Top

ಐತಿಹಾಸಿಕ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್​?

ಐತಿಹಾಸಿಕ ಮದಕರಿ ನಾಯಕನ ಪಾತ್ರದಲ್ಲಿ ದರ್ಶನ್​?
X

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.. ದಾಸ ದರ್ಶನ್​ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ನಟಿಸೋಕೆ ವೇದಿಕೆ ಸಿದ್ಧವಾಗ್ತಿದೆ. 5 ವರ್ಷಗಳ ಹಿಂದೆ ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್, ಸದ್ಯ ಕುರುಕ್ಷೇತ್ರದ ದುರ್ಯೋಧನನಾಗಿ ದರ್ಬಾರ್ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದರ ಮಧ್ಯೆ ದರ್ಶನ್​, ಚಿತ್ರದುರ್ಗದ ಪಾಳೇಗಾರನ ಅವತಾರದಲ್ಲಿ ಶೌರ್ಯ, ಸಾಹಸ ಪ್ರದರ್ಶಿಸಲಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾದ ಸಿನಿಮಾ.. ಸಂಗೊಳ್ಳಿ ರಾಯಣ್ಣನ ಸಕ್ಸಸ್​​​ ದಶಕಗಳ ನಂತ್ರ ಮತ್ತೆ ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಪ್ರೇರಣೆಯಾಗಿದೆ.. ಈಗಾಗಲೇ ಕುರುಕ್ಷೇತ್ರ ಸಿನಿಮಾ ನಿರ್ಮಾಣವಾಗಿದೆ. ರಾಯಣ್ಣನ ಹಾದಿಯಲ್ಲೇ ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕನ ಸಿನಿಮಾ ಸೆಟ್ಟೇರ್ತಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ರೋಲ್ ಪ್ಲೇ ಮಾಡ್ತಿದ್ದಾರೆ.

ವೀರ ಪಾಳೇಗಾರನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಣ್ಣ ಹಚ್ಚಲಿದ್ದಾರೆ.. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ರಾಯಣ್ಣನಾಗಿ ಕಮಾಲ್ ಮಾಡಿದ ಸಾರಥಿ, ಮತ್ತೆ ಕತ್ತಿ ಹಿಡಿದು ಮೀಸೆ ತಿರುವೋಕೆ ಸಿದ್ಧವಾಗ್ತಿದ್ದಾರೆ.. ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಮದಕರಿ ನಾಯಕನ ಸಾಹಸದ ಕಥೆಯನ್ನ ಸಿನಿಮಾ ಮಾಡೋ ಪ್ರಯತ್ನ ನಡೀತಿದೆ.. ಆದ್ರೆ, ಈ ಬಾರಿ ಆ ಪ್ರಯತ್ನ ಸಫಲವಾಗೋ ಸೂಚನೆ ಸಿಕ್ಕಿದೆ.

ಯೆಸ್​, ಈಗಾಗಲೇ ಕನ್ನಡದಲ್ಲಿ ವೀರ ಮದಕರಿ ಅನ್ನೋ ಸಿನಿಮಾ ಬಂದೋಗಿದೆ.. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈ ಪವರ್ ಫುಲ್ ಟೈಟಲ್​​ನಲ್ಲಿ ಒಂದು ಕಮರ್ಷಿಯಲ್ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಆದರೆ ಕಿಚ್ಚನ ವೀರ ಮದಕರಿಗೂ ದರ್ಶನ್ ನಟಿಸಲಿರೋ ಈ ಐತಿಹಾಸಿಕ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.

ಆ ಟೈಟಲ್​ನ ಅಷ್ಟೆ ಬಳಸಿಕೊಂಡು, 17ನೇ ಶತಮಾನದ ಚಿತ್ರದುರ್ಗದ ಮದಕರಿ ನಾಯಕನ ಕಥೆ ಹೇಳಲಾಗ್ತಿದೆ. ಧೀರ ರಾಕ್​ಲೈನ್ ವೆಂಕಟೇಶ್ ಈ ಐತಿಹಾಸಿಕ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರೋದು ವಿಶೇಷ.

ವೀರಪ್ಪ ನಾಯಕ ಸೇರಿದಂತೆ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಭಾಷಣೆ ಬರೆದಿರೋ ಸಾಹಿತಿ ಬಿ. ಎಲ್ ವೇಣು, ಮದಕರಿ ನಾಯಕ ಚಿತ್ರಕ್ಕೆ ಸ್ಕ್ರಿಪ್ಟ್​​​ ರೆಡಿ ಮಾಡ್ತಿದ್ದಾರೆ.

ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಲೇಖಕರಾಗಿ ದುಡಿದಿರೋ ಬಿ. ಎಲ್ ವೇಣು, ದುರ್ಗದ ಪಾಳೇಗಾರರ ಕುರಿತು ‘ಚಿತ್ರದುರ್ಗದ ವೀರ ಪಾಳೇಗಾರರ ಕಥೆಗಳು’, ‘ಗಂಡುಗಲಿ ಮದಕರಿ ನಾಯಕ’ ಸೇರಿದಂತೆ ಹಲವು ಪುಸ್ತಕಗಳನ್ನ ಬರೆದಿದ್ದಾರೆ.. ಹಾಗಾಗಿ ದರ್ಶನ್ ನಟನೆಯ ಮದಕರಿ ನಾಯಕ ಐತಿಹಾಸಿಕ ಚಿತ್ರಕ್ಕೆ ವೇಣು ಅವರೇ ಚಿತ್ರಕಥೆ, ಸಂಭಾಷಣೆ ಬರೆಯೋ ಜವಾಬ್ದಾರಿ ವಹಸಿಕೊಂಡಿದ್ದಾರೆ.

ಚಿತ್ರದುರ್ಗ ಅಂದ್ರೆ, ಮದಕರಿ ನಾಯಕ... ಮದಕರಿ ನಾಯಕ ಅಂದ್ರೆ ಚಿತ್ರದುರ್ಗ.. ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಇತಿಹಾಸಕ್ಕೆ ಮಹತ್ವದ ಸ್ಥಾನವಿದೆ.. ದುರ್ಗದ ಪಾಳೇಗಾರರು ಆಕ್ರೋಶ, ವೀರಶೌರ್ಯ, ಪರಾಕ್ರಮಗಳಿಗೆ ಹೆಸರಾದವರು.

ಚಿತ್ರದುರ್ಗವನಾಳಿದ ಹನ್ನೊಂದು ದೊರೆಗಳಲ್ಲಿ ಮದಕರಿ ನಾಯಕ ಮಹಾನ್ ಸಾಹಸಿಯೂ, ಪರಾಕ್ರಮಿಯೂ ಆಗಿದ್ದ.. ಪರಿಸ್ಥಿತಿಯ ಪರಿಣಾಮವಾಗಿ 12 ವರ್ಷದ ಬಾಲಕನಾಗಿದ್ದಾಗಲೇ ಸಿಂಹಾಸನ ಅಲಂಕರಿಸಿದ ಮದಕರಿ, ಅಕ್ಕಪಕ್ಕದ ಅರಸರಿಗೆ ಸಿಂಹಸ್ವಹ್ನನಾಗಿದ್ದ. ಮದಕರಿಯ ಸಾಹಸದ ಕಥೆಯನ್ನ ದುರ್ಗದ ಜನ ಇವತ್ತಿಗೂ ಮರೆತ್ತಿಲ್ಲ..

ಮದಕರಿ ನಾಯಕ ಸಿನಿಮಾದಲ್ಲಿ 16-17ನೇ ಶತಮಾನದ ಕಾಲಘಟ್ಟವನ್ನ ಕಟ್ಟಿಕೊಡಲಾಗ್ತಿದೆ.. ಅದಕ್ಕೆ ತಕ್ಕಂತೆ ಬಹಳ ಅದ್ದೂರಿ ಸೆಟ್​​ಗಳನ್ನ ನಿರ್ಮಾಣ ಮಾಡಲಾಗುತ್ತೆ.. ಬಹುತೇಕ ಚಿತ್ರೀಕರಣ ಚಿತ್ರದುರ್ಗದ ಕೋಟೆಯ ಸುತ್ತಾಮುತ್ತಾ ನಡೆಯಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಜೊತೆಗೆ ಘಟಾನುಘಟಿ ಕಲಾವಿದರು ಈ ಐತಿಹಾಸಿಕ ಚಿತ್ರದಲ್ಲಿ ನಟಿಸಲಿದ್ದಾರೆ.. ಒನಕೆ ಓಬವ್ವನ ಎಪಿಸೋಡ್ ಸಹ ಇರಲಿದ್ದು, ಇಡೀ ಸಿನಿಮಾ ಕನ್ನಡ ಚಿತ್ರರಸಿಕರಿಗೆ ಅದ್ಭುತ ಅನುಭವ ಕೊಡಲಿದೆ.. ಅಷ್ಟೆಅಲ್ಲ, ಮದಕರಿ ನಾಯಕನ ಸಾಹಸಮಯ ಕಥೆಯನ್ನ ಕಣ್ಣಿಗೆ ಕಟ್ಟಿದಂತೆ ತೋರಿಸಲಿದೆ.

ಮದಕರಿ ನಾಯಕನ ಪಾತ್ರವನ್ನ ಈಗಾಗಲೇ ಕೆಲವು ಸಿನಿಮಾಗಳಲ್ಲಿ ತೆರೆಗೆ ತರೋ ಪ್ರಯತ್ನ ಮಾಡಲಾಗಿದೆ. ಕಲ್ಲರಳಿ ಹೂವಾಗಿ ಚಿತ್ರದಲ್ಲಿ ರೆಬೆಲ್​ ಸ್ಟಾರ್ ಅಂಬರೀಶ್, ಮದಕರಿ ನಾಯಕನಾಗಿ ವಿಜೃಂಭಿಸಿದ್ರೆ, ದುರ್ಗದ ಹುಲಿ ಚಿತ್ರದ ಸಣ್ಣ ಎಪಿಸೋಡ್​ನಲ್ಲಿ ಸಾಯಿಕುಮಾರ್ ಮದಕರಿ ನಾಯಕನ ಅವತಾರ ತಾಳಿದ್ರು.. ಮದಕರಿ ನಾಯಕನಾಗಿ ಡೈಲಾಗ್ ಕಿಂಗ್ ಡೈಲಾಗ್​ ಸೂಪರ್ ಹಿಟ್ ಆಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಹೈಟು, ಪರ್ಸನಾಲಿಟಿ ಮದಕರಿ ನಾಯಕನ ಕಥೆಗೆ ಒಪ್ಪುವಂತಿದೆ.. ಈಗಾಗಲೇ ರಾಯಣ್ಣನಾಗಿ ಮಿಂಚಿರೋ ದಚ್ಚು, ಮದಕರಿ ನಾಯಕನ ಪಾತ್ರಕ್ಕೆ ಖಂಡಿತ ಜೀವ ತುಂಬ್ತಾರೆ ಅನ್ನೋದು ಲೇಖಕ ವೇಣು ಅವ್ರ ಮಾತು.. ಇನ್ನೂ ಈ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ ಅನ್ನೋದು ಶೀಘ್ರದಲ್ಲೆ ಗೊತ್ತಾಗುತ್ತೆ.

ಸದ್ಯ ದರ್ಶನ್ ಯಜಮಾನ, ಒಡೆಯ ಸಿನಿಮಾಗಳಿ ಬ್ಯುಸಿ ಇದ್ದು, ಮುಂದಿನ ವರ್ಷ ಮದಕರಿ ನಾಯಕ ಸಿನಿಮಾ ಸೆಟ್ಟೇರಿಲಿದೆ.. ಅಭಿಮಾನಿಗಳಂತೂ ಡಿ ಬಾಸ್​​ನ ಮದಕರಿ ನಾಯಕನ ಅವತಾರದಲ್ಲಿ ನೋಡೋಕೆ ಕಾಯ್ತಿದ್ದಾರೆ.

ನಾಣಿ, ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES