Top

ಬೀದರ್‌ ಜಿಪಂ ಅಧ್ಯಕ್ಷರ ಬದಲಾವಣೆಗಾಗಿ, ಸಭೆಗೆ ಸದಸ್ಯರ ಗೈರು.!

ಬೀದರ್‌ ಜಿಪಂ ಅಧ್ಯಕ್ಷರ ಬದಲಾವಣೆಗಾಗಿ, ಸಭೆಗೆ ಸದಸ್ಯರ ಗೈರು.!
X

ಬೀದರ್ : ಜಿಲ್ಲೆಯ ಜಿಲ್ಲಾಪಂಚಾಯ್ತಿ ಅಧ್ಯಕ್ಷರ ಬದಲಾಣೆಗೆ ಒತ್ತಾಯಿಸಿ, ಪದೇ ಪದೇ ಜಿಲ್ಲಾಪಂಚಾಯ್ತಿ ತಿಂಗಳ ಸಭೆ ಮುಂದೂಡಲಾಗುತ್ತಿದ್ದಕ್ಕೆ ಪ್ರತಿಭಟಿಸಿ, ಇಂದು ಸದಸ್ಯರು ಗೈರು ಆದ ಬೀದರ್‌ ಜಿಪಂನಲ್ಲಿ ಘಟನೆ ನಡೆದಿದೆ.

ತಿಂಗಳಿಗೊಮ್ಮೆ ಜಿಲ್ಲಾಪಂಚಾಯ್ತಿ ಸಭೆ ನಡೆಸಿ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸರ್ವೇ ಸಾಮಾನ್ಯ. ಆದರೇ, ಬೀದರ್ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷೆಯಾದ ಭರತಬಾಯಿ, ಸಭೆಯನ್ನು ಪದೇ ಪದೇ ಮುಂದೂಡುತ್ತಿದ್ದರು.

ಈ ನಡುವೆ ಇಂದು ಬೀದರ್ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಗೆ, ಸದಸ್ಯರು ಹಾಜರಾಗದೇ ಎಲ್ಲೆಲ್ಲೂ ಖಾಲಿ ಖಾಲಿ ಕುರ್ಚಿಗಳು ಕಂಡು ಬಂದಿತು.

ಜಿಲ್ಲಾಪಂಚಾಯ್ತಿ ಸಭೆಗೆ ಆಗಮಿಸಿದ್ದ ಒಡ್ಡಿಗೆ ಮೂರು ಕಾಳು ಎಂಬಂತೆ ಹಾಜರಾಗಿದ್ದ ಸದಸ್ಯರು, ಅಲ್ಲಲ್ಲಿ ಗುಂಪು ಗೂಡಿ ಚರ್ಚೆ ನಡೆಸುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿ ಇಂದಿನ ಸಭೆಯಲ್ಲಿ ಕಂಡುಬಂದಿತು.

ಅಂದಹಾಗೇ ಇದಕ್ಕೆಲ್ಲಾ ಕಾರಣ, ಗಡಿ ಜಿಲ್ಲೆ ಬೀದರ್‌ ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಭರತಬಾಯಿ ಅವರನ್ನು ಬದಲಾವಣೆ ಮಾಡಬೇಕು ಎಂಬ ಸದಸ್ಯರ ಒತ್ತಾಯವೇ ಆಗಿತ್ತು.

ಕಳೆದ ಬಾರಿ ನಡೆದ ಜಿಲ್ಲಾಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಮೇಲುಗೈ ಸಾಧಿಸಿದ್ದು, ಜಿಲ್ಲಾಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಒಂದೇ ಪಕ್ಷದಲ್ಲೇ ಒಂದು ಕಡೆ ಭರತಬಾಯಿ ಮತ್ತೊಂದು ಕಡೆ ಗೀತಾ ಚಿದ್ರಿ ಭಾರಿ ಪೈಪೋಟಿ ನಡೆಸಿದ್ರು..

ಕಾಂಗ್ರೇಸ್ ಹೈಕಮಾಂಡ್ ಆದೇಶದಂತೆ ಮೊದಲ ಎರಡುವರೆ ವರ್ಷದ ಅವಧಿಗೆ ಭರತಭಾಯಿ ಅವ್ರನ್ನ ಅಧ್ಯಕ್ಷರನ್ನಾಗಿ ನೇಮಿಸಿ, ನಂತರದ ಅವಧಿಗೆ ಗೀತಾ ಚಿದ್ರಿಯವರನ್ನ ಜಿಲ್ಲಾಪಂಚಾಯತ್ ಅಧ್ಯಕ್ಷರನ್ನಾಗಿ ಮಾಡುವಂತೆ ಆದೇಶ ನೀಡಿತ್ತು.

ಈಗ ಮೊದಲ ಅವಧಿ ಮುಕ್ತಾಯಕ್ಕೆ ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಅಧ್ಯಕ್ಷೆ ಸ್ಥಾನದ ಬದಲಾವಣೆಗೆ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲಾಪಂಚಾಯತ್ ಸಭೆಗಳಿಗೆ ಗೀತಾ ಚಿದ್ರಿ ಬೆಂಬಲಿಗರು ಆಗಮಿಸುತ್ತಿಲ್ಲಾ ಎನ್ನುವ ಮಾತುಗಳು ಕೇಳಿ ಬರಿತ್ತಿವೆ.

ಈ ಕಾರಣದಿಂದಾಗಿ ಜಿಲ್ಲಾಪಂಚಾಯತ್ ಸಭೆ ಮುಂದೂಡಲಾಗುತ್ತಿದೆ. ಇದ್ರಿಂದಾಗಿ ಜಿಲ್ಲಾಪಂಚಾಯತ್ ಸದಸ್ಯರುಗಳು ಆರೋಪ ಮಾಡುತ್ತಿದ್ದಾರೆ.

ಮತ್ತೊಂದು ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮೀತಿ ಮತ್ತು ಕೃಷಿ ಸ್ಥಾಯಿ ಸಮೀತಿಗೆ ಇದೇ ತಿಂಗಳು 18 ರಂದು ಚುನಾವಣೆ ನಡೆಯಬೇಕಾಗಿತ್ತು. ಜಿಲ್ಲಾಪಂಚಾತ್ ಸದಸ್ಯರುಗಳಲ್ಲೇ ಒಗ್ಗಟ್ಟು ಇರದ ಕಾರಣ ಚುನಾವಣೆ ಮುಂದೂಡಲಾಗಿದೆ ಎನ್ನುವುದು ಗೀತಾ ಚಿದ್ರಯವರ ಗಂಡ ಪಂಡಿತ್ ರಾವ್ ಚಿದ್ರಿ ಎಂದಿದ್ದಾರೆ.

ಇದೇ ತಿಂಗಳು 17ರಂದು ಹಬ್ಸಿಕೊಟ್ ಅತಿಥಿ ಗೃಹದಲ್ಲಿ ಸಚಿವ ರಾಜಶೇಖರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸ್ಥಳೀಯ ಶಾಸಕ ರಹೀಂ ಖಾನ್ ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಸೇರಿದಂತೆ ಕಾಂಗ್ರೇಸ್ ನ ನಾಯಕರುಗಳು ತಡರಾತ್ರಿ 12ಗಂಟೆವರೆಗೂ ಜಿಪಿ ಅಧ್ಯಕ್ಷೆ ಬದಲಾವಣೆ ಕುರಿತು ಹಾಗೂ ಸ್ಥಾಯಿ ಸಮೀತಿ ಚುನಾವಣೆ ಕುರಿತು ಸಾಕಷ್ಟು ಚರ್ಚೆ ನಡೆಸಿದ್ರು ಎನ್ನಲಾಗಿದೆ.

ಈ ಚರ್ಚೆಯಲ್ಲಿ ಒಮ್ಮತವಿಲ್ಲದ ಕಾರಣ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಲಾಗಿದ್ದು, ಜೊತೆಗೆ ಜಿಲ್ಲಾಪಂಚಾಯತ್ ಸಭೆ ಸಹ ಮುಂದೂಡಲಾಗಿದ್ದು, ನಾವು ಯಾಕಾದ್ರು ಜಿಲ್ಲಾಪಂಚಾಯತ್ ಸದಸ್ಯರು ಆಗಿದ್ದೇವೆ ಎಂದು ಜಿಲ್ಲಾಪಂಚಾಯತ್ ಸದ್ಯರು ಆಕ್ರೋಶ ವ್ಯಕ್ತಪಡೆಸುತ್ತಿದ್ದಾರೆ.

ಮತ್ತೊಂದು ಕಡೆ ಜಿಲ್ಲಾಪಂಚಾಯತ್ ಅಧ್ಯಕ್ಷೆ ಭರತಭಾತಯಿ ನನ್ನ ಅವಧಿ ಮುಗಿದಿದೆ ಎಂದು ಅವ್ರು ಹೈಕಮಾಂಡ್ ಬಳಿ ಹೋಗಿ ಹೇಳಲಿ, ಈ ರೀತಿ ಮಾಡುವುದು ಸರಿಯಲ್ಲಾ ಎಂಬುದು ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಭರತಭಾಯಿ ಹಾಗೂ ಬಿಜೆಪಿ ಸದಸ್ಯೆ ಶಕುಂತಲಾ ಬೆಲ್ದಾಳೆ ಮಾತಾಗಿದೆ.

ರಾಜ್ಯಮಟ್ಟದಲ್ಲಿ ಮಂತ್ರಿ ಸ್ಥಾನಕ್ಕಾಗಿ ನಾ ನೀ ಅಂತಾ ಕಿತ್ತಾಟ ನಡೆದ್ರೇ, ಇತ್ತ ಬೀದರ್‌ ಜಿಲ್ಲಾಮಟ್ಟದಲ್ಲಿ ಜಿಲ್ಲಾಪಂಚಾಯತ್ ಅಧ್ಯಕ್ಷರ ಅವಧಿಗೂ ಮುನ್ನ ಅಧ್ಯಕ್ಷ ಗಾದಿಗಾಗಿ ಫೈಟ್ ನಡೆದಿದೆ. ಇದರಿಂದಾಗಿ ಕಳೆದ ಹಲವು ದಿನಗಳಿಂದ ಜಿಲ್ಲಾಪಂಚಾಯತ್ ಸಭೆಗಳು ಮೂದೂಡಲಾಗುತ್ತಿದೆ ಎನ್ನಲಾಗಿದೆ.

ಅದೇನೇ ಇರಲಿ ಅಧ್ಯಕ್ಷರ ಗಾದಿಗಾಗಿ ನಡೆಯುತ್ತಿರು ಫೈಟ್ ನಲ್ಲಿ ಜನಸಾಮಾನ್ಯರು ಪರದಾಡುವಂತಾಗುತ್ತಿದ್ದು ಮಾತ್ರ ವಿಪರ್ಯಾಸವೇ ಸರಿ. ಇದನ್ನು ಆದಷ್ಟು ಬೇಗ ಉಭಯ ಪಕ್ಷದ ಸದಸ್ಯರು ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಂಡು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂಬುದು ನಮ್ಮ ಆಶಯ.

ವರದಿ : ವಿಶ್ವಕುಮಾರ್, ಟಿವಿ5 ಬೀದರ್

Next Story

RELATED STORIES