Top

ಸ್ಟಾರ್‌ನಟಿ ಸಮಂತಾಳನ್ನ ಮೀರಿಸಿದ್ಲಾ ಕನ್ನಡದ ಬೆಡಗಿ..?

ಸ್ಟಾರ್‌ನಟಿ ಸಮಂತಾಳನ್ನ ಮೀರಿಸಿದ್ಲಾ ಕನ್ನಡದ ಬೆಡಗಿ..?
X

ಸಮಂತಾ ಅಕ್ಕಿನೇನಿ.. ದಕ್ಷಿಣ ಭಾರತದ ಮೋಸ್ಟ್ ಡಿಮ್ಯಾಂಡಿಂಗ್ ನಟೀಮಣಿ. ಪ್ರತಿಯೊಬ್ಬ ಸ್ಟಾರ್ ಸಿನಿಮಾಗೂ ಸಮಂತಾ ಡೇಟ್ಸ್ ಬೇಕೇ ಬೇಕು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿದ್ದ ಗ್ಲಾಮರ್ ಡಾಲ್​ಗೆ ಈಗ ಭಯ ಶುರುವಾಗಿದೆ. ಆಕೆಯನ್ನ ಮೀರಿಸೋ ಅಂತಹ ಮತ್ತೊಬ್ಬ ಗ್ಲಾಮರ್ ಡಾಲ್ ಸಿನಿ ಬಜಾರ್​ಗೆ ಕಾಲಿಟ್ಟಿದ್ದಾರೆ.

ಏ ಮಾಯ ಚೇಸಾವೆ ಚಿತ್ರದಿಂದ ಬಣ್ಣದಲೋಕಕ್ಕೆ ಕಾಲಿಟ್ಟ ಈ ಚೆಲುವೆ, ಚೊಚ್ಚಲ ಚಿತ್ರದಲ್ಲೇ ಮಾಯೆ ಮಾಡಿಬಿಟ್ಟರು. ಅದಾದ ಬಳಿಕ ಸಾಲು ಸಾಲು ಸ್ಟಾರ್ ಮೂವಿಗಳಲ್ಲಿ ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ಎಲ್ಲಿಲ್ಲದ ಕ್ರೇಜ್ ಹುಟ್ಟಿಸಿಬಿಟ್ಟರು. ಆಕೆಯ ಬ್ಯೂಟಿ, ನಕ್ಕಾಗ ಬೀಳೋ ಡಿಂಪಲ್, ಹಾವ-ಭಾವ ಹೀಗೆ ಎಲ್ಲವೂ ಸ್ಟಾರ್ ನಟಿಯನ್ನಾಗಿಸಿಬಿಡ್ತು.

ಆದ್ರೆ ಯಾವಾಗ ಅಕ್ಕಿನೇನಿ ನಾಗಚೈತನ್ಯ ಜೊತೆ ಮದ್ವೆ ಆಗಿ, ಅಕ್ಕಿನೇನಿ ಕುಟುಂಬದ ಸೊಸೆಯಾದ್ರೋ, ಅಂದಿನಿಂದ ಸಮಂತಾ ಸ್ಟಾರ್ಡಮ್​ಗೆ ಪೆಟ್ಟು ಬೀಳೋಕೆ ಶುರು ಆಯ್ತು.

ಇದರ ಮಧ್ಯೆ ತೆರೆಕಂಡ ರಂಗಸ್ಥಳಂ ಸಿನಿಮಾ ಮಾಡಿದ ಮೋಡಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾಗೆ ಜೋಡಿಯಾಗಿ ಡೀ ಗ್ಲಾಮರ್ ರೋಲ್​ನಲ್ಲಿ ಎಲ್ಲರ ಹುಬ್ಬೇರಿಸಿದ್ರು.

ಸಮಂತಾಗೆ ಹೊಸ ಸಂಕಷ್ಟ ಎದುರಾಗಿದೆ. ಸಮಂತಾಗೆ ಕಾಂಪಿಟಿಷನ್ ಕೊಡೋ ಅಂತಹ ಮತ್ತೊಬ್ಬ ಗ್ಲಾಮರ್ ಚೆಲುವೆ ಟಾಲಿವುಡ್​ನಲ್ಲಿ ಹೊಸ ಟ್ರೆಂಡ್ ಸೆಟ್ ಮಾಡ್ತಿದ್ದಾರೆ. ಶಿ ಈಸ್ ನನ್ ಅದರ್ ದ್ಯಾನ್ ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ.

ಚಲೋ ಚಿತ್ರದಿಂದ ಕರ್ನಾಟದಿಂದ ಟಲಿವುಡ್​ಗೆ ಚಲೋ ಅಂದ ರಶ್ಮಿಕಾ, ಅಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಿನಿಪ್ರಿಯರನ್ನ ಸಿಕ್ಕಾಪಟ್ಟೆ ಎಂಟ್ರಟೈನ್ ಮಾಡ್ತಿದ್ದಾರೆ. ಅದ್ರಲ್ಲೂ ಗೀತ ಗೋವಿಂದಂ ಸಿನಿಮಾದಲ್ಲಿನ ರಶ್ಮಿಕಾ ನಟನೆ ಎಲ್ಲರನ್ನ ಅಕ್ಷರಶಃ ಕ್ಲೀನ್ ಬೋಲ್ಡ್ ಮಾಡಿಬಿಟ್ಟಿದೆ.

ಅಂದಹಾಗೆ ಗೀತ ಗೋವಿಂದಂ ನಂತ್ರ ನಾಗಾರ್ಜುನ್- ನಾನಿ ಜೋಡಿಯ ಮಲ್ಟಿಸ್ಟಾರ್ ಸಿನಿಮಾ ದೇವದಾಸ್​ನಲ್ಲಿ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಅಷ್ಟೇ ಯಾಕೆ ಮತ್ತದೇ ಗೀತಗೋವಿಂದಂ ಜೋಡಿ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.

ಸಮಂತಾಗೆ ಮದ್ವೆ ಆಗಿದ್ದು ದೊಡ್ಡ ಹೊಡೆತ ಬಿತ್ತು. ಅದ್ರ ಜೊತೆಗೆ ಇತ್ತೀಚೆಗೆ ತೆರೆಕಂಡ ಯೂಟರ್ನ್​ ಸಿನಿಮಾ ಕೂಡ ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡಿತು. ಹಾಗಾಗಿ ಸಮಂತಾ ಕ್ರೇಜ್ ದಿನದಿಂದ ದಿನಕ್ಕೆ ಟಾಲಿವುಡ್​ನಲ್ಲಿ ಕುಗ್ಗುತ್ತಾ ಹೋಗ್ತಿದೆ.

ರಶ್ಮಿಕಾ ಮಂದಣ್ಣ ಕ್ರಿಯೇಟ್ ಮಾಡಿರೋ ಹವಾ ನೊಡ್ತಿದ್ರೆ ಪರ್ಮನೆಂಟ್ ಆಗಿ ತೆಲುಗು ಚಿತ್ರರಂಗದಲ್ಲೇ ಸೆಟಲ್ ಆಗೋ ಸೂಚನೆ ಕೊಡ್ತಿದ್ದಾರೆ. ಗೀತ ಗೋವಿಂದಂ ಸಿನಿಮಾನ ನಿರ್ಮಾಣ ಮಾಡಿದ್ದ ಗೀತಾ ಆರ್ಟ್ಸ್​ನ ಅಲ್ಲು ಅರವಿಂದ್, ರಶ್ಮಿಕಾ ಆ್ಯಕ್ಟಿಂಗ್​ ನೋಡಿ ಫಿದಾ ಆಗಿದ್ದಾರೆ. ಹಾಗಾಗಿ ಅವ್ರ ಮುಂದಿನ ಸಿನಿಮಾದಲ್ಲಿ ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಆಫರ್ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ನಮ್ಮ ಕನ್ನಡದ ಕುವರಿ ಈ ರೀತಿ ಟಾಲಿವುಡ್​ನ ಸ್ಟಾರ್ ನಟೀಮಣಿಯನ್ನ ಸೈಡ್ ಹೊಡೆದಿರೋದು ನಿಜಕ್ಕೂ ಹೆಮ್ಮೆಯ ವಿಚಾರ. ಇನ್ನು ರಶ್ಮಿಕಾ ಸ್ಟಾರ್ಡಮ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಆದಷ್ಟು ಬೇಗ ಸೌತ್ ಸ್ಟಾರ್ ನಟೀಮಣಿಯಾಗಿ ಮಿಂಚಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES