Top

ಏಷ್ಯಾಕಪ್​: ಲಂಕೆಗೆ ಅಂಕೆ ಹಾಕಿದ ಬಾಂಗ್ಲಾ ಹುಲಿಗಳು

ಏಷ್ಯಾಕಪ್​: ಲಂಕೆಗೆ ಅಂಕೆ ಹಾಕಿದ ಬಾಂಗ್ಲಾ ಹುಲಿಗಳು
X

ವಿಕೆಟ್ ಕೀಪರ್ ಮುಷ್ಫಿಕರ್ ರಹೀಂ ಸಿಡಿಸಿದ ಶತಕದ ನೆರವಿನಿಂದ ಬಾಂಗ್ಲಾದೇಶ 137 ರನ್​ಗಳ ಭಾರೀ ಅಂತರದಿಂದ ಶ್ರೀಲಂಕಾ ತಂಡವನ್ನು ಬಗ್ಗುಬಡಿದು ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆಯಿತು.

ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 49.3 ಓವರ್ ಗಳಲ್ಲಿ 261 ರನ್ ಗಳಿಗೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿ ಬೆಂಬತ್ತಿದ ಶ್ರೀಲಂಕಾ ತಂಡ 35.2 ಓವರ್ ಗಳಲ್ಲಿ 124 ರನ್ ಗಳಿಗೆ ಆಲೌಟಾಯಿತು.

ಲಂಕಾ ಒಂದು ಹಂತದಲ್ಲಿ 96 ರನ್​ಗೆ 8 ವಿಕೆಟ್ ಕಳೆದುಕೊಂಡು ನೂರರೊಳಗೆ ಆಲೌಟಾಗುವ ಭೀತಿಗೆ ಸಿಲುಕಿತ್ತು. ಆದರೆ ದಿಲ್ವಾರ್ ಪೆರೆರಾ (29) ಮತ್ತು ಲಕ್ಷ್ಮಲ್ (20) 9ನೇ ವಿಕೆಟ್​ಗೆ 24 ರನ್ ಜೊತೆಯಾಟ ನಿಭಾಯಿಸಿ ಹೋರಾಟ ನಡೆಸಿದರೂ ಹೀನಾಯ ಸೋಲು ತಪ್ಪಿಸಲು ಆಗಲಿಲ್ಲ.

ಬಾಂಗ್ಲಾ ಕೂಡ 3 ರನ್​ಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಮುಷ್ಫಿಕರ್ ರಹೀಂ ಶತಕ ಸಿಡಿಸಿದ್ದೂ ಅಲ್ಲದೇ ಮೊಹಮದ್ ಮಿಥುನ್ (63) ಜೊತೆ 3ನೇ ವಿಕೆಟ್​ಗೆ 131 ರನ್ ಪೇರಿಸಿ ತಂಡವನ್ನು ಆಧರಿಸಿದರು. ಮುಷ್ಫಿಕರ್ 150 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 144 ರನ್ ಸಿಡಿಸಿದರು. ಇದು ಅವರ ವೃತ್ತಿಜೀವನದ 6ನೇ ಶತಕವಾಗಿದೆ.

  • ಸಂಕ್ಷಿಪ್ತ ಸ್ಕೋರ್
  • ಬಾಂಗ್ಲಾ49.3 ಓವರ್ 261 (ಮುಷ್ಫಿಕರ್ ರಹೀಂ 144, ಮಿಥುನ್ 63, ಮಾಲಿಂಗ 23/4).
  • ಇಂಗ್ಲೆಂಡ್ 35.2 ಓವರ್ 124 (ದಿಲ್ವಾರ್ 29, ತರಂಗ 27, ಲಕ್ಷ್ಮಲ್ 20, ಮೊರ್ತಾಜಾ 25/2, ರೆಹಮಾನ್ 20/2, ಮಿರಜ್ 21/2 ).

Next Story

RELATED STORIES