ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಪ್ರಜೆ

ದುಬೈ: ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಇದರ ನಡುವೆ ಪಾಕ್ ಪ್ರಜೆಯೊಬ್ಬ ಭಾರತದ ರಾಷ್ಟ್ರಗೀತೆಯನ್ನ ಹಾಡಿದ ವೀಡಿಯೊ ವೈರಲ್ ಆಗಿದೆ.
ಮೊನ್ನೆ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ದಿನ ಪಾಕ್ ಕ್ರಿಕೆಟ್ ಅಭಿಮಾನಿಯೊಬ್ಬ ಭಾರತದ ರಾಷ್ಟ್ರಗೀತೆ ಹಾಡಿದ ವೀಡಿಯೊ ಸಖತ್ ವೈರಲ್ ಆಗಿದೆ. ಶಾಂತಿ ಕಾಪಾಡುವುದಕ್ಕಾಗಿ ಈ ಅಭಿಮಾನಿ ಹಾಡಿರುವುದಾಗಿ ತಿಳಿದು ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರತ ಮತ್ತು ಕ್ರಿಕೆಟ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಯುದ್ದಗಳು ನಡೆಯುತ್ತಿರುತ್ತವೆ. ಒಬ್ಬರಿಗೊಬ್ಬರು ಟ್ರೋಲ್ ಮಾಡಿಕೊಳ್ಳುತ್ತಿರುತ್ತಾರೆ.
ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಇದು ಹೆಚ್ಚಾಗಿತ್ತು. ಮೊನ್ನೆ ಬುಧವಾರ ಮುಖಾಮುಖಿಯಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂದೇಶಗಳು ಹರಿದಾಡಿ ಪಂದ್ಯದ ಕ್ರೇಜ್ ಹೆಚ್ಚಿಸಿತ್ತು.
ಮೊನ್ನೆ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆಗಳನ್ನ ಹಾಡಿಸಲಾಗಿತ್ತು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದವು. ಇದೆಲ್ಲದಕ್ಕಿಂತ ಇದೀಗ ಭಾರತದ ರಾಷ್ಟ್ರಗೀತೆ ಹಾಡುವ ವೇಳೆ ಪಾಕ್ ಅಭಿಮಾನಿಯೊಬ್ಬ ಹಾಡಿದ ವಿಡಿಯೊ ವೈರಲ್ ಆಗಿದ್ದು ಇದನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.