Top

ಪ್ರವಾಸಿ ತಾಣಗಳಿಗೆ ರಾಯಭಾರಿ ಆಗ್ತಾರಾ ಯದುವೀರ್..?

ಪ್ರವಾಸಿ ತಾಣಗಳಿಗೆ ರಾಯಭಾರಿ ಆಗ್ತಾರಾ ಯದುವೀರ್..?
X

ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ್ ಅರಸ್‌ರನ್ನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿ ಮಾಡಿದ್ದು, ಕೊಡಗಿನ ಪ್ರವಾಸಿ ತಾಣಗಳಿಗೆ ಯದುವೀರ್ ರಾಯಭಾರಿಯಾಗುವಂತೆ ಮನವಿ ಮಾಡಿದ್ದಾರೆ.

ಮೈಸೂರು ಅರಮನೆಗೆ ಭೇಟಿ ನೀಡಿದ್ದ ಸಾ.ರಾ.ಮಹೇಶ್, ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿ ಜಿಲ್ಲೆಯ ಪ್ರವಾಸಿ ಕೇಂದ್ರಗಳ ರಾಯಭಾರಿಯಾಗಲು ಮನವಿ ಮಾಡಿದ್ದಾರೆ.

ಸಾ.ರಾ.ಮಹೇಶ್ ಯದುವೀರ್‌ ಜೊತೆ ಪ್ರವಾಸೋದ್ಯಮ ಅಭಿವೃದ್ದಿ ವಿಚಾರವಾಗಿ ಗಂಭೀರ ಚರ್ಚೆ ನಡೆಸಿದ್ದು, ಯದುವೀರ್ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಯದುವೀರ್, ನಾಲ್ಕು ಜಿಲ್ಲೆಗಳ ಪ್ರವಾಸಿ ರಾಯಭಾರಿಯಾಗಲಿದ್ದಾರೆ.

Next Story

RELATED STORIES