Top

ಹಾವೇರಿಯಲ್ಲಿ ವರ್ಷ ಕಳೆದರೂ ಆರಂಭಗೊಳ್ಳದ ಇಂದಿರಾ ಕ್ಯಾಂಟೀನ್‌.!

ಹಾವೇರಿಯಲ್ಲಿ ವರ್ಷ ಕಳೆದರೂ ಆರಂಭಗೊಳ್ಳದ ಇಂದಿರಾ ಕ್ಯಾಂಟೀನ್‌.!
X

ಬಡವರ ಹಸಿವು ನೀಗಿಸುವ ಉದ್ದೇಶಕ್ಕೆ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳು ಅನುಷ್ಠಾನಗೊಳ್ಳೋಕೆ ಮಾತ್ರ ವಿಳಂಭ. ಇದಕ್ಕೆ ಇತ್ತೀಚ್ಚಿನ ಒಂದು ಉದಾಹರಣೆಯಂದರೆ ಅದು ಇಂದೀರಾ ಕ್ಯಾಂಟೀನ್ ನಿರ್ಮಾಣ ಕಾರ್ಯ. ಯೋಜನೆ ಅನುಷ್ಠಾನಗೊಂಡು ಒಂದು ವರ್ಷ ಕಳೆದರೂ ಹಾವೇರಿ ಜಿಲ್ಲೆಯಲ್ಲಿ ಇನ್ನು ಅನುಷ್ಠಾನಗೊಂಡಿಲ್ಲಾ ಈ ಕುರಿತು ಮುಂದೆ ಓದಿ..

ಹೌದು ಇದು ಹಾವೇರಿ ನಗರದಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟಿನ್, ಈಗಾಗಲೇ ರಾಜ್ಯ ರಾಜ್ಯಧಾನಿ ಸೇರಿದಂತೆ ಹಲವು ಜಿಲ್ಲೆಯಲ್ಲಿಯು ಪ್ರಾರಂಭವಾಗಿವೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಇಂದೀರಾ ಕ್ಯಾಂಟೀನ್ ಪ್ರಾರಂಭವಾಗುತ್ತಿಲ್ಲಾ.

ಜಿಲ್ಲೆಗೆ ಒಟ್ಟು 8 ಇಂದೀರಾ ಕ್ಯಾಂಟೀನ್ ಮುಂಜುರಾತಿಯಾಗಿದೆ. ಇದೀಗ ಯೋಜನೆ ಅನುಷ್ಠಾನಗೊಂಡು ಒಂದು ವರ್ಷಕೂಡ ಗತಿಸಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಕ್ಯಾಂಟೀನ್ ನಿರ್ಮಾಣ ಕಾರ್ಯ ಮುಗಿಯದ ಕೆಲಸವಾಗಿದೆ. ಏಕೆಂದ್ರೆ ಹಾವೇರಿ ನಗರದ ಪಶು ಚಿಕಿತ್ಸಾಲಯದ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳ ಗುರುತಿಸಿದಾಗ, ಇಲ್ಲಿ ಪಶು ಆಸ್ಪತ್ರೆ ಇದೆ.

ಇಲ್ಲಿ ಅನೇಕ ರೋಗ ರುಜಿನಗಳು ಹರಡುವ ಸಾದ್ಯತೆ ಇದೆ, ಬೇರೆಡೆ ನಿರ್ಮಾಣ ಮಾಡಿ ಅಂತಾ ಸಾರ್ವಜನಿಕರು ವಿರೋಧಿಸಿದ್ದರು. ಆದರೆ ವಿರೋಧದ ಮಧ್ಯೆ ಕ್ಯಾಟೀನ್ ಇದೀಗ ನಿರ್ಮಾಣವಾಗಿ ಹೋಗಿದೆ. ಆದರೆ ಇನ್ನು ಉದ್ಘಾಟನೆಯಾಗಿಲ್ಲಾ. ಇದಕ್ಕೆ ಬಡವರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.

ಇನ್ನು ಜಿಲ್ಲೆಯ ರಾಣೆಬೆನ್ನೂರಲ್ಲಿ ಎರಡು, ಶಿಗ್ಗಾಂವ, ಸವಣೂರು, ಹಿರೇಕೆರೂರ ಹಾಗೂ ಬ್ಯಾಡಗಿ, ಹಾನಗಲ್ ನಲ್ಲಿ ತಲಾ ಒಂದು ಇಂದೀರಾ ಕ್ಯಾಂಟೀನ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ ಈ ಎಲ್ಲಾ ತಾಲೂಕಾ ಕೇಂದ್ರದಲ್ಲಿ ಈವರೆಗೂ ಒಂದೇ ಒಂದು ಇಂದೀರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ನಡೆದಿಲ್ಲಾ.

ವಿಪರ್ಯಾಸ ಎಂದರೆ ಇಂದೀರಾ ಕ್ಯಾಂಟೀನ್ ಗೆ ಅಂತಾ ಬಂದಿರೋ ಅನೇಕ ವಸ್ತುಗಳು ಹಲವು ತಿಂಗಳಿನಿಂದ ಮಳೆ ನೀರಲ್ಲಿ ಮತ್ತು ದೂಳು ತಿನ್ನುತ್ತಾ ಬಿದ್ದಿವೆ. ಹೀಗಾಗಿ ಲಕ್ಷಾಂತರ ರೂಪಾಯಿ ವಸ್ತುಗಳು ಇಲ್ಲಿ ಅನಾಯಾಸ ಹಾಳಾಗಿ ಹೋಗುತ್ತಿವೆ.

ಈ ಕುರಿತು ನಗರಕೋಶಾಭಿವೃದ್ಧಿ ಅಧಿಕಾರಿ ವಾಸಣ್ಣ ಕೇಳಿದ್ರೆ, ಮೂಲಭೂತ ಸೌಕರ್ಯದ ಕೊರತೆ ಇದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಆದರೂ ಕೆಲವೆಡೆ ಪ್ರಾರಂಭಗೊಂಡಿಲ್ಲ. ಈ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಪ್ರಾರಂಭಿಸಲಾಗುತ್ತದೆ ಎಂಬ ಭರವಸೆ ನೀಡುತ್ತಾರೆ.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಇಂದೀರಾ ಕ್ಯಾಂಟೀನ್ ‌ಯಾವಾಗ ಪ್ರಾರಂಭವಾಗ್ತವೇ ಅಂತಾ ಬಡವರು‌ ಕಾದು ಕುಳಿತ್ತಿದ್ದಾರೆ. ಇನ್ನಾದ್ರೂ ಇರೋ ಬರೋ ಸಮಸ್ಯೆಗಳಿಗೆ ತೆರೆ ಎಳೆಬೇಕಿದೆ.

ಒಟ್ಟಾರೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿ ಶೀಘ್ರದಲ್ಲಿಯೆ ಪ್ರಾಂರಂಭಿಸೋಕೆ ಕ್ರಮ ಕೈಗೊಳ್ಳಬೇಕಿದೆ

ವರದಿ : ರಾಜು ಅಣಬೇರ್, ಟಿವಿ5 ಹಾವೇರಿ

Next Story

RELATED STORIES