Top

ಏಷ್ಯಾಕಪ್: ಹಾಂಕಾಂಗ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ಏಷ್ಯಾಕಪ್: ಹಾಂಕಾಂಗ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
X

ಆರಂಭಿಕ ಶಿಖರ್ ಧವನ್ ಶತಕದ ಹೊರತಾಗಿಯೂ ಭಾರತ ತಂಡ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್​ಗೆ 285 ರನ್ ದಾಖಲಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಹಾಂಕಾಂಗ್ 50 ಓವರ್ ಗಳಲ್ಲಿ 8 ವಿಕೆಟ್​ಗೆ 259 ರನ್ ಪೇರಿಸಿತು. ಇದರೊಂದಿಗೆ ಭಾರತ 26 ರನ್​ ಗೆಲುವಿನೊಂದಿಗೆ ನಿಟ್ಟುಸಿರುಬಿಟ್ಟಿತು.

ಹಾಂಕಾಂಗ್ ವಿಕೆಟ್ ನಷ್ಟವಿಲ್ಲದೇ 174 ರನ್ ಪೇರಿಸಿತ್ತು. ಈ ಹಂತದಲ್ಲಿ ಭಾರತದಲ್ಲಿ ಸೋಲಿನ ಭೀತಿ ಆವರಿಸಿತ್ತು. ನಿಜಕತ್ ಖಾನ್ 115 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 92 ರನ್ ಸಿಡಿಸಿ ಶತಕ ವಂಚಿತರಾದರು. ನಾಯಕ ಅನ್ಸುಮನ್ ರಥ್ 97 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 73 ರನ್ ಗಳಿಸಿದರು.

ಈ ಜೋಡಿ ಬೇರ್ಪಡುತ್ತಿದ್ಧಂತೆ ತಂಡ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿ ಗೆಲುವಿನ ಹಾದಿಯಿಂದ ನಿರ್ಗಮಿಸಿತು. ಭಾರತದ ಪರ ಚೊಚ್ಚಲ ಪಂದ್ಯವಾಡಿದ ಖಲೀಲ್ ಅಹ್ಮದ್ ಮತ್ತು ಯಜುರ್ವೆಂದ್ರ ಚಾಹಲ್ ತಲಾ 3 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಶಿಖರ್ ಧವನ್ ಶತಕದ ನೆರವಿನಿಂದ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 127 ರನ್ ಸಿಡಿಸಿದರು. ಅಲ್ಲದೇ 60 ರನ್ ಗಳಿಸಿದ ಅಂಬಟಿ ರಾಯುಡು ಜೊತೆ 2ನೇ ವಿಕೆಟ್​ಗೆ 116 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿತು.

  • ಸಂಕ್ಷಿಪ್ತ ಸ್ಕೋರ್
  • ಭಾರತ 50 ಓವರ್ 7 ವಿಕೆಟ್​ 285 (ಧವನ್ 127, ರಾಯುಡು 60, ಕಾರ್ತಿಕ್ 33, ರೋಹಿತ್ 23, ಕಿಂಚಿಟ್ ಶಾ 39/3 ಏಸ್ಹಾನ್ ಖಾನ್ 65/2).
  • ಹಾಂಕಾಂಗ್ 50 ಓವರ್ 8 ವಿಕೆಟ್ 259 (ನಿಜಾಕತ್ 92, ರಥ್ 73, ಎಸ್ಹಾನ್ ಖಾನ್ 22, ಖಲೀಲ್ 48/3, ಚಾಹಲ್ 46/3, ಕುಲದೀಪ್ 42/2).
  • ಪಂದ್ಯಶ್ರೇಷ್ಠ: ಶಿಖರ್ ಧವನ್

Next Story

RELATED STORIES