Top

ರಮೇಶ್ ಜಾರಕಿಹೊಳಿಗೆ ಬಿಗ್ ಆಫರ್ ನೀಡಿದ್ದಾರಂತೆ ಶ್ರೀರಾಮುಲು

ರಮೇಶ್ ಜಾರಕಿಹೊಳಿಗೆ ಬಿಗ್ ಆಫರ್ ನೀಡಿದ್ದಾರಂತೆ ಶ್ರೀರಾಮುಲು
X

ಸಚಿವ ರಮೇಶ್ ಜಾರಕಿಹೊಳಿಗೆ ಶ್ರೀರಾಮುಲು ಬಿಗ್ ಆಫರ್ ನೀಡಿದ್ದಾರೆಂಬ ಮಾಹಿತಿ ಹೊರಬಿದ್ದಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿಗೆ ಬಂದುಬಿಡಿ, ಡಿಸಿಎಂ ಸ್ಥಾನ ನಿಮಗಾಗಿ ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದಾರೆನ್ನಲಾಗಿದೆ.

ಅಲ್ಲದೇ ಈ ಹಿಂದೆ ಬಿಜೆಪಿಯಿಂದ ಬಹುಮತ ಸಾಬೀತಿನ ವೇಳೆಯೂ ಬಿಜೆಪಿಗೆ ಬನ್ನಿ ಎಂದು ಆಹ್ವಾನ ನೀಡಲಾಗಿತ್ತಂತೆ. ಅಂದೇ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡುವ ಭರವಸೆ ನೀಡಿದ್ದರಂತೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನನ್ನನ್ನು ಡಿಸಿಎಂ ಮಾಡ್ತೀನಿ ಎಂದು ಹೈಕಮಾಂಡ್ ನಿರ್ಧರಿಸಿದೆ. ಆದರೆ ನೀವು ಬಿಜೆಪಿಗೆ ಬಂದರೆ ನೀವೇ ಡಿಸಿಎಂ. ನಿಮಗಾಗಿ ಡಿಸಿಎಂ ಸ್ಥಾನ ಬಿಟ್ಟು ಕೊಡ್ತೀನಿ ಎಂದು ಹೇಳಿದ್ದರಂತೆ ಶ್ರೀರಾಮುಲು.

ಆದರೆ ಅಂದು ಶ್ರೀರಾಮುಲು ಕೊಟ್ಟಿದ್ದ ಆಫರ್‌ನ್ನ ರಮೇಶ್ ಜಾರಕಿಹೊಳಿ ತಿರಸ್ಕರಿಸಿದ್ದರು. ಆದ್ರೆ ಈಗಲೂ ಕಾಲ ಮಿಂಚಿಲ್ಲ ಬನ್ನಿ ಎಂದು ಹೇಳಿದ್ದು, ರಮೇಶ್ ಗೊಂದಲದಲ್ಲಿದ್ದಾರೆ.

Next Story

RELATED STORIES