Top

ಸಿಎಂ ಸಂಧಾನ ಸಫಲ: ಸಮ್ಮಿಶ್ರ ಸರಕಾರ ಸುರಕ್ಷಿತ

ಸಿಎಂ ಸಂಧಾನ ಸಫಲ: ಸಮ್ಮಿಶ್ರ ಸರಕಾರ ಸುರಕ್ಷಿತ
X

ಅಸಮಾಧಾನಗೊಂಡಿದ್ದ ಜಾರಕಿಹೊಳಿ ಸೋದರರನ್ನು ಓಲೈಸುವಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸಮ್ಮಿಶ್ರ ಸರ್ಕಾರದ ಮೇಲೆ ಕವಿದಿದ್ದ ಕಾರ್ಮೊಡ ಸರಿದಿದೆ.

ಬೆಳಗಾವಿ ಜಿಲ್ಲಾ ರಾಜಕೀಯ ವಿಷಯದಲ್ಲಿ ಉದ್ಭವಿಸಿದ್ದ ಅಸಮಾಧಾನ ಕುರಿತು ಎಚ್.ಡಿ.ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದರು.

ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಸೋದರರು ಬಿಜೆಪಿಗೆ ವಲಸೆ ಹೋಗುವ ಬಗ್ಗೆ ಆತಂಕ ನಿರ್ಮಾಣವಾಗಿತ್ತು. ಬಿಜೆಪಿಗೆ ಬಂದರೆ ಉಪಮುಖ್ಯಮಂತ್ರಿ ಸ್ಥಾನದ ಆಮೀಷವನ್ನೂ ಒಡ್ಡಲಾಗಿತ್ತು.

ಈ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಗಳಿಗೆ ಒಪ್ಪದೇ ಇದ್ದರೆ ನಾವು ರಾಜೀನಾಮೆ ನೀಡುವುದಾಗಿ ಜಾರಕಿಹೊಳಿ ಸೋದರರು ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಜೊತೆಗೆ ರಮೇಶ್ ಜಾರಕಿಹೊಳಿ ಮಂಗಳವಾರ ಬೆಳಗ್ಗೆ ನಡೆಸಿದ ಮಾತುಕತೆ ವಿಫಲವಾಯಿತು.

ಈ ಕೂಡಲೇ ಅಖಾಡಕ್ಕೆ ಇಳಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ನಗರದ ಖಾಸಗಿ ಹೋಟೆಲ್​ನಲ್ಲಿ ಸತೀಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದರು. ಜಾರಕಿಹೊಳಿ ಸೋದರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿ ಅಸಮಾಧಾನವನ್ನು ಶಮನಗೊಳಿಸಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಮ್ಮ ಬಗ್ಗೆ ಪದೇ ಪದೇ ಮಾಧ್ಯಮದಲ್ಲಿ ಬರ್ತಿರುವ ಚರ್ಚೆ ಬಗ್ಗೆ ಮಾತಾಡಿದರು. ಎಲ್ಲಾ ಅಸಮಾಧಾನ ಶಮನ ಆಗಿದೆ. ಉಪ ಮುಖ್ಯಮಂತ್ರಿ ಆಕಾಂಕ್ಷೆ ಏನೂ ಇಲ್ಲ. ಸಚಿವ ಸ್ಥಾನವನ್ನ ಆಕಾಂಕ್ಷಿಯೂ ಆಲ್ಲ. ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ. ಬಳ್ಳಾರಿ ಸಮುದಾಯಕ್ಕೆ ಒಂದು ಸಚಿವ ಸ್ಥಾನ ಬೇಕಿದೆ ಎಂದು ಕೇಳಿದ್ದೇವೆ ಎಂದು ವಿವರಿಸಿದರು.

Next Story

RELATED STORIES