Top

ರಾಜೀನಾಮೆ ನೀಡುತ್ತಾರಾ ತೆನೆ-ಕೈ ಪಾಳಯದ 20 ಶಾಸಕರು..?

ರಾಜೀನಾಮೆ ನೀಡುತ್ತಾರಾ ತೆನೆ-ಕೈ ಪಾಳಯದ 20 ಶಾಸಕರು..?
X

ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟದ ದಿನಗಳು ಎದುರಾಗಿರುವ ಸಂದರ್ಭದಲ್ಲಿಯೇ ಸೋಮವಾರದಿಂದಲೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಚಟುವಟಿಕೆಗಳು ಆರಂಭವಾಗಲಿದೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಹಲವು ದಿನಗಳಿಂದ ಆಪರೇಷನ್ ಕಮಲ ನಡೆಯುತ್ತಿದ್ದು, ಕಾಂಗ್ರೆಸ್, ಜೆಡಿಎಸ್‌ನ ಹಲವರು ಬಿಜೆಪಿಗೆ ಜಂಪ್ ಆಗ್ತಾರೆ ಎಂಬ ಮಾತು ಕೇಳಿಬರುತ್ತಿತ್ತು.

ಅದರಂತೆಯೇ ಸೋಮವಾರ ತೆನೆ ಮತ್ತು ಕೈ ಪಾಳಯದ ಒಟ್ಟು 20 ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಬಿಜೆಪಿ ಸೇರಬೇಕೆನ್ನಲಿರುವ ಶಾಸಕರ ಜೊತೆ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಅವರ ನಿರೀಕ್ಷೆಯಂತೆ ಸೋಮವಾರದಿಂದ ಸಮ್ಮಿಶ್ರ ಸರ್ಕಾರ ಬೀಳಿಸುವ ಕಾರ್ಯ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಬಿಜೆಪಿ ಮೂಲಗಳ ಪ್ರಕಾರ ಸೋಮವಾರ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲಿದ್ದು, ಉಳಿದ 19 ಶಾಸಕರು ಮಂಗಳವಾರ ರಾಜೀನಾಮೆ ನೀಡಲಿದ್ದಾರೆ.

ಒಂದು ವೇಳೆ ವಿಧಾನಸಭಾಧ್ಯಕ್ಷರು ರಾಜೀನಾಮೆ ಅಂಗೀಕರಿಸದಿದ್ದರೆ, ಸಮ್ಮಿಶ್ರ ಸರ್ಕಾರದ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ರಾಜ್ಯಪಾಲರಿಗೂ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಲ್ಲ ಶಾಸಕರೂ ಅಂದೇ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪಕ್ಷಾಂತರ ಕಾಯ್ದೆಯ ತೂಗುಕತ್ತಿಯಿಂದಲೂ ಪಾರಾಗಲೂ ಕಾನೂನು ಸಲಹೆಯನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಬಿಜೆಪಿ ಲೆಕ್ಕಾಚಾರ ಪಟ್ಟಿಯಲ್ಲಿರುವ ಶಾಸಕರು

ಎಂಟಿಬಿ ನಾಗರಾಜ್- ಹೊಸಕೋಟೆ(ಕಾಂಗ್ರೆಸ್)

ಕೃಷ್ಣಾ ರೆಡ್ಡಿ- ಚಿಂತಾಮಣಿ(ಜೆಡಿಎಸ್)

ರಮೇಶ್ ಜಾರಕಿಹೊಳಿ- ಗೋಕಾಕ್(ಕಾಂಗ್ರೆಸ್)

ಮಹೇಶ್ ಕಮಟೊಳ್ಳಿ- ಅಥಣಿ(ಕಾಂಗ್ರೆಸ್)

ಬಸನಗೌಡ ದದ್ದಲ್- ರಾಯಚೂರು ಗ್ರಾಮಾಂತರ(ಕಾಂಗ್ರೆಸ್)

ಪ್ರತಾಪ್‌ಗೌಡ ಪಾಟೀಲ್- ಮಸ್ಕಿ(ಕಾಂಗ್ರೆಸ್)

ಆನಂದ್‌ ಸಿಂಗ್- ಹೊಸಪೇಟೆ(ಕಾಂಗ್ರೆಸ್)

ಜೆ.ಎನ್‌.ಗಣೇಶ್- ಕಂಪ್ಲಿ(ಕಾಂಗ್ರೆಸ್)

ನಾಗೇಂದ್ರ- ಬಳ್ಳಾರಿ ಗ್ರಾಂ.(ಕಾಂಗ್ರೆಸ್)

ಎಂ.ವೈ.ಪಾಟೀಲ್- ಅಫಜಲ್‌ಪುರ(ಕಾಂಗ್ರೆಸ್)

ಬಿ.ಸಿ.ಪಾಟೀಲ್- ಹಿರೆಕೇರೂರು(ಕಾಂಗ್ರೆಸ್)

ದೇವಾನಂದ ಚೌಹಾಣ್- ನಾಗಠಾಣ(ಜೆಡಿಎಸ್)

ಸುಬ್ಬಾರೆಡ್ಡಿ- ಬಾಗೇಪಲ್ಲಿ(ಕಾಂಗ್ರೆಸ್)

ವಿ.ಮುನಿಯಪ್ಪ- ಶಿಡ್ಲಘಟ್ಟ(ಕಾಂಗ್ರೆಸ್)

ನಂಜೇಗೌಡ- ಮಾಲೂರು(ಕಾಂಗ್ರೆಸ್)

ಅನಿಲ್ ಕುಮಾರ್- ಹೆಚ್.ಡಿ.ಕೋಟೆ(ಕಾಂಗ್ರೆಸ್)

ನಾರಾಯಣ್‌ರಾವ್- ಬಸವಕಲ್ಯಾಣ(ಕಾಂಗ್ರೆಸ್)

ಡಿ.ಎಸ್.ಹೂಲಗೇರಿ- ಲಿಂಗಸಗೂರು(ಕಾಂಗ್ರೆಸ್)

ಶ್ರೀಮಂತ ಪಾಟೀಲ್- ಕಾಗವಾಡ(ಜೆಡಿಎಸ್)

ಆರ್.ಶಂಕರ್- ರಾಣೆಬೆನ್ನೂರು(ಪಕ್ಷೇತರ)

ನಾಗೇಶ್- ಮುಳಬಾಗಿಲು(ಪಕ್ಷೇತರ)

Next Story

RELATED STORIES