Top

ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾನ್ಸ್​ಗೆ ಸಿಗುತ್ತಾ ಸಿಹಿಸುದ್ದಿ.?

ರೋರಿಂಗ್ ಸ್ಟಾರ್ ಶ್ರೀಮುರಳಿ ಫ್ಯಾನ್ಸ್​ಗೆ ಸಿಗುತ್ತಾ ಸಿಹಿಸುದ್ದಿ.?
X

ರೋರಿಂಗ್ ಸ್ಟಾರ್ ಶ್ರೀಮುರಳಿ.. ಸ್ಯಾಂಡಲ್​ವುಡ್​ನ ಒಂಟಿ ಸಲಗ.. ಭರ್ಜರಿ ಚೇತನ್ ಜೊತೆ ಭರಾಟೆ ನಡೆಸುತ್ತಿರೋ ರೋರಿಂಗ್ ಸ್ಟಾರ್ ಈಗ ಮದಗಜ ಆಗಲು ಹೊರಟಿದ್ದಾರೆ. ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನೆಕ್ಸ್ಟ್ ಸಿನಿಮಾ ಅಂತಾನೆ ಟಾಕ್ ಕ್ರಿಯೇಟ್ ಮಾಡಿದ್ದ ಮದಗಜ ಈಗ ಶ್ರೀ ಮುರಳಿ ಅಂಗಳದಲ್ಲಿದೆ.. ಹಾಗಾದ್ರೆ ಧ್ರುವ ಸ್ಥಾನಕ್ಕೆ ಶ್ರೀ ಮುರುಳಿ ಬಂದಿದ್ಹೇಗೆ..? ಆ ಬಗ್ಗೆ ಇಂಟ್ರೆಸ್ಟಿಂಗ್‌ ಸುದ್ದಿ ಮುಂದೆ ಓದಿ..

ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಮುರುಳಿ ಉಗ್ರಂ ಮೂಲಕ ಫಿನಿಕ್ಸ್​ನಂತೆ ಎದ್ದು ನಿಂತು ಕಮಾಲ್ ಮಾಡಿದ್ರು. ಅದೃಷ್ಟವೂ ಖುಲಾಯಿಸಿತು. ಅದಾದ ಮೇಲೆ ಮಫ್ತಿ ಮೂಲಕ ಒಂಟಿ ಸಲಗನಾಗಿ ಮಾಸ್ ಹೀರೊ ಆಗಿ ಅಬ್ಬರಿಸಿದ್ರು.

ಸದ್ಯ ಸ್ಯಾಂಡಲ್​​ವುಡ್​ನಲ್ಲಿ ರೋರಿಂಗ್ ಸ್ಟಾರ್ ಅಬ್ಬರ, ಕ್ರೇಜ್ ಸಿಕ್ಕಾಪಟ್ಟೆ ಜೋರಿದೆ. ಹೀಗಿರುವಾಗಲೇ ಮತ್ತೊಂದು ಮಾಸ್ ಸಿನಿಮಾ ಮೂಲಕ ಎಂಟ್ರಟೈನ್​ ಮಾಡಲು ಸಿದ್ದರಾಗಿದ್ದಾರೆ. ಖಡಕ್ ರೋಲ್​ನಲ್ಲಿ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ..

ಹೀಗೊಂದು ಸುದ್ದಿ ಈಗ ಚಂದನವನದಲ್ಲಿ ಸೌಂಡ್ ಮಾಡ್ತಿದೆ.. ಆಕ್ಚುಲಿ ಮದಗಜ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಬೇಕಿತ್ತು. ಪವರ್ ಫುಲ್ ಟೈಟಲ್​ ಕೇಳಿಯೇ ಧ್ರುವ ಸರ್ಜಾ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಗೊಂಡಿದ್ರು. ಆದ್ರೆ ಧ್ರುವ ಸರ್ಜಾ ಬದಲು ಮದಗಜದಲ್ಲಿ ಒಂಟಿಸಲಗ ಶ್ರೀಮುರುಳಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಈಗ ಗಾಂದೀನಗರದ ಗಲ್ಲಿಯಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ.

ಅಯೋಗ್ಯ ಚಿತ್ರದ ಮೂಲಕ ಸೌಂಡ್ ಮಾಡ್ತಿರೋ ಯುವ ನಿರ್ದೇಶಕ ಮಹೇಶ್ ಕುಮಾರ್ ಮದಗಜ ಚಿತ್ರದ ನಿರ್ದೇಶಕ. ಚೊಚ್ಚಲ ಚಿತ್ರದ ಮೂಲಕ ಗೆಲುವಿನ ಹಾರ ಹಾಕಿಕೊಂಡ ಮಹೇಶ್ ಈಗ ಮದಗಜ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಆರಂಭದಲ್ಲಿ ಆಕ್ಷನ್ ಫ್ರಿನ್ಸ್ ನಟಿಸ್ತಾರೆ ಅನ್ನೋದು ಫಿಕ್ಸ್ ಆಗಿತ್ತು. ಆದ್ರೀಗ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ಚಿತ್ರ ಒಂಟಿಸಲಗ ಕೈಸೇರಿದೆ ಎನ್ನಲಾಗ್ತಿದೆ.

ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಬಹದ್ಧೂರ್ ಗಂಡು ಬ್ಯುಸಿಯಾಗಿದ್ದಾರೆ. ಪೊಗರು ಸಿನಿಮಾ ಕಂಪ್ಲೀಟ್ ಆಗೋಕೆ ಇನ್ನೂ ಆರೇಳು ತಿಂಗಳು ಟೈಮ್ ಬೇಕು. ಪೊಗರು ನಂತರ ಮದಗಜ ಮಾಡ್ತೇನೆ ಅನ್ನೋದು ಧ್ರುವ ಮಾತು..

ಸೋ, ಡೇಟ್ ಹೊಂದಾಣಿಕೆ ಆಗದೇ ಇದ್ದುದ್ದರಿಂದ ಮಹೇಶ್ ಈಗ ರೋರಿಂಗ್ ಸ್ಟಾರ್ ಬೆನ್ನಿಂದೆ ಬಿದ್ದಿದ್ದಾರೆ. ಬರೀ ಹಿಂದೆ ಬಿದ್ದಿಲ್ಲ ಚಿತ್ರದ ಒಂದೆಳೆಯನ್ನು ರೋರಿಂಗ್ ಸ್ಟಾರ್​​ಗೆ ನರೇಟ್ ಮಾಡಿಯೂ ಆಗಿದೆ. ರೋರಿಂಗ್ ಸ್ಟಾರ್ ಇಂಪ್ರೆಸ್ ಆಗಿದ್ದೂ ಆಗಿದೆ.

ಮದಗಜ ಸ್ಟೋರಿ ರೋರಿಂಗ್ ಸ್ಟಾರ್​ ಮನಸ್ಸನ್ನ ಇಂಪ್ರೆಸ್ ಮಾಡಿದ್ದು, ಮಹೇಶ್ ಡೈರೆಕ್ಷನ್​​​​ನಲ್ಲಿ ಮದಗಜ ಆಗೋಕೆ ಗ್ರೀನ್ ಸಿಗ್ನಲ್​​ ಕೊಟ್ಟಾಗಿದೆ ಅನ್ನೋದು ಗಾಂದೀನಗರದ ತಾಜಾ ಸುದ್ದಿ. ಆದ್ರೆ ಅಫೀಶಿಯಲ್ ಆಗಿ ಎಲ್ಲೂ ಹೇಳಿಲ್ಲ. ಸದ್ಯ ಭರ್ಜರಿ ಚೇತನ್ ನಿರ್ದೇಶನದ ಭರಾಟೆ ಚಿತ್ರದಲ್ಲಿ ಶ್ರೀಮುರುಳಿ ಬ್ಯುಸಿಯಾಗಿದ್ದು, ಶ್ರೀಲೀಲಾ ಮುರುಳಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ..

ಇಷ್ಟೆಲ್ಲ ಆಗ್ತಿದ್ರು ನಿರ್ದೇಶಕ ಮಹೇಶ್ ಮಾತ್ರ ಗುಟ್ಟು ಬಿಟ್ಟು ಕೊಡ್ತಿಲ್ಲ.. ಮದಗಜದಲ್ಲಿ ಆಕ್ಷನ್ ಪ್ರಿನ್ಸ್ ಇರ್ತಾರಾ, ರೋರಿಂಗ್ ಸ್ಟಾರ್ ಇರ್ತಾರಾ ಅನ್ನೋದನ್ನ ಕನ್ಫರ್ಮ್ ಮಾಡ್ತಿಲ್ಲ..ಬಟ್ ಸ್ಟಾರ್ ಹೀರೋ ಇರೋದಂತೂ ಪಕ್ಕಾ ಅಂತ ಸೈಲೆಂಟ್ ಆಗ್ತಾರೆ..

ಒಟ್ನಲ್ಲಿ ಈ ಸುದ್ದಿಗೆ ಆದಷ್ಟು ಬೇಗ ನಿರ್ದೇಶಕರು ತೆರೆ ಎಳೆಯಲಿದ್ದು, ಇಬ್ಬರಲ್ಲಿ ಯಾರು ಮದಗಜ ಆದ್ರು ಅವ್ರ ಫ್ಯಾನ್ಸ್​ ಅಡ್ಡಾದಲ್ಲಿ ದೀಪಾವಳಿ ಅಂತೂ ಪಕ್ಕಾ. ಸೋ, ಲೆಟ್ಸ್ ವೈಟ್ ಎಂಡ್ ಸಿ.

ವರದಿ : ಭಾರತಿ ಜಾವಳ್ಳಿ, ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES