Top

ಹೊಸ ಟ್ರೆಂಡ್ ಸೆಟ್ ಮಾಡಿದ ಮಾಸ್ಟರ್​ಪೀಸ್

ಹೊಸ ಟ್ರೆಂಡ್ ಸೆಟ್ ಮಾಡಿದ ಮಾಸ್ಟರ್​ಪೀಸ್
X

ರಾಕಿಂಗ್ ಸ್ಟಾರ್ ಸಿನಿಮಾಗಳಿಗೆ ಬರೀ ಸ್ಯಾಂಡಲ್​ವುಡ್​ನಲ್ಲಷ್ಟೇ ಅಲ್ಲ, ಬಾಲಿವುಡ್​ ಅಂಗಳದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್. ಬಹುತೇಕ ಯಶ್ ಸಿನಿಮಾಗಳು ಹಿಂದಿಗೆ ಡಬ್ ಆಗಿ, ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿವೆ. ಇದೀಗ ಆ ಕ್ರೇಜ್, ಮಾಸ್ಟರ್​ಪೀಸ್ ಹವಾನ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಯಶ್ ಸಿನಿಮಾಗಳು ಬರ್ತಿವೆ ಅಂದ್ರೆ ಗಾಂಧಿನಗರದಲ್ಲಿ ಅದರ ಕ್ರೇಜ್ ದುಪ್ಪಟ್ಟು ಆಗೋದ್ರಲ್ಲಿ ಡೌಟೇ ಇಲ್ಲ. ಅದ್ರಲ್ಲೂ ರಾಜಾಹುಲಿ ಸಿನಿಮಾ ನಂತ್ರ ಯಶ್ ಖದರ್ ಬದಲಾಗೋಯ್ತು. ಮಾಸ್ ಹೀರೋ ಆಗಿ ರಾಕಿಂಗ್ ಸ್ಟಾರ್ ಸೂಪರ್ ಸ್ಟಾರ್ ಆಗಿಬಿಟ್ರು. ರಾಮಾಚಾರಿಯಿಂದ ಯಶ್​ಗೆ ಸಿಕ್ಕ ಸ್ಟಾರ್ಡಮ್ ಅಷ್ಟಿಷ್ಟಲ್ಲ.

ಕನ್ನಡ ಚಿತ್ರರಂಗದ ಎಲ್ಲೆಗಳನ್ನ ಮೀರಿದಂತಹ ರಾಮಾಚಾರಿ, ಬಾಕ್ಸ್ ಆಫೀಸ್​ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯಿತು. ಅಲ್ಲಿಂದ ಯಶ್ ಹವಾ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಯ್ತು. ಅದ್ರಂತೆ ರಾಮಾಚಾರಿ ಕ್ರೇಜ್​ನಿಂದ ಸಿಕ್ಕಾಪಟ್ಟೆ ಹೈಪ್​ನಲ್ಲಿದ್ದ ಯಶ್​ಗೆ ಅದರ ಬೆನ್ನಲ್ಲೇ ಬಂದಂತಹ ಮಾಸ್ಟರ್​ಪೀಸ್ ಕೂಡ ಎಲ್ಲಿಲ್ಲದ ಸೌಂಡ್ ಮಾಡಿತು.

ರಾಕಿಂಗ್ ಸ್ಟಾರ್ ಯಶ್ ಗೆಳೆಯ ಮಂಜು ಮಾಂಡವ್ಯ ಆ್ಯಕ್ಷನ್ ಕಟ್​ನಲ್ಲಿ ತಯಾರಾದ ಈ ಸಿನಿಮಾ 2015ರ ಒನ್ ಆಫ್ ದ ಬಿಗ್ಗೆಸ್ಟ್ ಕಮರ್ಷಿಯಲ್ ಹಿಟ್. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಬಂದ್ರೂ ಸಹ, ಬಾಕ್ಸ್ ಅಫೀಸ್​ನಲ್ಲಿ ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್ ಮಾಡೋ ಮೂಲಕ ನಿರ್ಮಾಪಕರ ಜೇಬು ತುಂಬಿಸಿತ್ತು.

ಈ ಸಿನಿಮಾ ಈಗ ಯೂಟ್ಯೂಬ್​ಗೆ ಲಗ್ಗೆ ಇಟ್ಟಿದೆ. ಅಂತರ್ಜಾಲಕ್ಕೆ ಬರ್ತಿದ್ದ ಎರಡೇ ದಿನದಲ್ಲಿ ಟ್ರೆಂಡಿಂಗ್​ನಲ್ಲಿದೆ. ಸೆಕೆಂಡ್ ಟ್ರೆಂಡಿಂಗ್​ನಲ್ಲಿ ಸೌಂಡ್ ಮಾಡ್ತಿರೋ ಮಾಸ್ಟರ್ ಪೀಸ್ ಮತ್ತೊಮ್ಮೆ ಯಶ್ ಕ್ರೇಜ್​ ಯಾವ ರೀತಿ ಇದೆ ಅನ್ನೋದನ್ನ ಸಾರಿ ಹೇಳಿದೆ.

ಯುವ ಪಾತ್ರದಲ್ಲಿ ಯಶ್ ಇಂಟೆನ್ಸ್ ಌಕ್ಟಿಂಗ್ ಮೋಡಿ ಮಾಡಿತ್ತು. ಸುಹಾಸಿನಿ ಮಗನ ಪಾತ್ರದಲ್ಲಿ ಯಶ್​ ಸ್ಟೈಲು ಮ್ಯಾನರಿಸಂ ಧೂಳೆಬ್ಬಿಸಿತ್ತು. ಇನ್ನು ಚಿಕ್ಕಣ್ಣ ಕಾಮಿಡಿ ಕಚಗುಳಿ ಚಿತ್ರದ ಮತ್ತೊಂದು ಹೈಲೆಟ್.

ಮಾಸ್ಟರ್​ಪೀಸ್​ಗೆ ಜೋಡಿಯಾಗಿ ಶಾನ್ವಿ ಶ್ರೀವಾತ್ಸವ್ ಗ್ಲಾಮರ್ ಟಚ್ ಕೊಟ್ಟಿದ್ರು. ಇನ್ನು ವಿ ಹರಿಕೃಷ್ಣ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರದ ಮತ್ತೊಂದು ಹೈಲೆಟ್ ಅನಿಸಿತ್ತು. ಅದ್ರಲ್ಲೂ ಯಶ್ ಹಾಡಿದ ಅಣ್ಣಂಗೆ ಲವ್ ಆಗಿದೆ ಹಾಡು ಎವರ್ ಗ್ರೀನ್ ಹಾಡುಗಳ ಪಟ್ಟಿ ಸೇರಿದೆ.

ಚಿತ್ರದ ಪಾತ್ರಗಳು, ಹಾಡುಗಳು, ಡೈಲಾಗ್ಸ್ ಹೀಗೆ ಪ್ರತಿಯೊಂದು ಌಂಗಲ್​ನಿಂದ ಸಿನಿಮಾ 2015ರ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತ್ತು. ಇದೀಗ ಇದು ಯೂಟ್ಯೂಬ್ ಟ್ರೆಂಡಿಂಗ್​ಗೆ ಎಂಟ್ರಿ ಕೊಟ್ಟು ಯಶ್ ಫ್ಯಾನ್ಸ್ ದಿಲ್ ಖುಷ್ ಆಗುವಂತೆ ಮಾಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES