Top

ರಕ್ಷಿತ್​ ಕ್ಯಾಂಪ್​ನಿಂದಲೂ ಹೊರಬಂದ ರಶ್ಮಿಕಾ ಮಂದಣ್ಣ

ರಕ್ಷಿತ್​ ಕ್ಯಾಂಪ್​ನಿಂದಲೂ ಹೊರಬಂದ ರಶ್ಮಿಕಾ ಮಂದಣ್ಣ
X

ನಟಿ ರಶ್ಮಿಕಾ ಮಂದಣ್ಣ ಕೇವಲ ರಕ್ಷಿತ್​​ ಶೆಟ್ಟಿಯಿಂದಷ್ಟೇ ದೂರವಾಗಿಲ್ಲ. ರಕ್ಷಿತ್ ಶೆಟ್ಟಿ ಕ್ಯಾಂಪ್​ನಿಂದ ಕೂಡ ಹೊರ ಬಂದಿದ್ದಾರೆ. ವೈಯಕ್ತಿಕವಾಗಿ ಮಾತ್ರವಲ್ಲ ವೃತ್ತಿಯಲ್ಲೂ ಇಬ್ಬರೂ ದೂರ ಸರಿಯುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಇದೀಗ ರಕ್ಷಿತ್ ತಂಡದ 'ವೃತ್ರ' ಸಿನಿಮಾದಿಂದ ಹೊರಬಂದಿದ್ದಾರೆ. ಈಗಾಗಲೇ ಫೋಟೋ ಶೂಟ್ ಮಾಡಿ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದ ಚಿತ್ರತಂಡಕ್ಕೆ ಈಗ ಆಘಾತವಾಗಿದೆ.

ವೃತ್ರ ಸಿನಿಮಾದಲ್ಲಿ ರಶ್ಮಿಕಾ ಗನ್ ಹಿಡಿದು, ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಮಹಿಳಾ ಪ್ರಧಾನ ಸಿನಿಮಾ ಆದ್ದರಿಂದ ಅದಕ್ಕೆ ತಕ್ಕನಾಗಿ ರಶ್ಮಿಕಾ ಕೂಡ ಎಲ್ಲಾ ರೀತಿಯ ಸಕಲ ಸಿದ್ದತೆಗಳನ್ನ ಕೂಡ ಮಾಡಿಕೊಂಡಿದ್ದರು. ಅಂದಹಾಗೆ ಈ ಸಿನಿಮಾನ ರಕ್ಷಿತ್ ಶೆಟ್ಟಿ ಗೆಳೆಯರ ಬಳಗದ ಗೌತಮ್ ಅಯ್ಯರ್ ನಿರ್ದೇಶಿಸೋದಾಗಿ ಸುದ್ದಿಯಾಗಿತ್ತು.

ಯಾವಾಗ ರಕ್ಷಿತ್ ಜೊತೆಗಿನ ನಿಶ್ಚಿತಾರ್ಥ ಮುರಿದುಬಿತ್ತೋ, ಆಗಲೇ ರಶ್ಮಿಕಾ ಕೂಡ ರಕ್ಷಿತ್ ಶೆಟ್ಟಿಯಿಂದ ವೈಯಕ್ತಿಕವಾಗಿಯಷ್ಟೇ ಅಲ್ಲ, ಪ್ರೊಫೆಷನಲ್ ಆಗಿಯೂ ದೂರ ಆಗೋ ನಿರ್ಧಾರ ಮಾಡಿದ್ದಾರೆ. ಹಾಗಾಗಿಯೇ, ಚಾರ್ಮಿಂಗ್ ಚೆಲುವೆ ರಶ್ಮಿಕಾ ರಕ್ಷಿತ್ ಶೆಟ್ಟಿ ಕ್ಯಾಂಪ್​ನಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಇದೆಲ್ಲವೂ ಒಂದು ಕಡೆ ಆದ್ರೆ, ಮತ್ತೊಂದೆಡೆ ರಶ್ಮಿಕಾಗೆ ಡೇಟ್ಸ್ ಹೊಂದಾಣಿಕೆ ಆಗ್ತಿಲ್ಲ ಅನ್ನೋದು ಕೂಡ ಮತ್ತೊಂದು ಕಾರಣವಾಗಿದೆ. ಸದ್ಯ ದರ್ಶನ್ ಜೊತೆ ಯಜಮಾನ ಶೂಟಿಂಗ್ ಮುಗಿಸಿರೋ ರಶ್ಮಿಕಾ, ತೆಲುಗಿನ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡೇಟ್ಸ್ ಕೂಡಿಬರಲಿಲ್ವಾ ಅಥವಾ ರಕ್ಷಿತ್ ಕ್ಯಾಂಪ್​ನಿಂದ ದೂರವಾಗೋಕ್ಕೆ ಅಂತಲೇ ಹೀಗೆ ಮಾಡಿದ್ರಾ ಅನ್ನೋದು ಮಾತ್ರ ಗೊತ್ತಾಗಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್​, ಟಿವಿ5

Next Story

RELATED STORIES