Top

ಒಂದೇ ಸಿನಿಮಾದಲ್ಲಿ ದರ್ಶನ್​, ಶಿವಣ್ಣ?

ಒಂದೇ ಸಿನಿಮಾದಲ್ಲಿ ದರ್ಶನ್​, ಶಿವಣ್ಣ?
X

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ? ಇಂತಹದ್ದೊಂದು ಇಬ್ಬರು ಅಭಿಮಾನಿಗಳ ಬಹು ವರ್ಷದ ಕನಸು ನನಸಾಗುವ ಕಾಲ ಬಂದಿದೆ.

ದರ್ಶನ್ ಹಾಗೂ ಶಿವಣ್ಣ ಇಬ್ಬರು ಸದ್ಯದಲ್ಲೇ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ದಿಗ್ಗಜರನ್ನು ಒಂದು ಮಾಡ್ತಿರೋದು ಸ್ಟಾರ್ ಸಿನಿಮಾ ಡೈರೆಕ್ಟರ್ ಅರಸು ಚಿತ್ರ ಖ್ಯಾತಿಯ ಮಹೇಶ್ ಬಾಬು. ಮಹೇಶ್ ಬಾಬು ಬಹುತಾರಾಗಣದ ಚಿತ್ರದಲ್ಲಿ ಇಬ್ಬರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಇದೇ ವಿಷಯವಾಗಿ ದರ್ಶನ್ ಅವರನ್ನು ಸಂಪರ್ಕಿಸಿರುವ ನಿರ್ದೇಶಕರಿಗೆ ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಳ್ಳೆಯ ಕಥೆ ಇದ್ದರೆ ಖಂಡಿತ ಮಾಡೋಣ ಎಂದಿದ್ದಾರೆ.

ಶಿವರಾಜ್ ಕುಮಾರ್ ಕೂಡ ಇಂತಹ ಪ್ರಯತ್ನಕ್ಕೆ ಇಲ್ಲ ಅನ್ನೋದಿಲ್ಲ ಎನ್ನೋದು ನಿರ್ದೇಶಕ ವಿಶ್ವಾಸ. ಆದ್ದರಿಂದ ಇಬ್ಬರಿಗೂ ಹೊಂದುವ ಕಥೆಯ ತಯಾರಿಯಲ್ಲಿದ್ದಾರೆ ಮಹೇಶ್ ಬಾಬು. ಒಂದು ವೇಳೆ ಸ್ಟೋರಿ ಸಿಗದಿದ್ದರೆ ಇಬ್ಬರಿಗಾಗಿ ರಿಮೇಕ್ ಸಿನಿಮಾ ಮಾಡಲು ಸಿದ್ದ ಎಂದಿದ್ದಾರೆ ಮಹೇಶ್ ಬಾಬು.

ಇನ್ನು ಈ ಕ್ರೇಜಿ ಕಾಂಬೀನೇಷನ್​ಗೆ ನಿರ್ಮಾಪಕರು ಕೂಡ ನಾ ಮುಂದು ತಾ ಮುಂದು ಎನ್ನುತ್ತಿದ್ದು, ಬಿಗ್ ಬಜೆಟ್​​ನಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ನಿರ್ದೇಶಕರು. ಕಥೆಯ ಹುಡುಕಾಟದಲ್ಲಿರುವ ನಿರ್ದೇಶಕ ಮಹೇಶ್ ಬಾಬು ಸದ್ಯದಲ್ಲೆ ಶಿವಣ್ಣ, ದಚ್ಚು ಕಾಂಬೀನೇಷನ್ ಸಿನಿಮಾ ಆರಂಭಿಸಲಿದ್ದಾರೆ.

ದರ್ಶನ್ , ಶಿವಣ್ಣ ಒಂದೇ ಸಿನಿಮಾದಲ್ಲಿ ಕಾಣಿಸಿಗಲಿದ್ದಾರೆ ಎಂಬ ಸುದ್ದಿ ಇಬ್ಬರ ಅಭಿಮಾನಿ ಬಳಗದಲ್ಲಿ ಪುಳಕ ತಂದಿದೆ. ಯಾವಾಗ ಈ ಸುಸಂದರ್ಭವನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳುತ್ತೇವೋ ಎಂದು ಎದುರು ನೋಡುತ್ತಿದ್ದಾರೆ ಭಕ್ತ ವೃಂದ.

ಭಾರತಿ ಜಾವಳ್ಳಿ, ಎಂಟ್ರಟೈನ್​​ಮೆಂಟ್ ಬ್ಯೂರೋ ಟಿವಿ5

Next Story

RELATED STORIES