲಿವುಡ್​ಗೆ ಹೋದ್ರು ಕನ್ನಡ ಮರೆಯೋಕೆ ಸಾಧ್ಯವೇ..?

ಟಾಂಗ್‌ ಕೊಟ್ಟ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ.!

ಇತ್ತೀಚೆಗೆ ವೃತ್ರ ಸಿನಿಮಾನ ಕೈಬಿಟ್ಟ ಹಿನ್ನೆಲೆಯಲ್ಲಿ ರಶ್ಮಿಕಾಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತೆಲುಗು ಸಿನಿಮಾಗಳಿಗಾಗಿಯೇ ಕನ್ನಡ ಸಿನಿಮಾನ ಕೈಬಿಟ್ಟಿದ್ದಾರೆ, ಕನ್ನಡವನ್ನ ಮರೀತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿತ್ತು. ಆದ್ರೀಗ ಅದೇ ಟಾಲಿವುಡ್ ಅಂಗಳದ ಬಿಗ್ ಇವೆಂಟ್ ಒಂದರಲ್ಲಿ ರಶ್ಮಿಕಾ ಸಹಸ್ರಾರು ತೆಲುಗು ಸಿನಿಪ್ರಿಯರು ಮತ್ತು ತೆಲುಗು ಸೂಪರ್ ಸ್ಟಾರ್​ಗಳ ಮುಂದೆ ಕನ್ನಡದಲ್ಲಿ ಮಾತನಾಡಿದ್ದಾರೆ.

ಯೆಸ್.. ಇದು ರೀಸೆಂಟ್ ಆಗಿ ನಡೆದ ಮೋಸ್ಟ್ ಎಕ್ಸ್​ಪೆಕ್ಟೆಡ್ ತೆಲುಗು ಸಿನಿಮಾ ದೇವದಾಸ್ ಆಡಿಯೋ ಲಾಂಚ್ ಫಂಕ್ಷನ್​ನ ಝಲಕ್. ಅಲ್ಲಿ ರಶ್ಮಿಕಾ ಕನ್ನಡದಲ್ಲಿ ಮಾತು ಶುರುಮಾಡೋ ಮೂಲಕ ಕನ್ನಡ ಮರೆತ್ರು ಅನ್ನೋ ನೆಟ್ಟಿಗರಿಗೆ ಸ್ವೀಟ್ ಟಾಂಗ್ ಕೊಟ್ಟಿದ್ದಾರೆ.

ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಶಿಲ್ಪಾ ಶೆಟ್ಟಿ, ಪೂಜಾ ಹೆಗಡೆ, ಅನುಷ್ಕಾ ಶೆಟ್ಟಿ ಹೀಗೆ ಭಾರತೀಯ ಚಿತ್ರರಂಗದ ಬಿಗ್ಗೆಸ್ಟ್ ಸ್ಟಾರ್ಸ್​ ಆಗಿ ಗುರ್ತಿಸಿಕೊಂಡಿರೋ ನಟೀಮಣಿಯರೆಲ್ಲಾ ಕನ್ನಡಿಗರೇ. ಹಾಗಾಗಿ ಅವ್ರು ಯಾವುದೇ ಚಿತ್ರರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅವ್ರನ್ನ ಕನ್ನಡದ ಚೆಲುವೆ ಅಂತಲೇ ಕರೆಯುತ್ತೇವೆಯೇ ಹೊರತು ಪರಭಾಷಾ ನಟಿ ಅನ್ನೋದಿಲ್ಲ. ಅದು ನಮ್ಮ ಹೆಮ್ಮೆ ಕೂಡ ಹೌದು.

ದೀಪಿಕಾ ಮೇಲೆ ಇಲ್ಲದ ಗದಾಪ್ರಹಾರ ರಶ್ಮಿಕಾಗೇಕೆ..?

ಹೆಮ್ಮೆ ಪಡೋದು ಬಿಟ್ಟು ಕಾಲೆಳೆಯೋದು ಸರಿಯೇ..?

ಬಾಲಿವುಡ್​ನ ಸ್ಟಾರ್ ನಟೀಮಣಿಯಾಗಷ್ಟೇ ಅಲ್ಲದೆ, ಹಾಲಿವುಡ್​ನಲ್ಲೂ ಧೂಳೆಬ್ಬಿಸಿದಂತಹ ದೀಪಿಕಾ ಪಡುಕೋಣೆ ಅಪ್ಪಟ ಕನ್ನಡ ಪ್ರತಿಭೆ. ಇಲ್ಲೇ ಹುಟ್ಟಿ ಬೆಳೆದು, ಕನ್ನಡದಿಂದಲೇ ಬಣ್ಣ ಹಚ್ಚಿದ ಪ್ರತಿಭಾವಂತ ಕಲಾವಿದೆ. ಉಪೇಂದ್ರರ ಐಶ್ವರ್ಯಾ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ದೀಪಿಕಾ, ನಂತ್ರ ಬಾಲಿವುಡ್​ಗೆ ಹಾರಿದ್ರು. ಅದಾದ ಬಳಿಕ ಮತ್ತೆ ಆಕೆ ಕನ್ನಡದತ್ತ ತಿರುಗಿ ನೋಡಿದ ಉದಾಹರಣೆಯೇ ಇಲ್ಲ.

ಹಾಗಂತ ದೀಪಿಕಾ ಕನ್ನಡ ಮರೆತ್ರು, ಈಕೆ ಉದ್ದಾರ ಆಗಲ್ಲ ಅಂತ ಯಾರೂ ದನಿ ಎತ್ತಲಿಲ್ಲ. ಯಾಕಂದ್ರೆ ಆ ರೀತಿ ಆಕೆ ಬೆಳೆದು ತೋರಿಸಿದ್ರು. ಆದ್ರೀಗ ದೀಪಿಕಾ ಹಾದಿಯಲ್ಲಿ, ರಶ್ಮಿಕಾಗೂ ಪರಭಾಷಾ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಕ್ಕಿ, ಸಕ್ಸಸ್ ಶಿಖರ ಏರುತ್ತಿದ್ದಾರೆ. ದೀಪಿಕಾ ಮೇಲೆ ಇಲ್ಲದ ಗದಾಪ್ರಹಾರ ರಶ್ಮಿಕಾ ಮೇಲ್ಯಾಕೆ ಅಂತ ಕೇಳೋರು ಯಾರೂ ಇಲ್ಲದಂತಾಗಿದೆ. ಬೆಳವಣಿಗೆ ಕಂಡು ಸಾಧ್ಯವಾದ್ರೆ ಪ್ರೋತ್ಸಾಹಿಸಬೇಕೇ ಹೊರತು ಕಾಲೆಳೆಯೋ ಹೀನಕೃತ್ಯಕ್ಕೆ ಕೈಹಾಕಬಾರದು.

ಕನ್ನಡದ ಚೆಲುವೆಗೆ ಟಾಲಿವುಡ್ ನಾಗಾರ್ಜುನ ಭವಿಷ್ಯ..!

ಭಾರತೀಯ ಚಿತ್ರರಂಗಕ್ಕೆ ಮತ್ತೊಬ್ಬ ಕನ್ನಡದ ಟ್ಯಾಲೆಂಟ್

ಈ ಹಿಂದೆಯೇ ಅಕ್ಕಿನೇನಿ ಹಾಗೂ ಮೆಗಾಸ್ಟಾರ್ ಫ್ಯಾಮಿಲಿಗಳು ರಶ್ಮಿಕಾ ಪ್ರತಿಭೆಯನ್ನ ಕೊಂಡಾಡಿದ್ದವು. ಆದ್ರೀಗ ಆ ಮಾತು ಬೃಹತ್ ವೇದಿಕೆಯಲ್ಲಿ ಟಾಲಿವುಡ್ ಕಿಂಗ್ ನಾಗಾರ್ಜುನ್ ಬಹಿರಂಗವಾಗಿ ಹೇಳಿದ್ದಾರೆ. ರಶ್ಮಿಕಾರನ್ನ ಹಾಡಿ ಹೊಗಳೋದ್ರ ಜೊತೆಗೆ ಮತ್ತೊಂದು ಹಿಟ್ ಮೂಲಕ ಹ್ಯಾಟ್ರಿಕ್ ಸಕ್ಸಸ್ ನಿಮ್ಮದಾಗಲಿದೆ ಅಂದಿದ್ದಾರೆ.

ಸದ್ಯ ಆಡಿಯೋ ಜೊತೆ ಟ್ರೈಲರ್ ಲಾಂಚ್ ಮಾಡಿರೋ ದೇವದಾಸ್ ಟೀಂ, ಇದೇ ಸೆಪ್ಟೆಂಬರ್ 27ಕ್ಕೆ ವರ್ಲ್ಡ್​ ವೈಡ್ ಸಿನಿಮಾನ ರಿಲೀಸ್ ಮಾಡ್ತಿದೆ. ನಾಗಾರ್ಜುನ್- ನಾನಿ ಜೋಡಿಯ ಈ ಚಿತ್ರದಲ್ಲಿ ನಾನಿ ಜೊತೆ ರಶ್ಮಿಕಾ ಕಮಾಲ್ ಮಾಡಲಿದ್ದು, ನಾನಿ ಕೂಡ ರಶ್ಮಿಕಾ ಬಗ್ಗೆ ಕೊಂಡಾಡಿದ್ದಾರೆ.

ನಾಗಾರ್ಜುನ್ ಹೇಳಿದಂತೆ ಎರಡು ಹಿಟ್ ಸಿನಿಮಾಗಳ ನಂತ್ರ ದೇವದಾಸ್ ಕೂಡ ಮತ್ತೊಂದು ಹಿಟ್ ಆಗೋದ್ರ ಮುಖೇನ ರಶ್ಮಿಕಾ ದೊಡ್ಡ ಸ್ಟಾರ್ ಹೀರೋಯಿನ್ ಆಗಲಿದ್ದಾರೆ. ಆ ಮೂಲಕ ಭಾರತೀಯ ಚಿತ್ರರಂಗಕ್ಕೆ ಕನ್ನಡದಿಂದ ಮತ್ತೊಂದು ಸೂಪರ್ ಟ್ಯಾಲೆಂಟ್ ಇಂಟ್ರಡ್ಯೂಸ್ ಆಗಲಿದೆ.

ದೇವದಾಸ್ ರಿಲೀಸ್ ಬೆನ್ನಲ್ಲೇ ರಶ್ಮಿಕಾಗೆ ದರ್ಶನ್ ಜೊತೆಗಿನ ಯಜಮಾನ ತೆರೆಗೆ ಬರಲಿದೆ. ಇವೆಲ್ಲದರ ಹೊರತಾಗಿ ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಬ್ಯುಸಿ ಇರೋ ಸಾನ್ವಿ, ಕನ್ನಡದಲ್ಲೂ ಸಾಕಷ್ಟು ಕಥೆಗಳನ್ನ ಕೇಳ್ತಿದ್ದಾರೆ. ಡೇಟ್ಸ್ ಹೊಂದಾಣಿಕೆ ಆಗಿ, ಎಲ್ಲಾ ಅಂದುಕೊಂಡಂತಾದ್ರೆ, ಸದ್ಯದಲ್ಲೇ ಸ್ಯಾಂಡಲ್​ವುಡ್​ನ ಬಿಗ್ ಸ್ಟಾರ್ ಜೊತೆ ಸಿನಿಮಾ ಮಾಡೋ ಸುದ್ದಿ ಅಫಿಶಿಯಲ್ ಆಗಿ ಅವರೇ ರಿವೀಲ್ ಮಾಡಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್‌, ಟಿವಿ5

Next Story

RELATED STORIES