Top

ನಗರಸಭೆ ಸದಸ್ಯನ ರೌಡಿವರ್ತನೆ: ವೀಡಿಯೋ ವೈರಲ್

ನಗರಸಭೆ ಸದಸ್ಯನ ರೌಡಿವರ್ತನೆ: ವೀಡಿಯೋ ವೈರಲ್
X

ಕೋಲಾರ: ಕೆಜಿಎಫ್ ನಗರಸಭೆ ನಾಮನಿರ್ದೇಶಿತ ಸದಸ್ಯ ರೌಡಿಯಂತೆ ವರ್ತಿಸಿರುವ ಘಟನೆ ನಡೆದಿದೆ. ಕೋಲಾರದ ನಗರಸಭೆ ಆಯುಕ್ತರ ಕಚೇರಿಯಲ್ಲಿ ಚೇರ್‌ನಿಂದ ಸಂಘಟನೆ ಮುಖಂಡನಿಗೆ ಥಳಿಸಲಾಗಿದೆ.

ಇಲ್ಲಿನ ನಾಮನಿರ್ದೇಶಿತ ಸದಸ್ಯ ಸ್ಟಾನ್ಲಿ ಮಾನವ ಹಕ್ಕುಗಳ ಸಂಘಟನೆ ಮುಖಂಡ ಭಾಸ್ಕರ್‌ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಸ್ಟಾನ್ಲಿ ಭಾಸ್ಕರ್‌ಗೆ ಚೇರ್‌ನಿಂದ ಹೊಡೆದು ರೌಡಿಯಂತೆ ವರ್ತಿಸಿದ್ದು, ಕೆಜಿಎಫ್ ನಗರಸಭೆ ಆಯುಕ್ತ ಶ್ರೀಕಾಂತ್ ಎದುರೇ ಗಲಾಟೆ ನಡೆದಿದೆ.

ಇನ್ನು ಸ್ಟಾನ್ಲಿ ರೌಡಿಯಂತೆ ವರ್ತಿಸಿದ್ದು, ಗಲಾಟೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಜಿಎಫ್‌ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಸ್ಟಾನ್ಲಿ ವಿರುದ್ಧ ದೂರು ದಾಖಲಿಸಲಾಗಿದೆ.

Next Story

RELATED STORIES