Top

ಜೀತಕ್ಕಾಗಿ ಮಹಿಳೆ ಹೊತ್ತೋಯ್ದರೂ ಸುಮ್ಮನಿದ್ದ ಜನ!

ಜೀತಕ್ಕಾಗಿ ಮಹಿಳೆ ಹೊತ್ತೋಯ್ದರೂ ಸುಮ್ಮನಿದ್ದ ಜನ!
X

ಜೀತ ಪದ್ಧತಿಯಿಂದ ತಪ್ಪಿಸಿಕೊಂಡು ಬಂದಿದ್ದರೂ ಹುಡುಕಿಕೊಂಡು ಬಂದಿದ್ದ ಮಹಿಳೆಯನ್ನು ಅಮಾನವೀಯವಾಗಿ ಕಾರಿನಲ್ಲಿ ಹೊತ್ತೊಯ್ದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದೆ.

ಜೀತಕ್ಕಾಗಿ ಬೆಕ್ಕಳಲೆ ಗ್ರಾಮದಲ್ಲಿ ದಲಿತ ಮಹಿಳೆ ಜಾನಕಮ್ಮ (40) ಅವರನ್ನು ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ನಾಗೇಶ್ ಹಾಗೂ ಆತನ ಸಹಚರರು ಹೊತ್ತೊಯ್ದ ಘಟನೆ ವೀಡೀಯೊ ಚಿತ್ರೀಕರಣ ಮಾಡಲಾಗಿದ್ದು, ಸಮಾಜ ಬೆಚ್ಚಿಬೀಳಿಸುವಂತಿದೆ.

ಜಾನಕಮ್ಮಳ ಪತಿ ಚಿನ್ನತಂಬಿ ನಾಗೇಶ್ ಬಳಿ‌ 50 ಸಾವಿರ ಪಡೆದು 5 ವರ್ಷಗಳಿಂದ ನಾಗೇಶ್ ಮನೆಯಲ್ಲಿ ಜೀತದಾಳಾಗಿ ಕೆಲ್ಸ ಮಾಡುತ್ತಿದ್ದರು. 8 ತಿಂಗಳ ಹಿಂದೆ ಪತಿ ಚಿನ್ನತಂಬಿ ಮೃತಪಟ್ಟ ಬಳಿಕ ಜೀತದ ಮಾಲೀಕರ ಕಿರುಕುಳದಿಂದ ಓಡಿ ಬಂದು ಬೆಕ್ಕಳಲೆ ಗ್ರಾಮದಲ್ಲಿ ಜಾನಕಮ್ಮ ವಾಸವಾಗಿದ್ದರು.

ಈ ವಿಷಯ ತಿಳಿದ ನಾಗೇಶ್ ಮತ್ತು ಆತನ ಸಹಚರರು ಕಾರಿನಲ್ಲಿ ಗ್ರಾಮಕ್ಕೆ ಆಗಮಿಸಿ ಮಹಿಳೆಯನ್ನು ಬಲವಂತಾಗಿ ಎಳೆದು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

ಮಹಿಳೆಯನ್ನು ಎಳೆದೊಯ್ದ ಘಟನೆಯನ್ನು ದಲಿತ ಸಂಘಟನೆಗಳು ಖಂಡಿಸಿದ್ದು, ಕೊಪ್ಪ ಪೊಲೀಸರಿಗೆ ದೂರು ನೀಡಿವೆ. ಅಲ್ಲದೇ ದೌರ್ಜನ್ಯ ಎಸೆಗಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

Next Story

RELATED STORIES