Top

'ವರಿಷ್ಠರು ಸೂಚನೆ ಕೊಟ್ರೆ ಆಪರೇಷನ್ ಜೆಡಿಎಸ್‌ಗೆ ಸಿದ್ಧ'

ವರಿಷ್ಠರು ಸೂಚನೆ ಕೊಟ್ರೆ ಆಪರೇಷನ್ ಜೆಡಿಎಸ್‌ಗೆ ಸಿದ್ಧ
X

ಮಂಡ್ಯ: ವರಿಷ್ಠರು ಸೂಚನೆ ಕೊಟ್ರೆ ಆಪರೇಶನ್ ಜೆಡಿಎಸ್ ಮಾಡಲು ನಾವು ಸಿದ್ಧ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿ ಮಾತನಾಡಿದ ಸುರೇಶ್ ಗೌಡ, ವರಷ್ಠರು ಸೂಚನೆ ಕೊಟ್ರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಇಲ್ಲದ ಹಾಗೆ ಮಾಡ್ತೀವಿ. ವರಿಷ್ಠರು ಸೂಚನೆ ಕೊಟ್ರೆ ಆಪರೇಷನ್ ಜೆಡಿಎಸ್ ಮಾಡೋದೆ ಎಂದು ಹೇಳಿದ್ದಾರೆ.

ಅಲ್ಲದೇ, ಶಾಸಕರನ್ನು ಹೇಗೆ ಸೆಳೆದು ತರಬೇಕೆಂದು ನಮಗೆ ಗೊತ್ತು. ಬಹುತೇಕ ಬಿಜೆಪಿ ಶಾಸಕರು ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಬಿಜೆಪಿಯಿಂದ ನನಗೊಬ್ಬನಿಗಲ್ಲ. ಜೆಡಿಎಸ್, ಕಾಂಗ್ರೆಸ್ ನ ಬಹುತೇಕ ಶಾಸಕರಿಗೆ ಆಫರ್ ಬಂದಿದೆ. ಹೆಚ್ಡಿಕೆ, ಡಿಕೆಶಿ, ಕೆಲ ಮಂತ್ರಿಗಳು ಬಿಟ್ಟು ಇನ್ನೆಲ್ಲರಿಗೂ ಬಿಜೆಪಿ ಆಫರ್ ಮಾಡಿದ್ದಾರೆ ಎಂದು ಹೇಳಿದರು.

ಅಲ್ಲದೇ ಆಫರ್ ಬಗ್ಗೆ ಮಾತನಾಡಿದ ಸುರೇಶ್ ಗೌಡ, ಹೆಚ್ಡಿಕೆ ಸಿಎಂ ಆದ ದಿನದಿಂದಲೂ ನಿತ್ಯ ಆಫರ್ ಕೊಡ್ತಾನೆ ಇದ್ದಾರೆ. ನನಗೂ ಆಫರ್ ಬಂದಿದೆ ಬಟ್ ನಾನು ಮಾರಾಟಕ್ಕಿಲ್ಲ ಎಂದು ಹೇಳಿದ್ದಾರೆ. ಪವರ್ ಬ್ರೋಕರ್ಸ್‌ಗಳಿಂದ ನನಗೆ ಆಫರ್ ಬಂದಿತ್ತು. ಪವರ್ ಬ್ರೋಕರ್ಸ್‌ ಎಲ್ಲಾ ಪಕ್ಷಗಳ ಶಾಸಕರ ಜೊತೆ ಚೆನ್ನಾಗಿರ್ತಾರೆ. 18 ಮಂದಿ ಶಾಸಕರು ರಾಜೀನಾಮೆ ಕೊಟ್ಟು ಮತ್ತೆ ಗೆಲ್ಲೋದು ಅಷ್ಟು ಸುಲಭ ಅಲ್ಲ ಎಂದಿದ್ದಾರೆ.

Next Story

RELATED STORIES