Top

ಪಿಪಿಎಫ್​ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ

ಪಿಪಿಎಫ್​ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಏರಿಕೆ
X

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (ಎನ್​ಎಸ್​ಸಿ), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸಣ್ಣ ಉಳಿತಾಯದ ಮೇಲಿನ ಬಡ್ಡಿದರವನ್ನು ಶೇ. 0.4ರಷ್ಟು ಏರಿಕೆ ಮಾಡಲಾಗಿದೆ.

ಅಕ್ಟೋಬರ್ ಮತ್ತು ಡಿಸೆಂಬರ್ ನಡುವಣ ತ್ರೈಮಾಸಿಕ ಅವಧಿಗೆ ಅಲ್ಪ ಪ್ರ,ಮಾಣದ ಬಡ್ಡಿದರವನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಸರಕಾರ ಬಡ್ಡಿದರ ಇಳಿಸುತ್ತಿದ್ದಂತೆ ಬ್ಯಾಂಕ್​ಗಳು ತಮ್ಮಲ್ಲಿನ ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವನ್ನೂ ಇಳಿಸುವ ಸಾಧ್ಯತೆ ಇದೆ.

ಇದೇ ವೇಳೆ ಹಿರಿಯ ನಾಗರೀಕರ ಉಳಿತಾಯ ಯೋಜನೆಯಲ್ಲೂ ಬಡ್ಡಿದರ ಏರಿಕೆ ಮಾಡಲಾಗಿದ್ದು, 5 ವರ್ಷಗಳ ಅವಧಿಯ ಉಳಿತಾಯ ಖಾತೆಯಲ್ಲಿ ನೀಡಲಾಗಿದ್ದ ಶೇ. 7.8, 7.3 ಮತ್ತು 8.7ರ ಬಡ್ಡಿದರದಲ್ಲೂ ಅಲ್ಪ ಏರಿಕೆ ಮಾಡಲಾಗಿದೆ. ಪಿಪಿಎಫ್ ವಾರ್ಷಿಕ ಬಡ್ಡಿದರ 7.6ರಿಂದ ಶೇ.8ಕ್ಕೇರಿದಂತಾಗಿದೆ.

Next Story

RELATED STORIES