Top

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ: ಲೆಕ್ಕಾಚಾರದಲ್ಲಿ ಅಭಿಮಾನಿಗಳು!

ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ: ಲೆಕ್ಕಾಚಾರದಲ್ಲಿ ಅಭಿಮಾನಿಗಳು!
X

ಜಗತ್ತಿನ ಅತೀ ದೊಡ್ಡ ಪ್ರಬಲ ಎದುರಾಳಿಗಳು.. ಸಾಂಪ್ರದಾಯಿ ವಿರೋಧಿಗಳು.. ಮುಖಾಮುಖಿ ಆದರೆ ತೂದಿಗಾಲಲ್ಲಿ ಕೂರಿಸುವ ಪಂದ್ಯದ ರೋಚಕತೆ.. ಹೀಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಂದರೆ ಇಡೀ ಜಗತ್ತು ಎದುರು ನೋಡುತ್ತದೆ. ಬುಧವಾರ ನಡೆಯುವ ಎರಡು ಮದಗಜಗಳು ಎರಡು ವರ್ಷದ ನಂತರ ಮತ್ತೆ ಮುಖಾಮುಖಿ ಆಗುತ್ತಿದ್ದು, ಇಡೀ ಜಗತ್ತಿನ ದೃಷ್ಟಿ ದುಬೈ ಮೇಲೆ ನೆಟ್ಟಿದೆ.

2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಮುಖಾಮುಖಿ ಆದ ನಂತರ ಮೊದಲ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗುತ್ತಿವೆ. ಭಾರತ ತಂಡದಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡುತ್ತಿದ್ದರೆ, ಪಾಕಿಸ್ತಾನದಲ್ಲಿ ಹೊಸ ಮುಖಗಳು ಕಾಣಿಸಿಕೊಂಡಿವೆ.

ಏಷ್ಯಾಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೇ ಪ್ರಧಾನ ಆಕರ್ಷಣೆ. ಏಷ್ಯಾಕಪ್​ನಲ್ಲಿ ಎರಡೂ ತಂಡಗಳು 12 ಬಾರಿ ಮುಖಾಮುಖಿ ಆಗಿವೆ. ಭಾರತ 6 ಬಾರಿ ಜಯಭೇರಿ ಬಾರಿಸಿದರೆ, ಪಾಕಿಸ್ತಾನ 5 ಬಾರಿ ಗೆದ್ದಿದೆ. ಒಂದು ಪಂದ್ಯದ ಫಲಿತಾಂಶ ಹೊರಬಂದಿಲ್ಲ.

1990-91ರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮಾತ್ರ ಪಾಲ್ಗೊಂಡಿತ್ತು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಭಾರತದ ಗೆಲುವು

 • 1983-84ರ ಫೈನಲ್​ನಲ್ಲಿ ಭಾರತ (184/4) 56 ರನ್ ಗಳಿಂದ ಪಾಕಿಸ್ತಾನ (134) ತಂಡವನ್ನು ಸೋಲಿಸಿತ್ತು.
 • 1988-89ರಲ್ಲಿ ಭಾರತ (143/6) 4 ವಿಕೆಟ್​ಗಳಿಂದ ಪಾಕಿಸ್ತಾನ (142) ತಂಡವನ್ನು ಸೋಲಿಸಿತು. ನಂತರ ಲಂಕಾ ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
 • 2008 ಭಾರತ (301/4) 6 ವಿಕೆಟ್​ಗಳಿಂದ ಪಾಕಿಸ್ತಾನ (299) ತಂಡವನ್ನು ಮಣಿಸಿತು.
 • 2010ರಲ್ಲಿ ಭಾರತ (271/7) 3 ವಿಕೆಟ್​ ಗಳಿಂದ ಪಾಕಿಸ್ತಾನ ತಂಡವನ್ನು (267) ಸೋಲಿಸಿತು.
 • 2011-12ರಲ್ಲಿ ಭಾರತ (330/4) 6 ವಿಕೆಟ್​ಗಳಿಂದ ಪಾಕಿಸ್ತಾನ ವಿರುದ್ಧ (329/6) ಜಯಭೇರಿ ಬಾರಿಸಿತು.
 • 2016ರಲ್ಲಿ ಭಾರತ (85/5) 5 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು (83) ಸೋಲಿಸಿತು.

  ಪಾಕಿಸ್ತಾನ ಜಯ

 • 1994/95ರಲ್ಲಿ ಪಾಕಿಸ್ತಾನ (266/9) 97 ರನ್​ಗಳಿಂದ ಭಾರತ ವಿರುದ್ಧ (197) ಜಯ ಗಳಿಸಿತು.
 • 2000ರಲ್ಲಿ ಪಾಕಿಸ್ತಾನ (295/7) 44 ರನ್​ಗಳಿಂದ ಭಾರತ ವಿರುದ್ಧ (251/7) ಜಯ ಗಳಿಸಿತು.
 • 2004ರಲ್ಲಿ ಪಾಕಿಸ್ತಾನ (300/9) 59 ರನ್ ಗಳಿಂದ ಭಾರತ ವಿರುದ್ಧ (241/8) ಜಯ ಗಳಿಸಿತು.
 • 2008ರಲ್ಲಿ ಪಾಕಿಸ್ತಾನ (309/2) 8 ವಿಕೆಟ್​ಗಳಿಂದ ಭಾರತ ವಿರುದ್ಧ (308/7) ಜಯ ಗಳಿಸಿತು.
 • 2013-14ರಲ್ಲಿ ಪಾಕಿಸ್ತಾನ (249/9) 1 ವಿಕೆಟ್​ನಿಂದ ಭಾರತ ವಿರುದ್ಧ (245/8) ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.

Next Story

RELATED STORIES