Top

'ಆಪರೇಷನ್'ರಾಜಕಾರಣ ಯಾರೇ ಮಾಡಿದ್ರು ತಪ್ಪು : ಶಾಸಕ ರಾಮದಾಸ್‌

ಆಪರೇಷನ್ರಾಜಕಾರಣ ಯಾರೇ ಮಾಡಿದ್ರು ತಪ್ಪು : ಶಾಸಕ ರಾಮದಾಸ್‌
X

ಮೈಸೂರು : ರಾಜ್ಯರಾಜಕಾರಣದಲ್ಲಿ ಎಲ್ಲೆಲ್ಲೂ 'ಆಪರೇಷನ್‌' ಭೀತಿಯ ಮಾತು. ಜೊತೆಗೆ ರಾಜಕೀಯ ನಾಯಕ ಆರೋಪ-ಪ್ರತ್ಯಾರೋಪದ ಕಿಡಿಗಳು.

ಈ ನಡುವೆ ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, 'ಅಪರೇಷನ್' ರಾಜಕೀಯ ಅರ್ಥ ಇಲ್ಲದ ವಿಚಾರ. ಅಪರೇಷನ್ ತೆನೆ, ಬಿಜೆಪಿ, ಕಾಂಗ್ರೆಸ್ ಇದು ಆಗಬಾರದು ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಆಪರೇಷನ್‌ ರಾಜಕೀಯ ಶುರುವಾದರೇ, ಇದರಿಂದ ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದವ್ರಿಗೆ ಗೌರವ ಕಡಿಮೆಯಾಗುವಂತದ್ದು. ಹೀಗಾಗಿ ಆಪರೇಷನ್‌ ರಾಜಕಾರಣಕ್ಕೆ ಯಾರೇ ಪ್ರಯತ್ನ ಮಾಡಿದರು ತಪ್ಪು ಎಂದರು.

ಅಲ್ಲದೇ ಸರ್ಕಾರ ಬಿದ್ದು ಹೋಗುವ ಭಯದಲ್ಲಿ ಕಾಂಗ್ರೆಸ್‌ನವರು ಹೀಗೆ ಆರೋಪ ಮಾಡ್ತಾ ಇದ್ದಾರೆ. ಇದನ್ನು ಮೊದಲೇ ಅವರು ಹೇಳಬೇಕಿತ್ತು.

ಯಾವುದೇ ಸರ್ಕಾರ ಇರಲಿ ದೃಢವಾದ ಸರ್ಕಾರ ರಾಜ್ಯಕ್ಕೆ ಬೇಕಾಗಿದೆ. ರಾಜಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಈ ಆರೋಪಗಳನ್ನ ಉಪಯೋಗಿಸಿಕೊಳ್ತಾರೆ ಎಂದು ಹೇಳಿದರು.

ಇನ್ನೂ ಮೈಸೂರು ಕಾಂಗ್ರೆಸ್ ನಾಯಕರ ಮಾತು ಶುದ್ಧ ಸುಳ್ಳು. ಹಾಗೆನಾದ್ರು ಇದ್ದರೆ ದಾಖಲೆ ಸಮೇತವಾಗಿ ಬಿಡುಗಡೆ ಮಾಡಲಿ ಎಂದು ಕಳೆದ ನಿನ್ನೆ ಹೇಳಿದ್ದ ಕಾಂಗ್ರೆಸ್‌ನ ಸಂಸದ ಧ್ರುವನಾರಾಯಣ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆಗೆ ತಿರುಗೇಟು ನೀಡಿದರು.

Next Story

RELATED STORIES