Top

ಏಷ್ಯಾಕಪ್​: ಪಾಕ್ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್​

ಏಷ್ಯಾಕಪ್​: ಪಾಕ್ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್​
X

ಮಾರಕ ದಾಳಿ.. ಬಿರುಸಿನ ಬ್ಯಾಟಿಂಗ್​.. ಮಿಂಚಿನ ಕ್ಷೇತ್ರರಕ್ಷಣೆ.. ಹೀಗೆ ಎಲ್ಲಾ ವಿಭಾಗದಲ್ಲೂ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ಏಷ್ಯಾಕಪ್​ ಕ್ರಿಕೆಟ್ ಟೂರ್ನಿಯಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ 8 ವಿಕೆಟ್​ಗಳ ಭಾರೀ ಅಂತರದಿಂದ ಬಗ್ಗುಬಡಿಯಿತು.

ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 43.1 ಓವರ್ ಗಳಲ್ಲಿ 163 ರನ್ ಗಳಿಗೆ ಆಲೌಟ್ ಮಾಡಿದ ಭಾರತ ತಂಡ ಸುಲಭ ಗುರಿಯನ್ನು 29 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಮುಟ್ಟಿತು.

ನಾಯಕ ರೋಹಿತ್ ಶರ್ಮಾ (52) ಮತ್ತು ಶಿಖರ್ ಧವನ್ (46) ಮೊದಲ ವಿಕೆಟ್​ಗೆ 86 ರನ್‍ ಪೇರಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು.

ನಂತರ ಬಂದ ಬಂದ ಅಂಬಟಿ ರಾಯ್ಡು ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಅಜೇಯ 31 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡಕ್ಕೆ ಭಾರತೀಯ ವೇಗಿಗಳು ಆರಂಭಿಕ ಆಘಾತ ನೀಡಿದರು. 3 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕ್ ತಂಡವನ್ನು ಅನುಭವಿ ಬ್ಯಾಟ್ಸ್ ಮನ್ ಶೋಯೆಬ್ ಮಲಿಕ್ (43), ಬಾಬರ್ ಅಜಾಮ್ (47) ತಂಡಕ್ಕೆ ಚೇತರಿಕೆ ನೀಡಿದರು.

ಅರ್ಧಶತಕದ ಹೊಸ್ತಿಲಲ್ಲಿ ಈ ಇಬ್ಬರೂ ಔಟಾಗುತ್ತಿದ್ದಂತೆ ತಂಡ ಮತ್ತೊಮ್ಮೆ ನಾಟಕೀಯ ಕುಸಿತಕ್ಕೆ ಒಳಗಾಗಿ ಬೃಹತ್ ಮೊತ್ತ ದಾಖಲಿಸುವ ಅವಕಾಶದಿಂದ ವಂಚಿತವಾಯಿತು.

ಭಾರತ ಪರ ಭುವನೇಶ್ವರ್ ಕುಮಾರ್ ಮತ್ತು ಕೇದಾರ್ ಜಾಧವ್ ತಲಾ 3 ವಿಕೆಟ್ ಕಬಳಿಸಿದರೆ, ಜಸ್​ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರು.

  • ಸಂಕ್ಷಿಪ್ತ ಸ್ಕೋರ್
  • ಪಾಕಿಸ್ತಾನ 43.1 ಓವರ್ 162 (ಬಾಬರ್ ಅಜಮ್ 47, ಶೋಯೆಬ್ ಮಲ್ಲಿಕ್ 43, ಭುವನೇಶ್ವರ್ 15ಕ್ಕೆ 3, ಕೇದಾರ್ ಜಾಧವ್ 23ಕ್ಕೆ3)
  • ಭಾರತ 29 ಓವರ್ 2 ವಿಕೆಟ್ 164 (ರೋಹಿತ್ 52, ಧವನ್ 46, ಶಾದಾಬ್ 6ಕ್ಕೆ1, ಫಾಹಿಮ್ ಆಸ್ರಫ್ 31ಕ್ಕೆ1)
  • ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್

Next Story

RELATED STORIES