Top

ಮುಖ್ಯಮಂತ್ರಿ ಹೆಚ್ಡಿಕೆಗೆ ವಿಧಾನಪರಿಷತ್‌ ಸದಸ್ಯ ರವಿಕುಮಾರ್ ಪಂಚ ಪ್ರಶ್ನೆ.!

ಮುಖ್ಯಮಂತ್ರಿ ಹೆಚ್ಡಿಕೆಗೆ ವಿಧಾನಪರಿಷತ್‌ ಸದಸ್ಯ ರವಿಕುಮಾರ್ ಪಂಚ ಪ್ರಶ್ನೆ.!
X

ಬೆಂಗಳೂರು : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ಖಂಡಿಸಿ, ಬಿಜೆಪಿ ಯುವಮೋರ್ಚಾದಿಂದ ರಾಜ್ಯಾಧ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ, ಬಿಜೆಪಿಯ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮುಖ್ಯಮಂತ್ರಿಗಳಿಗೆ ಖಾರವಾಗಿ ಪಂಚ ಪ್ರಶ್ನೆ ಹಾಕಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಬಿಜೆಪಿಯ ವಿಧಾನಪರಿಷತ್ ಸದಸ್ಯ ರವಿಕುಮಾರ್, ಸಿಎಂ ದಂಗೆ ಹೇಳಿಕೆಯನ್ನು ಖಂಡಿಸಿದರು. ಅಲ್ಲದೇ, ಮುಖ್ಯಮಂತ್ರಿಯಾಗಿ ಇಂತಹ ಹೇಳಿಕೆ ಕೊಡುವ ಮುನ್ನಾ ಯೋಚಿಸಬೇಕು ಎಂದು ಕಿಡಿಕಾರಿದರು.

ಇನ್ನು ಸಿಎಂ ಕುಮಾರಸ್ವಾಮಿಯವರಿಗೆ ಇದೇ ವೇಳೆ ಮುಖ್ಯಮಂತ್ರಿಗಳು ಉತ್ತರಿಸುವಂತೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಿಎಂಗೆ ವಿಪಿ ಸದಸ್ಯ ರವಿಕುಮಾರ್ ಕೇಳಿದ ಪಂಚ ಪ್ರಶ್ನೆಗಳು ಹೀಗಿವೆ.

  1. ಯಡಿಯೂರಪ್ಪ ಅವರು ಏನು..? ಅವರ ವಿರುದ್ಧ ಏಕೆ ದಂಗೆ ಏಳಬೇಕು.?
  2. ನಿಮಗೆ ಆಡಳಿತ ನಡೆಸಲು ಕಚೇರಿ, ವಾಸಕ್ಕೆ ಮನೆಯನ್ನು ಸರ್ಕಾರ ಕೊಟ್ಟಿದೆ. ಹೀಗಿದ್ದೂ, ನೀವು ವರ್ಷಕ್ಕೆ 3 ಕೋಟಿ ರೂ ಕೊಟ್ಟು ತಾಜ್‌ ವೆಸ್ಟ್‌ ಎಂಡ್‌ನಲ್ಲಿ ರೂಂ ಲೀಸ್‌ಗೆ ತೆಗೆದುಕೊಂಡು ವಾಸಿಸುತ್ತಿರುವುದೀರಿ. ಯಾಕೆ ಬ್ಯುಸಿನೆಸ್ ಮಾಡಲು ನೀವು ಮತ್ತು ನಿಮ್ಮ ಪತ್ನಿ ಅಲ್ಲಿ ರೂಂ ಪಡೆದಿದ್ದೀರಾ.?
  3. ಕರ್ನಾಟಕದಲ್ಲಿ ಹಾಸನ ಮಾತ್ರ ಪುಣ್ಯ ಭೂಮಿಯೇ.?
  4. ಕರ್ನಾಟಕದ ಜನ ನಿಮ್ಮ ಬಾಡಿಗೆ ಆಳುಗಳಾ.? ನಿಮ್ಮ ಮಾತು ಏಕೆ ಕೇಳಬೇಕು.?
  5. ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಕುಟುಂಬ ವರ್ಗದವರು ಸಾವಿರಾರು ಕೋಟಿ ರೂ ಬಾಳುತ್ತಿರೋದಕ್ಕೆ ಕಾರಣ ಏನು.? ನೀವು ತುಂಬಾ ಪಾರದರ್ಶಕವಾದರೆ ನಿಮ್ಮ ಆಸ್ತಿ ಬಗ್ಗೆ ತನಿಖೆಗೆ ಆದೇಶ ಮಾಡ್ತೀರಾ.?

ಈ ಮೊದಲಾದ ಮೇಲಿನ ಪಂಚ ಪ್ರಶ್ನೆಗಳನ್ನು ಬಿಜೆಪಿ ವಿಧಾನಪರಿಷತ್ ಸದಸ್ಯ ಎತ್ತಿದ್ದಾರೆ. ಇವರ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಿಸುತ್ತಾರಾ..? ಈ ಮೂಲಕ ಇವರ ಪ್ರಶ್ನೆಗಳನ್ನು ಸಮರ್ಥಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES