Top

ಸಿದ್ದು ಭೇಟಿ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ಸಿದ್ದು ಭೇಟಿ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ
X

ಸಿದ್ದರಾಮಯ್ಯ ವಿಚಾರದಲ್ಲಿ ಯಾವುದೇ ಕೋಪವಿಲ್ಲ. ಅವರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲ. ಅವರು ಮತ್ತು ನಾವು ಒಂದೇ ಪಕ್ಷದಲ್ಲಿದ್ದೇವೆ. ಅಗತ್ಯ ಬಿದ್ದಾಗ ಭೇಟಿ ಮಾಡುತ್ತೇನೆ ಎಂದು ಬಂಡಾಯ ಘೋಷಿಸಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಸಂಬಂಧ ಚರ್ಚಿಸಲು ಎಲ್ಲರೂ ದೆಹಲಿಗೆ ಹೋಗಿದ್ದಾರೆ. ಹಾಗಾಗಿ ನಾನು ಅವರ ಜೊತೆ ಹೋಗಿಲ್ಲ. ಪಕ್ಷ ಹಾಗೂ ಜಿಲ್ಲೆಯ ವಿಷಯ ಕುರಿತು ಮಾತನಾಡಲು ನಾನು ದೆಹಲಿಗೆ ಪ್ರತ್ಯೇಕವಾಗಿ ಹೋಗುತ್ತಿದ್ದೇನೆ ಎಂದರು.

ನಮ್ಮ‌ಸಮಸ್ಯೆ ಸರ್ಕಾರಕ್ಕೆ ಸಂಬಂದಿಸಿದ್ದು. ಹಾಗಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇವೆ. ನಿನ್ನೆ ಎಲ್ಲಾ ಸಮಸ್ಯೆಗಳೂ ಬಗೆಹರಿದಿದೆ. ರಾಜ್ಯನಾಯಕರ ವಿರುದ್ಧ ಅಸಮಾಧಾನ ವಿಚಾರ ರಾಹುಲ್ ಗಾಂಧಿ ಅವರಿಗೂ ಗೊತ್ತಿದೆ. ಸ್ವಲ್ಪ ಅಸಮಾಧಾನ ಇರುವುದು ನಿಜ ಎಂದು ಜಾರಕಿಹೊಳಿ ಹೇಳಿದರು.

ಬದಾಮಿಯಲ್ಲೂ ನಮ್ಮ‌ಸಾಮರ್ಥ್ಯ ತೋರಿಸಿದ್ದೇವೆ. ನಂಜನಗೂಡು, ಬಾದಾಮಿಯಲ್ಲೂ ಕೆಲಸ ಮಾಡಿದ್ದೇವೆ. ಉಪ ಚುನಾವಣೆಗಳಲ್ಲೂ ಕೆಲಸ ಮಾಡಿದ್ದೇವೆ. ಪಕ್ಷ ಅವಕಾಶ ಕೊಟ್ಟರೆ ಎಲ್ಲ ಕೆಲಸ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ವಿವರಿಸಿದರು.

ಸಚಿವ ಸ್ಥಾನಕ್ಕೆ ನಾನೇನು ಬೇಡಿಕೆಯಿಟ್ಟಿಲ್ಲ. ಪಕ್ಷ ಕೊಟ್ಟರೆ ಕೆಲಸ ಮಾಡಿ ತೋರಿಸುತ್ತೇನೆ. ಸಚಿವ ಡಿಕೆಶಿ ಅನಾರೋಗ್ಯ ವಿಚಾರ ತಿಳಿದಿದೆ. ಅವರು ಮನೆಗೆ ಬಂದಾಗ ಭೇಟಿಯಾಗುತ್ತೇನೆ. ನಮ್ಮ ನಡುವೆ ವೈಮನಸ್ಸು ಇಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದರು.

Next Story

RELATED STORIES