Top

ಬಿಬಿಎಂಪಿಯ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಗೆ ಕಂಟಕ?

ಬಿಬಿಎಂಪಿಯ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಗೆ ಕಂಟಕ?
X

ಬೆಂಗಳೂರು : ಬಿಬಿಎಂಪಿಯಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ನಡೆದಿತ್ತು. ಅಲ್ಲದೇ ಪಕ್ಷೇತರರನ್ನ ಸೆಳೆದುಕೊಳ್ಳಲು ಕುದುರೆ ವ್ಯಾಪಾರವೂ ಕೂಡ ಜೋರಾಗೆ ನಡೆದಿತ್ತು. ಆದ್ರೀಗ, ಕೇಳಿಬಂದಿರೋ ವಿಚಾರ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ. ಮೈತ್ರಿ ಪಕ್ಷ ಅಧಿಕಾರ ಕಳೆದುಕೊಳ್ಳಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ.. ಅಷ್ಟಕ್ಕೂ ಏನ್ ವಿಚಾರ ಅಂತೀರಾ, ಮುಂದೆ ಓದಿ..

ಹೌದು.. ಕೆಎಂಸಿ ಕಾಯ್ದೆಯ ಪ್ರಕಾರ ಪ್ರತೀ ವರ್ಷ ಮೇಯರ್ ಚುನಾವಣೆ ನಡೆದ ಬಳಿಕ, ಪ್ರತೀ ಸದಸ್ಯರು ತಮ್ಮ ಆಸ್ತಿ ವಿವರವನ್ನ ಪಾಲಿಕೆಗೆ ಸಲ್ಲಿಸಬೇಕು. ಆದ್ರೆ, ಈ ಬಾರಿ 19 ಜನ ಸದಸ್ಯರು ಆಸ್ತಿ ವಿವರ ಸಲ್ಲಿಸದಿರೋದು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕಂಟಕ ತಂದೊಡ್ಡಿದೆ.

ಅಂದಹಾಗೆ, ಬಿಜೆಪಿಯ ಒಬ್ಬ ಸದಸ್ಯ, ಮೂವರು ಪಕ್ಷೇತರರು ಹಾಗೂ 15 ಕಾಂಗ್ರೆಸ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನ ಸಲ್ಲಿಸಿಲ್ಲ.. ಕೆಎಂಸಿ ಕಾಯ್ದೆಯ ಪ್ರಕಾರ ಆಸ್ತಿ ಸಲ್ಲಿಸದ ಸದಸ್ಯರು, ಮುಂದಿನ ಮೇಯರ್ ಚುನಾವಣೆ ವೇಳೆ ಸದಸ್ಯತ್ವ ಕಳೆದುಕೊಳ್ಳಲಿದ್ದು, ಮತದಾನ ಮಾಡಲು ಅವಕಾಶ ಸಿಗೋದಿಲ್ಲ. ಹೀಗಾಗಿ ಆಸ್ತಿ ವಿವರ ಸಲ್ಲಿಸದ ಸದಸ್ಯರಿಗೆ ಮತದಾನ ಹಕ್ಕು ನೀಡದಂತೆ, ಚುನಾವಣಾಧಿಕಾರಿಗೆ ಪತ್ರ ಬರೆದಿರೋದಾಗಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ, ಹೈಕೋರ್ಟ್ ಮೊರೆ ಹೋಗೋ ಸಾಧ್ಯತೆ ಇದೆ.. ಇನ್ನು ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರನ್ನ ಪ್ರಶ್ನಿಸಿದ್ರೆ.. ಬಿಜೆಪಿಯವರಿಗೆ ಅಧಿಕಾರ ದಾಹವಿದ್ದು, ಹೀಗೆ ದಿನಕ್ಕೊಂಡು ಗೇಮ್ ಮಾಡ್ತಿದ್ದಾರೆ. ಅವರು ಹೈಕೋರ್ಟಿಗೆ ದೂರು ನೀಡಿದ್ರೆ ನೀಡಲಿ. ಆದರೇ ಆಸ್ತಿ ವಿವರ ಸಲ್ಲಿಸಬೇಕಾಗಿರೋದು ಲೋಕಾಯುಕ್ತಕ್ಕೆ. ಮುಂದೆ ಏನಾಗಲಿದೆ ಅನ್ನೋದನ್ನ ಕಾದು ನೋಡ್ತೇವೆ ಅಂತ ತಿಳಿಸಿದ್ದಾರೆ.

ಒಟ್ಟಾರೆ ಸದ್ಯ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು, ಮೈತ್ರಿ ಪಕ್ಷ ಒಂದೆಡೆ ಸರ್ಕಸ್ ಮಾಡ್ತಿದೆ. ಬಿಜೆಪಿ ವಿಭಿನ್ನ ಮಾರ್ಗಗಳನ್ನ ಹುಡುಕಿಕೊಳ್ತಿದೆ. ಒಂದು ವೇಳೆ ಸದಸ್ಯರಿಗೆ ಮತದಾನ ಹಕ್ಕು ಕಡಿತಗೊಂಡಿದ್ದೇ ಆದಲ್ಲಿ, ಮೈತ್ರಿ ಪಕ್ಷದ ಪ್ಲಾನ್ ಫುಲ್ ಫ್ಲಾಪ್ ಆಗಲಿದೆ. ಆದ್ರೆ, ಅದೆಲ್ಲವೂ ಸಾಧ್ಯಾನಾ, ಯಾರಿಗೆ ಅಧಿಕಾರ ಗದ್ದುಗೆ ಸಿಗಲಿದೆ ಅನ್ನೋದು ಮಾತ್ರ ಯಕ್ಷ ಪ್ರಶ್ನೆಯಾಗಿದೆ..

ವರದಿ : ಮಂಜುನಾಥ್​ ಎಸ್​, ಟಿವಿ5 ಬೆಂಗಳೂರು

Next Story

RELATED STORIES