Top

ಏಷ್ಯಾಕಪ್: ಹಾಂಕಾಂಗ್​​ ವಿರುದ್ಧ ಭಾರತ ಗೆಲುವಿನ ಅಭ್ಯಾಸ?

ಏಷ್ಯಾಕಪ್: ಹಾಂಕಾಂಗ್​​ ವಿರುದ್ಧ ಭಾರತ ಗೆಲುವಿನ ಅಭ್ಯಾಸ?
X

ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡ ಮಂಗಳವಾರ ಹಾಂಕಾಂಗ್ ವಿರುದ್ಧ ಶುಭಾರಂಭ ಮಾಡುವ ಮೂಲಕ ಪಾಕಿಸ್ತಾನ ವಿರುದ್ಧ ಗೆಲುವಿನ ಅಭ್ಯಾಸಕ್ಕಾಗಿ ಬಳಸಿಕೊಳ್ಳುವ ಇರಾದೆಯಲ್ಲಿದೆ.

ವಿಶ್ವಕಪ್​ ಗೂ ಮುನ್ನ ನಡೆಯುತ್ತಿರುವ ಅತ್ಯಂತ ಮಹತ್ವದ ಟೂರ್ನಿ ಇದಾಗಿದ್ದು, ಎಲ್ಲಾ ತಂಡಗಳು ಸೂಕ್ತ ಹೊಂದಾಣಿಕೆಯ ತಂಡವನ್ನು ಅಂತಿಮಗೊಳಿಸಲು ಬಯಸಿವೆ. ಆದರೆ ಭಾರತ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ಶಾರ್ಜಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ಭಾರತಕ್ಕೆ ಮೊದಲ ಪಂದ್ಯವಾಗಿದೆ. ಟೂರ್ನಿಯಲ್ಲಿ ಉಳಿದೆಲ್ಲಾ ತಂಡಗಳು ಒಂದೊಂದು ಪಂದ್ಯ ಆಡಿವೆ. ಇಲ್ಲಿನ ಬಿಸಿಲಿನ ಝಳವೇ ಆಟಗಾರರಿಗೆ ದೊಡ್ಡ ತಲೆನೋವಾಗಿದೆ.

ರೋಹಿತ್ ಶರ್ಮ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡ ಗೆಲುವಿನ ವಿಶ್ವಾಸದಲ್ಲಿದೆ. ಏಕೆಂದರೆ ಹಾಂಕಾಂಗ್ ಇನ್ನೂ ಜಾಗತಿಕ ಕ್ರಿಕೆಟ್​ನಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದೆ. ಅಲ್ಲದೇ ಸಾಕಷ್ಟು ಅನುಭವಿ ಆಟಗಾರರನ್ನು ಭಾರತ ಹೊಂದಿರುವುದರಿಂದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅನುಪಸ್ಥಿತಿ ಏನೂ ಕಾಡದು.

ಈ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ ಮನ್​ಗಳ ಪ್ರದರ್ಶನದ ಮೇಲೆ ತಂಡ ನಿಗಾ ವಹಿಸಲಾಗಿದೆ. ಅದರಲ್ಲೂ 2019ರ ವಿಶ್ವಕಪ್​ ನಲ್ಲಿ ಕೊನೆಯ ಬಾರಿಗೆ ಆಡಲಿರುವ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಮೇಲೆ ಒತ್ತಡವಿದೆ.

ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಹೀಗೆ.. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ ಮನ್​ಗಳ ಪ್ರದರ್ಶನದ ಮೇಲೆ ಆಯ್ಕೆ ಸಮಿತಿ ಕಣ್ಣು ನೆಟ್ಟಿದೆ.

ವಿಶ್ವಕಪ್​ಗೆ ಕೇವಲ 9 ತಿಂಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೂರ್ನಿ ಇದಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚು ಒತ್ತಡವಿದೆ.

Next Story

RELATED STORIES