Top

ದೇವದಾಸ ಚಿತ್ರದಲ್ಲಿನ ರಶ್ಮಿಕಾ ಫಸ್ಟ್ ಲುಕ್ ಬಿಡುಗಡೆ

ದೇವದಾಸ ಚಿತ್ರದಲ್ಲಿನ ರಶ್ಮಿಕಾ ಫಸ್ಟ್ ಲುಕ್ ಬಿಡುಗಡೆ
X

ರಶ್ಮಿಕಾ ಮಂದಣ್ಣ... ಕರ್ನಾಟಕ ಕ್ರಶ್... ಕಿರಿಕ್ ಪಾರ್ಟಿಯ ಈ ಚೆಲುವೆಗೆ ಈಗ ಕಲರ್ ಫುಲ್ ದುನಿಯಾದಲ್ಲಿ ಸಿಕ್ಕಾಪಟ್ಟೆ ಬೇಡಿಕೆ. ಚಂದನವನದಲ್ಲಿ ಮಿಂಚುತ್ತಲೇ ತನ್ನ ಮೋಹಕ ನಗೆಯಿಂದ ಟಾಲಿವುಡ್ ಮಂದಿಯ ಚಿತ್ತ ಕದ್ದಾಕೆ. ಸದ್ಯ ಟಾಲಿವುಡ್​ನ ಮೂರು ಸಿನಿಮಾಗಳಲ್ಲಿ ಕೊಡಗಿನ ಕುವರಿ ಫುಲ್ ಬ್ಯುಸಿ.

ಅಕ್ಕಿನೇನಿ ನಾಗರ್ಜುನ ಹಾಗೂ ನಾಣಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ದೇವದಾಸ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿದ್ದಾರೆ. ಇದೀಗ ದೇವದಾಸ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಬಿಡುಗಡೆ ಆಗಿದೆ.

ಪೂಜಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ರಿಲೀಸ್ ಆಗಿರೋ ಪೂಜಾ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಶ್ಮಿಕಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಲುಕ್ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅಕಾಂಕ್ಷ ಸಿಂಗ್ ಚಿತ್ರದ ಇನ್ನೊಬ್ಬ ನಾಯಕಿ.

ದೇವದಾಸ್ ಅಲ್ಲದೆ ವಿಜಯ ದೇವರಕೊಂಡ ಜೊತೆ ಡಿಯರ್ ಕಾಂಮ್ರೆಡ್ ಚಿತ್ರದಲ್ಲಿಯೂ ಕೊಡಗಿನ ಕುವರಿ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.. ಸದ್ಯ ಗೀತ ಗೋವಿಂದಂ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಕೊಡಗಿನ ಕುವರಿಯ ಕೈಯಲ್ಲಿ ಮೂರು ಚಿತ್ರಗಳಿದ್ದು, ಇನ್ನೊಂದು ವರ್ಷ ನಿರ್ದೇಶಕರಿಗೆ ಸಾನ್ವಿಯ ಕಾಲ್ ಶೀಟ್ ಸಿಗೋದು ಅನುಮಾನ.

ಭಾರತಿ ಜಾವಳ್ಳಿ, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES