Top

ಹಣಕ್ಕೆ ಬೆಂಕಿಯಿಟ್ಟು ರಸ್ತೆಬದಿ ಬಿಸಾಕಿದ ದುಷ್ಕರ್ಮಿಗಳು

ಹಣಕ್ಕೆ ಬೆಂಕಿಯಿಟ್ಟು ರಸ್ತೆಬದಿ ಬಿಸಾಕಿದ ದುಷ್ಕರ್ಮಿಗಳು
X

ರಾಯಚೂರು: ರಾಯಚೂರಿನಲ್ಲಿ ಹಳೆಯ 500 ಮತ್ತು 1000 ನೋಟುಗಳು ಪತ್ತೆಯಾಗಿದ್ದು, ರಸ್ತೆ ಪಕ್ಕದಲ್ಲಿ ನೋಟುಗಳನ್ನು ಎಸೆದು ಬೆಂಕಿ ಹಚ್ಚಲಾಗಿದೆ.

ಇಲ್ಲಿನ ಗಂಜ್ ರಸ್ತೆ ಪಕ್ಕದಲ್ಲಿ ಅಪರಿಚಿತರು ನೋಟುಗಳನ್ನು ಎಸೆದು ಬೆಂಕಿ ಹಚ್ಚಿದ್ದು, ನೋಟುಗಳನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ.

ಇನ್ನು ಬಾರ್‌ನಿಂದ ತಂದು ನೋಟುಗಳನ್ನು ಕಸದಲ್ಲಿ ಎಸೆದಿದ್ದಾರೆಂದು ಹೇಳಲಾಗಿದ್ದು, ಇದರಲ್ಲಿ ಹಳೆಯ 500, 1000, ಹಾಗೂ ಸದ್ಯ ಚಲಾವಣೆಯಲ್ಲಿರುವ 100 ರೂಪಾಯಿ ನೋಟುಗಳಿದೆ.

ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾರು ಈ ಕೆಲಸ ಮಾಡಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ.

Next Story

RELATED STORIES