Top

ಪರಿಸರ ಕಾಳಜಿಗಾಗಿ ತಲೆ ಎತ್ತಿದ ಪಾನಿಪೂರಿ ಗಣೇಶ!

ಪರಿಸರ ಕಾಳಜಿಗಾಗಿ ತಲೆ ಎತ್ತಿದ ಪಾನಿಪೂರಿ ಗಣೇಶ!
X

ದೇಶದೆಲ್ಲೆಡೆ ಪರಿಸರ ಸ್ನೇಹಿ ಗಣೇಶನಿಗಾಗಿ ಒತ್ತಡ ಕೇಳಿ ಬರುತ್ತಿರುವ ನಡುವೆ ಪುಣೆಯಲ್ಲಿ ಈ ಬಾರಿಯ ಗಣೇಶ ಚತುರ್ಥಿ ಅಂಗವಾಗಿ 10 ಸಾವಿರ ಪಾನಿಪೂರಿ ಬಳಸಿ ಗಣೇಶನ ಮೂರ್ತಿ ನಿರ್ಮಿಸಲಾಗಿದೆ.

2011ರಲ್ಲಿ ಬೇಲ್ ಗಣೇಶನ ಮೂರ್ತಿ ನಿರ್ಮಿಸಿ ಗಮನ ಸೆಳೆದಿದ್ದ ಪಾನಿಪೂರಿಯ ಅಂಗಡಿಯ ಮಾಲೀಕ ಈ ಬಾರಿ 10 ಸಾವಿರ ಪಾನಿಪೂರಿಗೆ ಬಳಸುವ ಪೂರಿ ಹಾಗೂ ಬಂಬೂಗಳನ್ನು ಬಳಸಿ ನಿರ್ಮಿಸಿದ ಗಣೇಶನನ್ನು ಕೂರಿಸಿದ್ದಾರೆ.

ಬೇಲ್ ಗಣೇಶ ನಂತರ ಸುಮ್ಮನಾಗಿದ್ದೆ. ಆದರೆ ಕೆಲವರು ಬಿಸ್ಕೆಟ್ ಗಣೇಶನನ್ನು ನಿರ್ಮಿಸಿದ್ದನ್ನು ನೋಡಿದೆ. ಪೂಜೆ ಮುಗಿದ ನಂತರ ಹಾಲಿನಲ್ಲಿ ಗಣೇಶನನ್ನು ವಿಸರ್ಜಿಸಿ ಪ್ರಸಾದ ರೂಪದಲ್ಲಿ ಸೇವಿಸುತ್ತಿದ್ದರು.

ಇದರಿಂದ ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಈ ಬಾರಿ ಪಾನಿಪೂರಿ ಬಳಸಿ ಗಣೇಶನನ್ನು ನಿರ್ಮಿಸಿದೆ ಎಂದು ಅಂಗಡಿಯ ಮಾಲೀಕ ರಮೇಶ್ ಗುಡ್ಮೆವರ್ ತಿಳಿಸಿದ್ದಾರೆ.

ಗಣೇಶನ ಮೂರ್ತಿಯ ವಿನ್ಯಾಸ ಮಾಡಿದ ಕಲಾವಿದ ಪ್ರಶಾಂತ್ ಸಲುಂಕೆ, 10 ಸಾವಿರ ಪೂರಿ ಬಳಸಿದ್ದೇನೆ. ಈ ಗಣೇಶ ನಿರ್ಮಿಸಲು ನನಗೆ 100 ಗಂಟೆ ಬೇಕಾಯಿತು. ಒಂದು ಪೂರಿಯ ಮೇಲೆ ಮತ್ತೊಂದು ಇರಿಸಿದಾಗ ಯಾವುದೇ ಹಾನಿ ಆಗದಂತೆ ನೋಡಿಕೊಂಡಿದ್ದೇನೆ. ಇದು ಸಂಪೂರ್ಣ ಪರಿಸರ ಸ್ನೇಹಿ ಗಣೇಶ ಎಂದರು.

Next Story

RELATED STORIES