Top

'ಬಸವ ವಸತಿ ಯೋಜನೆ'ಯಲ್ಲಿ ಗೋಲ್ ಮಾಲ್ : ನ್ಯಾಯ ಕೇಳಿದ್ರೆ ಸಿಇಓ ಧಮ್ಕಿ.?

ಬಸವ ವಸತಿ ಯೋಜನೆಯಲ್ಲಿ ಗೋಲ್ ಮಾಲ್ : ನ್ಯಾಯ ಕೇಳಿದ್ರೆ ಸಿಇಓ ಧಮ್ಕಿ.?
X

ಬೀದರ್ : ಸೂರು ಇಲ್ಲದ ಬಡ ಕುಟುಂಬದವರಿಗಾಗಿ ಪುಟ್ಟದೊಂದು ಗೂಡು ಇರಲಿ ಅಂತಾ ರಾಜ್ಯ ಸರ್ಕಾರ ವಸತಿಯೋಜನೆಗಳನ್ನ ಜಾರಿಗೆ ತಂದಿದೆ.

ಆದ್ರೆ ಸ್ಥಳೀಯ ಅಧಿಕಾರಿಗಳ ಕುತಂತ್ರದಿಂದ ಬಡ ಜನರಿಗೆ ಸೇರಬೇಕಾದ ಮನೆಗಳು ಮಾತ್ರ ಸಿಗುತ್ತಿಲ್ಲಾ. ಈ ಬಗ್ಗೆ ನ್ಯಾಯ ಕೇಳೊಕೆ ಅಂತಾ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿಗಳ ಬಳಿ ಹೋದ್ರೇ ಅರೆಷ್ಟ್ ಮಾಡಸೋದಾಗಿ ಧಮ್ಮಕಿ ಹಾಕಿದ್ದಾರೆ.

ಹೌದು ಮನೆಗಳು ಇಲ್ಲದವರಿಗೆ ರಾಜ್ಯ ಸರ್ಕಾರ ಮನೆಗಳನ್ನ ಕಟ್ಟಿಕೊಡಲು ಬಸವ ವಸತಿ ಯೋಜನೆ ಜಾರಿಗೆ ತಂದಿದೆ. ಮಹರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮೂರಖಂಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರೊಬ್ಬರಿ 175 ಮನೆಗಳನ್ನ ಮಂಚೂರು ಮಾಡಲಾಗಿತ್ತು.

ಆದ್ರೇ ಗ್ರಾಮದ ಪಿಡಿಓ ಸಂತೋಷ್ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸಹಿ ಇಲ್ಲದೇ ತಮಗೆ ಬೇಕಾದವರಿಗೆ ಮಾತ್ರ ಮನೆ ಹಂಚಿಕೆ ಮಾಡಿದ್ದು ಅಲ್ಲದೇ ಸುಳ್ಳು ದಾಖಲೆಗಳನ್ನ ತೋರಿಸಿ ಬರೊಬ್ಬರಿ 20 ಲಕ್ಷ ರೂಪಾಯಿ ಹಣವನ್ನ ಲಪಟಾಯಿಸಿದ್ದಾನೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ ಗ್ರಾಮದಲ್ಲಿ ಉದ್ಯೋಗ ಖಾತ್ರಿಯಡಿಯಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ಯಾವುದೇ ಕೆಲಸ ಮಾಡದೇ ಹಣವನ್ನ ದುರುಪಯೋಗಪಡೆಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧೀಕಾರಿ ಸೆಲ್ವಂ ಬಳಿ ದೂರು ನೀಡಿ ನಮಗೆ ನ್ಯಾಯ ಒದಗಿಸಿ ಎಂದು ಕೇಳಿದ್ರೆ, ನ್ಯಾಯ ಕೇಳೋಕೆ ಬಂದವರಿಗೆ ಅರೇಷ್ಟ್ ಮಾಡಿಸೋದಾಗಿ ಬೆದರಿಕೆ ಹಾಕುತ್ತಿದ್ದಾರಂತೆ.

ಬೀದರ್‌ ಗಡಿಭಾಗವಾದ್ದರಿಂದ ಈ ಭಾಗದ ಜನ್ರಿಗೆ ಸರಿಯಾದ ಭಾಷೇ ಬಾರದ ಹಿನ್ನಲೆ ನಮ್ಮನ್ನ ಕಡೆಗಣಿಸುತ್ತಿದ್ದಾರೆ ಎಂದು ಮೂರಖಂಡಿ ಗ್ರಾಮಪಂಚಾಯ್ತಿ ಉಪಾಧ್ಯಕ್ಷ ರಾಜೇಂದ್ರ ಹಾಗೂ ಸ್ಥಳೀಯರಾದ ಸಂಜಯ್ ಗಾಯಕವಾಡ್‌ ಆರೋಪ ಮಾಡಿದ್ದಾರೆ.

ಮೂರಖಂಡಿ ಗ್ರಾಮಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ಸಂತೋಷ್ ಮಾಜಿ ಶಾಸಕ ಅಣ್ಣಾರಾವ್ ರಾಥೋಡ್ ಅವ್ರ ಅಳಿಯನಾಗಿದ್ದು, ಮಾವನ ರಾಜಕೀಯ ಬಳಸಿಕೊಂಡು ಗ್ರಾಮದಲ್ಲಿನ ಜನ್ರಿಗೆ ಪ್ರತಿಯೋಂದು ವಿಷಯಕ್ಕೂ ಧಮಕ್ಕಿ ಹಾಕುತ್ತಿದ್ದಾನಂತೆ.

ಮೂರಖಂಡಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುಧೇ ಅಭಿವೃದ್ದಿ ಕಾರ್ಯಮಾಡುತ್ತಿಲ್ಲ. ಅಧಿಕಾರಿಗಯನ್ನ ವರ್ಗಾವಣೆ ಮಾಡಿ ಅಂತಾ ಕೇಳಿಕೊಂಡದ್ರು ಯಾವುದೇ ಪ್ರಯೋಜನವಾಗುತ್ತಿಲ್ಲಾ ಎನ್ನುತ್ತಿದ್ದಾರೆ ಇಲ್ಲಿನ ಸ್ಥಳೀಯರು.

ಇನ್ನು ಬಸವಕಲ್ಯಾಣ ಶಾಸಕ ಬಿ.ನಾರಾಯಣ್ ಅವ್ರನ್ನ ವಿಚಾರಿಸಿದ್ರೇ ಮೂರಖಂಡಿ ಗ್ರಾಮದ ಪಿಡಿಓ ಬಗ್ಗೆ ನನಗೂ ಸಾಕಷ್ಟು ದೂರುಗಳು ಬಂದಿವೆ. ಕೂಡಲೇ ನಾನು ಇತ್ತ ಗಮನಹರಿಸಿ ಇಲ್ಲಿನ ಜನ್ರಿಗೆ ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕ ಹಾಗೂ ಮಹರಾಷ್ಟ್ರ ಗಡಿಭಾಗದ ಜನ್ರಿರಿಗೆ ಕನ್ನಡ ಭಾಷೆ ಸರಿಯಾಗಿ ಬರೋದಿಲ್ಲಾ ಅನ್ನೋ ಕಾರಣಕ್ಕೆ ಸಿಇಓ ಹೀಗೆ ಧಮ್ಮಕಿ ಹಾಕಿದ್ದಾರರೋ ಇಲ್ಲಾ ಗಡಿಭಾಗವಾಗಿದ್ದರಿಂದ ಅಷ್ಟೂದೂರ ಹೋಗಲು ಸಾಧ್ಯವಾಗದ ಕಾರಣಕ್ಕೆ ಭ್ರಷ್ಟರಿಗೆ ಇನ್ನು ಕುಮ್ಮಕ್ಕೂ ನೀಡುತ್ತಿದ್ದಾರೋ ಅನ್ನೂದು ಅನುಮಾನವಾಗಿದೆ..

ಅದೇನೆ ಇರಲಿ, ವಸತಿ ಹೀನರಿಗೆ ವಸತಿ ಕಲ್ಪಿಸಿಕೊಡಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಇಂತಹ ಕೆಸ ಮಾಡದೇ, ಬಡವರ ಯೋಜನೆಯೊಂದು ಉಳ್ಳವರ ಪಾಲಾಗುತ್ತಿರುವುದು ಮಾತ್ರ ದುರಂತವೇ ಸರಿ. ಈ ಬಗ್ಗೆ ಇನ್ನಾದ್ರು ಸಂಭಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಈ ಭಾಗದ ಜನ್ರ ಗೋಳಿಗೆ ಸ್ಪಂದಿಸಬೇಕಿದೆ.

ವರದಿ : ವಿಶ್ವಕುಮಾರ್, ಟಿವಿ5 ಬೀದರ್

Next Story

RELATED STORIES