Top

ಪತ್ನಿಯನ್ಜು ಕೂಸುಮರಿ ಮಾಡಿದ ಭೂತಾನ್ ಪ್ರಧಾನಿ! ಯಾಕೆ ಗೊತ್ತಾ?

ಪತ್ನಿಯನ್ಜು ಕೂಸುಮರಿ ಮಾಡಿದ ಭೂತಾನ್ ಪ್ರಧಾನಿ! ಯಾಕೆ ಗೊತ್ತಾ?
X

ಮಕ್ಕಳನ್ನು ಕುಸೂಮರಿ ಮಾಡಿಕೊಂಡು ಆಡಿಸುವುದು ಸಾಮಾನ್ಯ. ಆದರೆ ಯೌವನದಲ್ಲಿ ಯುವತಿಯನ್ನು ಹೀಗೆ ಎತ್ತಿಕೊಂಡರೆ ಪ್ರೇಮ ಅಂತಾರೆ. ಅದೇ ಮಧ್ಯವಯಸ್ಸು ಮೀರಿದರೆ ಅದಕ್ಕೆ ಬೇರೆಯದೇ ಕಾರಣಗಳು ಇರುತ್ತವೆ. ಆದರೆ ಭೂತಾನ್ ಮಾಜಿ ಪ್ರಧಾನಿ ತನ್ನ ಪತ್ನಿಯನ್ನು ಎತ್ತಿಕೊಂಡು ಕೂಸುಮರಿ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು, 52 ವರ್ಷದ ಭೂತಾನ್ ಪ್ರಧಾನಿ ತ್ಸೆರಿಂಗ್ ಟೊಬ್ಗೆ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಮಳೆ ಬಂದು ಕೆಸರುಗದ್ದೆಯಾಗಿರುವ ಮಾರ್ಗದಲ್ಲಿ ಪತ್ನಿಯ ಕಾಲು ಎಲ್ಲಿ ಕೊಳೆಯಾಗುತ್ತದೋ ಎಂದು ಪತ್ನಿಯನ್ನು ಹೆಗಲ ಮೇಲೆ ಕೂಸುಮರಿ ಮಾಡಿಕೊಂಡು ಹೋಗಿದ್ದಾರೆ.

ಈ ಚಿತ್ರವನ್ನು ಸ್ವತಃ ಟೊಬ್ಗೆ ಟ್ವೀಟರ್​ನಲ್ಲಿ ಹಾಕಿಕೊಂಡಿದ್ದು, ನಾನೇನು ವಾಲ್ಟರ್ ರೇಲಿಗ್ ಅವರಷ್ಟು ಶಕ್ತಿವಂತನಲ್ಲ. ತನ್ನ ಪ್ರೀತಿಪಾತ್ರಗಳ ಕಾಲ ಕೊಳೆಯಾಗದಿರಲು ಗಂಡನಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನಷ್ಟೇ ಎಂದರು.

Next Story

RELATED STORIES