Top

ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಮೌನ ಮುರಿದ ರಶ್ಮಿಕಾ

ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಮೌನ ಮುರಿದ ರಶ್ಮಿಕಾ
X

ಗಾಂಧಿನಗರದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿರುವ ವಿಷಯ ಅಂದ್ರೆ ಅದು, ರಕ್ಷಿತ್ ರಶ್ಮಿಕಾ ಬ್ರೇಕಪ್ ಸುದ್ದಿ. ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ, ಇದೀಗ ಮೌನ ಮುರಿದಿದ್ದಾರೆ.

ಬ್ರೇಕಪ್ ಸುದ್ದಿ ತಣ್ಣಗಾದ ಹಿನ್ನೆಲೆಯಲ್ಲಿ ರಶ್ಮಿಕಾ ಇನ್‌ಸ್ಟಾಗ್ರಾಂ, ಟ್ವಿಟರ್‌ನಲ್ಲಿ ಈ ವಿಷಯದ ಬಗ್ಗೆ ಬರೆದುಕೊಂಡಿದ್ದಾರೆ. ನಾನು ಇಷ್ಟು ದಿನಗಳ ಕಾಲ ಮೌನವಾಗಿದ್ದಕ್ಕೆ ಕ್ಷಮೆ ಇರಲಿ.

ಆದರೆ ನಾನು ಎಲ್ಲವನ್ನು ಗಮನಿಸಿದ್ದೇನೆ. ನನ್ನ ಬಗ್ಗೆ ಬರಹಗಳು, ಲೇಖನಗಳು, ಟ್ರೋಲ್ ಮಾಡುವವರು, ಕಮೆಂಟ್ ಮಾಡುವವರು ಎಲ್ಲವನ್ನೂ ಗಮನಿಸಿದ್ದೇನೆ.

ಅದಕಾಗಿ ನಿಮ್ಮನ್ನು ನಾನು ದೂಷಿಸುವುದಿಲ್ಲ. ನಿಮ್ಮ ನಂಬಿಕೆ ನಿಮ್ಮದು ನಾನು ಅದನ್ನು ಪ್ರಶ್ನೆ ಮಾಡುವಂತಿಲ್ಲ. ನನಗೆ ಶಾಂತಿ ಹಾಗೂ ನೆಮ್ಮದಿ ಬೇಕಾಗಿದೆ. ರಕ್ಷಿತ್ ಅಥವಾ ನಾನು ಮತ್ಯಾರೆ ಇರಲಿ ಎಲ್ಲರಿಗೂ ತಮ್ಮ ವೈಯಕ್ತಿಕ ಜೀವನವಿದೆ.

ದಯಮಾಡಿ ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾನು ಕನ್ನಡದ ಮಗಳು, ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯ ಮಾಡುತ್ತೇನೆ. ಯಾವುದೇ ಭಾಷೆ ಸಿನಿಮಾಗಳಲ್ಲಿ ಅಭಿನಯ ಮಾಡಿದರೂ ಮೊದಲ ಆದ್ಯತೆ ಮಾತ್ರ ಕನ್ನಡಕ್ಕೆ ಎಂದಿದ್ದಾರೆ.

Next Story

RELATED STORIES