Top

ಕೃತಕ ಗರ್ಭಧಾರಣೆ: ನಟಿ ಲೀಸಾ ರೇಗೆ ಅವಳಿ ಮಕ್ಕಳ ಜನನ

ಕೃತಕ ಗರ್ಭಧಾರಣೆ: ನಟಿ ಲೀಸಾ ರೇಗೆ ಅವಳಿ ಮಕ್ಕಳ ಜನನ
X

ಬಾಲಿವುಡ್ ನಟಿ ಲೀಸಾ ರೇ ಮತ್ತು ಜೇಸನ್ ಡೆಹ್ನಿ ದಂಪತಿಗೆ ಅವಳಿ ಹೆಣ್ಣು ಮಕ್ಕಳಾಗಿವೆ. ಕೃತಕ ಗರ್ಭಧಾರಣೆ ಮೂಲಕ ರೇ ಮಕ್ಕಳಿಗೆ ಜನ್ಮ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದಾರೆ.

46 ವರ್ಷದ ಲೀಸಾ ರೇ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳೊಂದಿಗೆ ಇರುವ ಫೋಟೋ ಪ್ರಕಟಿಸಿದ್ದಾರೆ. ಸೂಫಿ ಮತ್ತು ಸೊಲೈಲಿ ಎಂದು ಎರಡು ಹೆಣ್ಣುಮಕ್ಕಳಿಗೆ ಹೆಸರಿಡಲಾಗಿದೆ.

ಬಾಂಬೆ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಕೃತಕ ಗರ್ಭಧಾರಣೆ ಕುರಿತು ಮಾಹಿತಿ ಹಂಚಿಕೊಂಡಿದ್ದು, ಮಕ್ಕಳಿಲ್ಲದೇ ಕೊರಗುವವರಿಗೆ ನನ್ನ ಕಥೆ ಸ್ಫೂರ್ತಿಯಾಗಲಿ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸ್ತನ ಕ್ಯಾನರ್​ನಿಂದ ಚೇತರಿಸಿಕೊಂಡ ನಂತರ ಲೀಸಾ ರೇಗೆ ಮಕ್ಕಳು ಆಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಲೀಸಾ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಈಗ ಮಗುವಿಗೆ ಜನ್ಮ ನೀಡಿದ್ದಾರೆ. ಕಷ್ಟ ಕಾಲದಲ್ಲಿ ಜೊತೆಗಿದ್ದ ಪತಿ, ಸ್ನೇಹಿತರು ಎಲ್ಲರಿಗೂ ಲೀಸಾ ಅಭಿನಂದನೆ ಸಲ್ಲಿಸಿದ್ದಾರೆ.

Next Story

RELATED STORIES