Top

ಲವ್ ಲೆಕ್ಚರ್ ಕೊಟ್ಟ ಸಚಿವ ಜಿ.ಟಿ.ದೇವೇಗೌಡ..!

ಲವ್ ಲೆಕ್ಚರ್ ಕೊಟ್ಟ ಸಚಿವ ಜಿ.ಟಿ.ದೇವೇಗೌಡ..!
X

ಮೈಸೂರು: ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಚಿವ ಜಿ.ಟಿ.ದೇವೇಗೌಡರು ಪ್ರೀತಿಯ ಪಾಠ ಹೇಳಿದ್ರು. ಸಾಕಷ್ಟು ಹೆಣ್ಣು ಮಕ್ಕಳು ಲವ್ ನಲ್ಲಿ ಬಿದ್ದು ನಿಮ್ಮ ಜೀವನ ಹಾಳು ಮಾಡಿಕೊಳ್ತಿದೀರಾ. ಈ ಬಗ್ಗೆ ಎಚ್ಚರದಿಂದಿರಿ. ಒಳ್ಳೆ ಹುಡುಗನನ್ನು ನೋಡಿ, ನಿಷ್ಠಾವಂತ, ಪ್ರಾಮಾಣಿಕ ಹುಡುಗರನ್ನು ನೋಡಿ ಎಂದು ಕಿವಿಮಾತು ಹೇಳಿದರು.

ಅಲ್ಲದೇ ಇಂಥವರನ್ನ ಲವ್ ಮಾಡಿ ಮದ್ವೆ ಆದರೆ ನಿಮ್ಮ ಜೀವನ ಸುಂದರವಾಗಿರುತ್ತದೆ. ಯಾರ‍್ಯಾರನ್ನೋ ಲವ್ ಮಾಡಿ ನಿಮ್ಮ ಜೀವನವನ್ನು ಕತ್ತಲೆಗೆ ಕೊಂಡೊಯ್ಯಬೇಡಿ. ಜೀವನದಲ್ಲಿ ಸೋಲು ಗೆಲುವು ಇರಬೇಕು. ಏನೇ ಬಂದರೂ ಎದುರಿಸುವ ಶಕ್ತಿ ನಿಮಗೆ ಬರಬೇಕು ಎಂದು ಹೇಳಿದರು.

ವಿಶ್ವದಲ್ಲಿ ಹೆಚ್ಚು ಸಾಧನೆ ಮಾಡಿರೋರು ಮಹಿಳೆಯರೇ ಆಗಿದ್ದಾರೆ. ಸೋಲಿನಿಂದ ಹತಾಶರಾಗದೇ ಮುನ್ನುಗ್ಗಿ ಎಂದು ವಿದ್ಯಾರ್ಥಿನಿಯರಿಗೆ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ತಮ್ಮ ಜೀವನದ ಕ್ಷಣಗಳನ್ನು ನೆನೆದ ಜಿಟಿಡಿ, ನನಗೆ ಬಂಗಾರದ ಮನುಷ್ಯ ಚಲನಚಿತ್ರ ಪ್ರೇರಣೆಯಾಯಿತು. ಬಂಗಾರದ ಮನುಷ್ಯ ಚಿತ್ರವನ್ನು 9 ಬಾರಿ ನೋಡಿದ್ದೆ. ಅದರಿಂದ ಪ್ರೇರಿತನಾಗಿ ಸಾಲ ಸೋಲ ಮಾಡಿ ವ್ಯವಸಾಯ ಮಾಡಲಾರಂಭಿಸಿದೆ. ಅದರಿಂದಲೇ ಮುಂದೆ ನಾನೊಬ್ಬ ಯಶಸ್ವಿ ರೈತನಾದೆ. ಜೀವನದಲ್ಲಿ ಸೋಲು ಗೆಲುವು ಸಹಜ ಎಂದು ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ರು.

Next Story

RELATED STORIES