Top

ಒಂದೇ ಕೈಯಲ್ಲಿ ಬ್ಯಾಟಿಂಗ್​ ಮಾಡಿದ ಬಾಂಗ್ಲಾ ಬ್ಯಾಟ್ಸ್​ಮನ್!

ಒಂದೇ ಕೈಯಲ್ಲಿ ಬ್ಯಾಟಿಂಗ್​ ಮಾಡಿದ ಬಾಂಗ್ಲಾ ಬ್ಯಾಟ್ಸ್​ಮನ್!
X

ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್​ಮನ್ ತಮೀಮ್ ಇಕ್ಬಾಲ್ ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದರೂ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ತಮೀಮ್​ ಇಕ್ಬಾಲ್ ಪಂದ್ಯದ ಎರಡನೇ ಓವರ್​ನಲ್ಲಿಯೇ ಎಡ ಮೊಣಕೈಗೆ ಚೆಂಡು ಬಡಿದಿದ್ದರಿಂದ ಗಾಯಗೊಂಡು ಪೆವಿಲಿಯನ್​ಗೆ ಮರಳಿದರು. ಆದರೆ ತಂಡ 47ನೇ ಓವರ್​ನಲ್ಲಿ 9ನೇ ವಿಕೆಟ್ ಪತನಗೊಂಡಾಗ ಮತ್ತೆ ಕ್ರೀಸ್​ಗೆ ಆಗಮಿಸಿ ಅಚ್ಚರಿ ಮೂಡಿಸಿದರು.

ಶತಕ ಬಾರಿಸಿ ಕ್ರೀಸ್​ನಲ್ಲಿದ್ದ ಮುಷ್ಫಿಕರ್ ರಹೀಂ ಜೊತೆಗೂಡಿದ ತಮೀಮ್ ಇಕ್ಬಾಲ್ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಸುಮಾರು ಎರಡು ಓವರ್ ಗಳ ಕಾಲ ಆಡಿದರು. ತಂಡ ಸಂಕಷ್ಟದಲ್ಲಿದ್ದಾಗ ಗಾಯದ ನೋವಿನ ನಡುವೆಯೂ ಆಡಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಷ್ಫಿಕರ್ ರಹೀಂ ಅವರ ಜೀವನಶ್ರೇಷ್ಠ 144 ರನ್ ಸಹಾಯದಿಂದ ಬಾಂಗ್ಲಾದೇಶ 49.5 ಓವರ್ ಗಳಲ್ಲಿ ಆಲೌಟಾದರೂ ಶ್ರೀಲಂಕಾಗೆ 261 ರನ್ ಗುರಿ ಒಡ್ಡುವಲ್ಲಿ ಯಶಸ್ವಿಯಾಯಿತು. ಸಂಘಟಿತ ದಾಳಿ ನಡೆಸಿದ ಬಾಂಗ್ಲಾ ಬೌಲರ್ ಗಳು ಶ್ರೀಲಂಕಾ ತಂಡವನ್ನು 35.2 ಓವರ್ ಗಳಲ್ಲಿ 124 ರನ್​ಗೆ ಆಲೌಟ್ ಮಾಡಿ 137 ರನ್​ಗಳ ಜಯಭೇರಿ ಬಾರಿಸಿತು. ಈ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಗೆಲುವಿನ ಆರಂಭ ಪಡೆಯಿತು.

Next Story

RELATED STORIES