Top

ಫೋಟೋಶೂಟ್‌ನಲ್ಲಿ ಭಾಗಿಯಾದ ದಸರಾ ಗಜಪಡೆ

ಫೋಟೋಶೂಟ್‌ನಲ್ಲಿ ಭಾಗಿಯಾದ ದಸರಾ ಗಜಪಡೆ
X

ಮೈಸೂರು: ವಿಜಯದಶಮಿ ದಸರಾಗೆ ಕೆಲವೇ ದಿನಗಳು ಬಾಕಿಯಿದ್ದು, ಗಜಪಡೆಗಳ ತಾಲೀಮು ಭರದಿಂದ ಸಾಗಿದೆ. ಹಾಗೆಯೇ ಇಂದು ಅಂಬಾವಿಲಾಸ ಅರಮನೆ ಮುಂಭಾಗ, ಗಜಪಡೆಯ ಫೋಟೋಶೂಟ್ ಮಾಡಿಸಲಾಯಿತು.

ಅರಮನೆ ಮುಂಭಾಗ, ಗಜಪಡೆಗಳ ಫೋಟೋಶೂಟ್‌ ನಡೆದಿದ್ದು, ಗಜಪಡೆಗೆ ಕಲಾವಿದರು ಸಾಥ್ ನೀಡಿದರು. ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದ ಆನೆಗಳು, ಸೊಂಡಿಲೆತ್ತಿ ಸೆಲ್ಯೂಟ್ ಮಾಡಿದವು.

ಕೆ.ಎಸ್.ಟಿ.ಡಿ.ಸಿ ಬ್ರೌಚರ್‌ಗಾಗಿ ಈ ಫೋಟೋಶೂಟ್ ನಡೆದಿದ್ದು, ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ತಯಾರಾಗುತ್ತಿದೆ.

ಇನ್ನು ಬ್ರೌಚರ್‌ಗಾಗಿಯೇ ಮೊದಲ ಬಾರಿ ಆನೆಗಳ ಫೋಟೋಶೂಟ್ ಮಾಡಲಾಗಿದ್ದು, ವಿಭಿನ್ನವಾಗಿತ್ತು. ಗಜಪಡೆಯ ಮುಂದೆ ಮಾಡೆಲ್, ಯಕ್ಷಗಾನ ಕಲಾವಿದ, ಭರತನಾಟ್ಯ ಕಲಾವಿದೆಯರು ನಿಂತು ಪೋಸ್ ಕೊಟ್ರು.

Next Story

RELATED STORIES