Top

ಹುಟ್ಟುಹಬ್ಬದ ದಿನವೇ ಹೊಸಪಕ್ಷ ಹುಟ್ಟುಹಾಕಿದ ಉಪ್ಪಿ

ಹುಟ್ಟುಹಬ್ಬದ ದಿನವೇ ಹೊಸಪಕ್ಷ ಹುಟ್ಟುಹಾಕಿದ ಉಪ್ಪಿ
X

ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ತಮ್ಮದೇ ಹೊಸ ಪಕ್ಷವನ್ನ ಹುಟ್ಟುಹಾಕುವ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚಾಲನೆ ನೀಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಹಣ,ತೋಳ್ಬಲವಿಲ್ಲದೆ ಗೆದ್ದು ತೋರಿಸ್ತೇವೆ ಅಂತ ಮುನ್ನಗಿದ್ದಾರೆ. ಹಾಗಾದ್ರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಉಪ್ಪಿ ಸಕ್ಸಸ್ ಆಗ್ತಾರಾ?

ಸಿನಿಮಾ ಜೊತೆಗೆ ಜನಪರ ಕಾನ್ಸೆಫ್ಟ್ ಇಟ್ಕೊಂಡು ರಾಜಕಾರಣಕ್ಕೆ ಬಂದವರು ರಿಯಲ್ ಸ್ಟಾರ್ ಉಪೇಂದ್ರ...ವಿಶಿಷ್ಟ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿಯ ಮೂಲಕವೇ ಚಿತ್ರರಂಗದಲ್ಲಿ ಭದ್ರವಾಗಿ ತಳವೂರಿದವರು ಉಪೇಂದ್ರ. ಎ, ಉಪೇಂದ್ರ, ಸೂಪರ್ ಚಿತ್ರಗಳಲ್ಲಿ ವಿಶೇಷ ನಟನೆಯಿಂದಾಗಿ ಗುರ್ತಿಸಿ ಸ್ಟಾರ್ ನಟ,ನಿರ್ದೇಶಕರಾದ ಉಪೇಂದ್ರ ಕಳೆದ ವಿಧಾನಸಭಾ ಚುನಾವಣೆಯ ವೇಳೆಯೂ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದರು. ಕೆಪಿಜೆಪಿಯ ಮೂಲಕ ರಾಜಕಾರಣದಲ್ಲಿ ಗುರ್ತಿಸಿಕೊಳ್ಳೋಕೆ ಮುಂದಾಗಿದ್ರು.

ಪಕ್ಷದ ಸಂಸ್ಥಾಪಕ ಯೋಗೇಶ್ ಗೌಡ ಹಾಗೂ ಉಪೇಂದ್ರ ನಡುವೆ ತಿಕ್ಕಾಟ ನಡೆದು ಅಲ್ಲಿಂದ ಹೊರಬಂದಿದ್ದರು. ರಾಜಕೀಯ ಸಹವಾಸವೇ ಬೇಡವೆಂದು ಸುಮ್ನನಾದ್ರೂ ಬೆಂಬಲಿಗರು, ಕಾರ್ಯಕರ್ತರು ಅವರನ್ನ ಸುಮ್ಮನೆ ಬಿಡಲಿಲ್ಲ.

ಅದೇ ಹಳೆಯ ಜನಪರ ಕಾನ್ಸೆಪ್ಟ್ ಇಟ್ಟುಕೊಂಡೇ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಕರ್ನಾಟಕ ಪ್ರಜ್ನಾವಂತರ ಜನತಾ ಪಕ್ಷಕ್ಕೆ ಭಿನ್ನವಾದ ಉತ್ತಮ ಪ್ರಜಾಕೀಯ ಪಕ್ಷವನ್ನ ಇಂದು ಹುಟ್ಟುಹಾಕಿದ್ದಾರೆ. ಅದೂ ತಮ್ಮ ಜನ್ಮದಿನದಂದೇ.

ಇನ್ನು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳಿಗೆ ಮೊದಲಿನಂತೆಯೇ ಹಲವು ಮಾನದಂಡಗಳನ್ನ ಉಪ್ಪಿ ನೀಡಿದ್ದಾರೆ..ಗ್ರಾಮೀಣ,ವಾರ್ಡ್ ಮಟ್ಟದಲ್ಲಿ ಸಮಸ್ಯೆಗಳ ಅಧ್ಯಯನ ಮಾಡಿ, ಅದನ್ನ ಅಭಿವೃದ್ಧಿ ಪಡಿಸುವ ಬಗ್ಗೆ ತಮ್ಮದೇ ಆದ ವರದಿಗಳನ್ನ ನೀಡಬೇಕು. ಅದರಲ್ಲಿ ಸರಿಯೆನ್ನಿಸುವವರಿಗೆ ಟಿಕೆಟ್ ನೀಡ್ತೇವೆ ಅಂತ ಹೇಳಿದ್ದಾರೆ.

ಹಣಬಲ,ತೋಳ್ಬಲ,ಜಾತಿಬಲಕ್ಕಿಂತ ಸಮಸ್ಯೆಗಳ ಮಾನದಂಡ,ಅಭಿವೃದ್ಧಿಪರವಾದ ನಿಲುವು ನಮ್ಮದು ಅಂತ ಹೇಳಿಕೊಂಡಿದ್ದಾರೆ...ಪಕ್ಷವನ್ನ ಬಲಪಡಿಸಲು ರಾಜ್ಯ ಪ್ರವಾಸ ಮಾಡುವುದಾಗಿಯೂ ಹೇಳಿದ್ದಾರೆ. ಸಾಮಾಜಿಕ‌ ಜಾಲತಾಣದ ಮೂಲಕ ಸದಸ್ಯತ್ವ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಲ್ಲ,ಆದರೆ ಮುಂದಿನ ವಿಧಾನಸಭೆ ಗಮನದಲ್ಲಿಟ್ಟುಕೊಂಡಯ ಕೆಲಸ ಮಾಡ್ತೇವೆ ಅಂತ ಹೇಳಿದ್ದಾರೆ..ಆದ್ರೂ ಲೋಕಸಭೆ ಚುನಾವಣೆಯಲ್ಲಿ ಯಾರಾದ್ರೂ ನಿಲ್ತೇವೆ ಅಂತ ಬಂದರೆ ಟಿಕೆಟ್ ಕೊಡ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ...ಇದ್ರ ಜೊತೆಗೆ ಬೆಂಗಳೂರು ಇಲ್ಲವೇ ತಮ್ಮ ಊರು ಕುಂದಾಪುರದಿಂದ ಸ್ಪರ್ಧಿಸುವ ಇಚ್ಚೆಯನ್ನೂ ವ್ಯಕ್ತಪಡಿಸಿದ್ದಾರೆ.

ತಮ್ಮ ಜನ್ಮದಿನದಂದೇ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷವನ್ನ ಹುಟ್ಟುಹಾಕಿದ್ದಾರೆ. ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ಪತ್ನಿ ಪ್ರಿಯಾಂಕ, ತಂದೆ, ತಾಯಿ, ಸಹೋದರ, ಸಾವಿರಾರು ಬೆಂಬಲಿಗರು, ಅಭಿಮಾನಿಗಳ ಜೊತೆ ಪಕ್ಷಕ್ಕೆ ವಿನೂತನವಾಗಿ ಚಾಲನೆಯನ್ನೂ ನೀಡದ್ದಾರೆ.

ಇನ್ನು ತಮ್ಮದೇ ಆಂಗ್ಲ ಹೆಸರಿನ uppi ಯ ಐ ಅಕ್ಷರವನ್ನ ತೆಗೆದು ಯುಪಿಪಿ ಅಂತ ಮಾಡಿದ್ದಾರೆ. ಪ್ರಜೆಗಳಿಂದ,ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಎಂಬ ಸಂವಿಧಾನದ ಟ್ಯಾಗ್ ಲೈನ್ ಅನ್ನೇ ತಮ್ಮ ಪಕ್ಷಕ್ಕೂ ಕಾಪಿ ಹೊಡೆದಿದ್ದಾರೆ.

Next Story

RELATED STORIES