Top

ವಿಮಾನದಲ್ಲಿ ಏರುಪೇರು: ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ!

ವಿಮಾನದಲ್ಲಿ ಏರುಪೇರು: ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ!
X

ವಿಮಾನದಲ್ಲಿ ಹೋಗಬೇಕು ಎಂಬುದು ಹಲವರ ಕನಸು. ಆದರೆ ವಿಮಾನ ಪ್ರಯಾಣ ಕೆಲವೊಮ್ಮೆ ಹಿಂಸೆಯ ಪ್ರಯಾಣವೂ ಆಗಿಬಿಡುತ್ತದೆ. ಬುಧವಾರ ಇಂತಹದ್ದೊಂದು ಆಘಾತಕಾರಿ ಪ್ರಯಾಣದ ವರದಿಯಾಗಿದ್ದು, ವಿಮಾನದಲ್ಲಿದ್ದ ಪ್ರಯಾಣಕರ ಮೂಗು, ಕಿವಿಯಿಂದ ರಕ್ತ ಬಂದ ಘಟನೆ ನಡೆದಿದೆ.

ಏರ್ ಇಂಡಿಯಾ ಬೋಯಿಂಗ್ 737 ಮುಂಬೈಯಿಂದ ಜೈಪುರಕ್ಕ ಬುಧವಾರ ಹೊರಟ್ಟಿತ್ತು.ಸಿಬ್ಬಂದಿ ವಿಮಾನದಲ್ಲಿನ ವಾತಾವರಣ ಒತ್ತಡ ನಿಭಾಯಿಸುವ ಸ್ವಿಚ್ ಒತ್ತಲು ಮರೆತರು.

ಇದರಿಂದ ವಿಮಾನದೊಳಗೆ ವಾತಾವರಣದಲ್ಲಿ ಏರುಪೇರು ಉಂಟಾಗಿ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಅಲ್ಲದೇ ದಿಢೀರನೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಅಸ್ವಸ್ಥಗೊಂಡರು.

ವಿಮಾನದಲ್ಲಿ 166 ಪ್ರಯಾಣಿಕರು ಇದ್ದು ಸುಮಾರು 30 ಮಂದಿಯ ಕಿವಿ ಹಾಗೂ ಮೂಗಿನಲ್ಲಿ ರಕ್ತ ಹೊರಬಂದಿದೆ. 8 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನದಲ್ಲಿ ಉಂಟಾದ ಸಮಸ್ಯೆಯಿಂದ ಕೂಡಲೇ ಮುಂಬೈಗೆ ವಾಪಸ್ ಕರೆಸಲಾಯಿತು. ವಿಷಯವನ್ನು ಸಿವಿಲ್ ಏವಿಯೇಷನ್ ಪ್ರಧಾನ ನಿರ್ದೇಶಕ ಲಲಿತ್ ಗುಪ್ತ ವಿಷಯ ದೃಢಪಡಿಸಿದ್ದಾರೆ.

ವಿಮಾನ ಹತ್ತುವ ವೇಳೆ ಸಿಬ್ಬಂದಿ ಬ್ಲೀಡ್ ಬಟನ್ (ವಿಮಾನದೊಳಗೆ ವಾತಾವರಣದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ) ಒತ್ತಲು ಮರೆತಿದ್ದಾರೆ. ಇದರಿಂದ ಸಮಸ್ಯೆ ಉಂಟಾಯಿತು. ವಿಮಾನದಲ್ಲಿದ್ದ ಆಕ್ಸಿಜನ್ ವ್ಯವಸ್ಥೆ ಶುರುವಾಗಿದ್ದರಿಂದ ಸಮಸ್ಯೆ ನಿಯಂತ್ರಣವಾಯಿತು ಎಂದು ಅವರು ವಿವರಿಸಿದ್ದಾರೆ.

Next Story

RELATED STORIES